ಪುತ್ತೂರು

ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ : ಮುಳಿಯ’ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಪುತ್ತೂರಿನ ಕೋರ್ಟ್ ರಸ್ತೆಯ ಶೋರೂಮ್ ನಲ್ಲಿ ಚಿನ್ನಾಭರಣಗಳ ಜತೆಗೆ ಗ್ರಾಹಕರಿಗೆ ಅತಿ ಅಗತ್ಯವಾಗಿರುವ ಉನ್ನತ ಶ್ರೇಣಿಯ ಬ್ರಾಂಡ್‌ಗಳ ವಾಚ್‌ಗಳು ಒಂದೇ ಸೂರಿನಡಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ನೂತನ ಮುಳಿಯ’ಸ್ ಟೈಮ್ ರೋನ್ ವಾಚ್ ಕೌಂಟರ್‌ ಶುಭಾರಂಭಗೊಂಡಿತು. ಸಮಾರಂಭದ ಮುಖ್ಯ ಅತಿಥಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಮುಳಿಯ ಚಿನ್ನಾಭರಣ ಮಳಿಗೆಯು ನಮ್ಮೆಲ್ಲರ ಹೆಮ್ಮೆಯ ಬ್ರಾಂಡ್ ಆಗಿದ್ದು, […]

ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್‌ನ ಪುತ್ತೂರು ಶೋರೂಮ್ : ಮುಳಿಯ’ಸ್ ಟೈಮ್ ನ್ ವಾಚ್ ಕೌಂಟರ್ ಆರಂಭ Read More »

ಅಕ್ರಮ ಸಕ್ರಮ ಫಲಾನುಭವಿಗಳಿಂದ ಲಂಚ ಆರೋಪ: ಅಶೋಕ್ ರೈ ಆರೋಪಕ್ಕೆ ‌ಮಠಂದೂರು ತಿರುಗೇಟು

ಪುತ್ತೂರು: ಅಕ್ರಮ ಸಕ್ರಮ ಫಲಾನುಭವಿಗಳಿಂದ ಮಾಜಿ ಶಾಸಕರೊಬ್ಬರು ಲಂಚ ಪಡೆದಿದ್ದಾರೆ ಎನ್ನುವ ಶಾಸಕ ಅಶೋಕ್ ರೈ ಅವರ ಆರೋಪಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಶಾಸಕರೊಬ್ಬರು 45 ಜನರಿಂದ ತಲಾ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಶಾಸಕರು ಹಾಗೂ ಅಧ್ಯಾಪಕರೊಬ್ಬರ ಪುತ್ರ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಆ ಮಾಜಿ ಶಾಸಕ ಯಾರು ಮತ್ತು ಲಂಚ ನೀಡಿದ ಆ 45 ಜನರು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು

ಅಕ್ರಮ ಸಕ್ರಮ ಫಲಾನುಭವಿಗಳಿಂದ ಲಂಚ ಆರೋಪ: ಅಶೋಕ್ ರೈ ಆರೋಪಕ್ಕೆ ‌ಮಠಂದೂರು ತಿರುಗೇಟು Read More »

ಪುತ್ತೂರು : ವಿದ್ಯುತ್‌ ಶಾಕ್‌ ಹೊಡೆದು ಯುವಕ ಮೃತ್ಯು

ಪುತ್ತೂರು : ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬೇಲೂರು ಮೂಲದ ಯುವಕನೋರ್ವಮೃತಪಟ್ಟ ಘಟನೆ ಮೇ 24ರಂದು ರಾತ್ರಿ ಸಂಭವಿಸಿದೆ. ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಮೃತಪಟ್ಟ ಯುವಕ. ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ನಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್‌ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ.

ಪುತ್ತೂರು : ವಿದ್ಯುತ್‌ ಶಾಕ್‌ ಹೊಡೆದು ಯುವಕ ಮೃತ್ಯು Read More »

ಡಾಕ್ಟರ್ ಮನೆಯಲ್ಲಿ ನಗದು ಕದ್ದ ‌ಕಳ್ಳ ಪೊಲೀಸರ ಬಲೆಗೆ

ಪುತ್ತೂರು: ಡಾಕ್ಟರ್ ಒಬ್ಬರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಬಪ್ಪಳಿಗೆಯ ಸಿಂಗಾಣಿ ನಿವಾಸಿ ಸುರೇಶ್(47) ಎಂದು ಗುರುತಿಸಲಾಗಿದೆ. ಸುರೇಶ್ ಉರ್ಲಾಂಡಿಯ ಸುಶ್ರುತ ಆಸ್ಪತ್ರೆಯ ಸಮೀಪದ ಡಾ. ವೆಂಕಟ್ರಮಣ ಭಟ್ ಅವರ ಮನೆಯ ಹೆಂಚು ಜಾರಿಸಿ, ಮನೆಯೊಳಗೆ ನುಗ್ಗಿ ನಗದು ಕಳ್ಳತನ ಮಾಡಿದ್ದ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆತನನ್ನು ಬಂಧಿಸಿರುವುದಾಗಿದೆ. ಸಿಸಿ ಕೆಮರಾ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ಸುಳಿವು ಪತ್ತೆ ಮಾಡಿ, ಆತನನ್ನು ಬಂಧಿಸಿರುವುದಾಗಿದೆ.

