ಕಾಡಾನೆ ದಾಳಿ: ಮೂವರು ಇಟಿಎಫ್ ಸಿಬ್ಬಂದಿಗೆ ಗಾಯ

ಹಾಸನ: ಇಟಿಎಫ್‌ನ ಮೂವರು ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಬೇಲೂರಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಾಯಾಳುಗಳನ್ನು ರಮೇಶ್, ವಿಶ್ವ, ಜೀವನ್ ಎಂದು ಗುರುತಿಸಲಾಗಿದೆ. ಅದರಲ್ಲಿ ರಮೇಶ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ‌. ಗ್ರಾಮದ ಹಾಸ್ಟೆಲ್ ಹಿಂಭಾಗದಲ್ಲಿ ಸಿಬ್ಬಂದಿ ಮೇಲೆ ಆನೆ ದಾಳಿ ನಡೆದಿರುವುದಾಗಿದೆ.

ಕಾಡಾನೆಗಳ ಹೆಜ್ಜೆಗುರುತು ಹಿಂಬಾಲಿಸಿಕೊಂಡು ಈ ಸಿಬ್ಬಂದಿ ಮುನ್ನಡೆಯುತ್ತಿದ್ದರು. ಈ ಸಮಯದಲ್ಲಿ ಇವರ ಮೇಲೆ ಏಕಾಏಕಿ ಆನೆ ದಾಳಿ ನಡೆದಿರುವುದಾಗಿದೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ.























































 
 

error: Content is protected !!
Scroll to Top