ಕಾಣಿಯೂರು: ಮುರುಳ್ಯ ಗ್ರಾಮ ಪಂಚಾಯಿತಿಯ ಬೇಸಗೆ ಶಿಬಿರವು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.
ಶಿಬಿರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ ಉದ್ಘಾಟಿಸಿದ್ದು, ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಕ್ರೀಯಾಶೀಲ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಗ್ರಾಮ ಪಂಚಾಯಿತಿಯ ಅಮೃತ ಸರೋವರ ಪೂದೆಕೆರೆ, ಸಂಜೀವಿನಿ ಸದಸ್ಯೆಯರ ಹೈನುಗಾರಿಕೆ, ಮಲ್ಲಿಗೆ ಕೃಷಿ ಹಾಗೂ ವಿಶೇಷ ಚೇತನ ನವೀನ ಕಳತ್ತಜೆ ಅವರ ಜೇನುಕೃಷಿ ಮತ್ತಿತರ ಸ್ಥಳೀಯ ಕೃಷಿ ಉದ್ಯಮಗಳ ವೀಕ್ಷಣೆಗೆ ಹೊರಸಂಚಾರ ಚಟುವಟಿಕೆಯನ್ನು ನಡೆಸಲಾಯಿತು.
ಶಿಬಿರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದು, ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ಬೆಂಗಳೂರಿನ ಚೈ ಲ್ಡ್ ರೈಟ್ ಟ್ರಸ್ಟಿನ ಯೋಜನಾ ಸಹಾಯಕ ಕೌಶಿಕ್, ಫೀಲ್ಡ್ ಫೆಸಿಲಿಟೇಟರ್ ದಿವ್ಯ, ವರದಿಗಾರ್ತಿ ಹರಿಣಿ ಸಂವಾದ ನಡೆಸಿದರು.
ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವನಿತಾ ಸುವರ್ಣ, ಸದಸ್ಯರಾದ ಕರುಣಾಕರ ಗೌಡ ಹುದೇರಿ, ಮೋನಪ್ಪ ಗೌಡ, ಸುಂದರ ಗೌಡ ಶೇರ, ಶೀಲಾವತಿ ಗೋಳ್ತಿಲ, ಪುಷ್ಪಾವತಿ ಕುಕ್ಕಟ್ಟೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ರೈ, ಕಾರ್ಯದರ್ಶಿಸೀತಾರಾಮ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸದಾನಂದ ಶಿಬಿರ ಸಂಘಟಿಸಿದರು.