ಡಾಕ್ಟರ್ ಮನೆಯಲ್ಲಿ ನಗದು ಕದ್ದ ‌ಕಳ್ಳ ಪೊಲೀಸರ ಬಲೆಗೆ Read More »

ಮುಂಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕೈಯೂರಿನ ಯುವಕ

ಪುತ್ತೂರು: ಕೆಯ್ಯೂರು ನಿವಾಸಿ ಯುವಕನೊಬ್ಬ ಮುಂಬೈ‌ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತರನ್ನು ‌ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಅವರು ಉರ್ಲ ಎಂಬಲ್ಲಿ ಹೊಟೇಲ್ ಉದ್ಯೋಗಿಯಾಗಿ, ಅಲ್ಲೇ‌‌ ವಾಸಿಸುತ್ತಿದ್ದರು. ಮೇ. 21 ರಂದು ಅವರು ತಮ್ಮ ರೂಮ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಕಾರ್ತಿಕ್ ಶವವನ್ನು ಹುಟ್ಟೂರಾದ ಕೈಯೂರಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೃತರು ‌ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಮುಂಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕೈಯೂರಿನ ಯುವಕ Read More »

ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ

ಭಾರತದ 100 ಜ್ಯುವೆಲ್ಲರಿ ಮಳಿಗೆಗಳಲ್ಲಿ ಪುತ್ತೂರಿನ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌‌ಗೆ ಸ್ಥಾನ ಪುತ್ತೂರು:ದಿ ಆರ್ಟ್ ಆಫ್ ಜ್ಯುವೆಲ್ಲರಿ(ಎಒಜೆ) ಮ್ಯಾಗಜೀನ್ 2024-25ರ ಅವಧಿಗೆ ಭಾರತದ ಸರಿ ಸುಮಾರು 5ಲಕ್ಷ ಜ್ಯುವೆಲ್ಲರಿಗಳ ಪೈಕಿ ಒಟ್ಟು ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಜ್ಯುವೆಲ್ಲರಿ ಸಂಸ್ಥೆಗಳ ರ್ಯಾಂಕಿಂಗ್ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಪುತ್ತೂರು ಸೇರಿದಂತೆ ಹಲವು ಕಡೆ ಶಾಖೆಗಳನ್ನು ಹೊಂದಿರುವ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯೂ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದಿ ಆರ್ಟ್ ಆಫ್‌ ಜ್ಯುವೆಲ್ಲರಿ

ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ವಿಶೇಷ ಸಂಚಿಕೆಯಲ್ಲಿ ಜ್ಯುವೆಲ್ಲರಿಗಳಿಗೆ ಶ್ರೇಯಾಂಕ Read More »

ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಪುತ್ತೂರು: ಕುಣಿಗಲ್ ಸಮೀಪ ಬೈಕ್ ಮತ್ತು ಕೋಳಿ ಸಾಗಾಟ ವಾಹನ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತನನ್ನು ಬೆಳ್ಳಾರೆಯ ವಾಸುದೇವ ರೈ – ಶರ್ಮಿಳಾ ವಿ. ರೈ ದಂಪತಿ ಪುತ್ರ ಸೂರಜ್ ರೈ (27) ಎಂದು ಗುರುತಿಸಲಾಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಸೂರಜ್ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅವರ ಬೈಕ್ ಮತ್ತು ಕೋಳಿ ಸಾಗಾಟದ ವಾಹನದ ನಡುವೆ ಕುಣಿಗಲ್ ಸಮೀಪ ಅಪಘಾತವಾಗಿತ್ತು. ಈ ದುರ್ಘಟನೆಯಲ್ಲಿ

ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು Read More »

ಮಗು ಕರುಣಿಸಿದ ಪ್ರಕರಣ : ಜೀವನಾಂಶ ನೀಡದೆ ಕೋರ್ಟ್‌ ಆದೇಶ ಉಲ್ಲಂಘನೆ

ಈ ತಿಂಗಳಿಂದ ಜೀವನಾಂಶ ಪಾವತಿಯಾಗಬೇಕಿತ್ತು ಎಂದ ವಿಶ್ವಕರ್ಮ ಮಹಾಸಭಾ ಪುತ್ತೂರು: ಕಾಲೇಜು ಸ್ನೇಹಿತೆಗೆ ಮಗು ಕರುಣಿಸಿದ ಪ್ರಕರಣದಲ್ಲಿ ಆರೋಪಿ ಹೈಕೋರ್ಟ್‌ ನೀಡಿದ ಆದೇಶದಂತೆ 75 ಸಾವಿರ ರೂ. ಜೀವನಾಂಶ ನೀಡಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆರೋಪಿಸಿದೆ. ಆರೋಪಿ ಕೃಷ್ಣ ಜೆ.ರಾವ್‌ಗೆ ಹೈಕೋರ್ಟ್‌ ಅಂತಿಮ ತೀರ್ಪು ಹೊರಬೀಳುವ ತನಕ ಸಂತ್ರಸ್ತ ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ ಜೀವನಾಂಶ ನೀಡಬೇಕೆಂದು ಆದೇಶಿಸಿತ್ತು. ಮೇ 1ರಂದು ಈ ತಿಂಗಳ ಜೀವನಾಂಶ ನೀಡಬೇಕಿತ್ತು. ಆದರೆ ಇನ್ನೂ ಯುವತಿಗೆ

ಮಗು ಕರುಣಿಸಿದ ಪ್ರಕರಣ : ಜೀವನಾಂಶ ನೀಡದೆ ಕೋರ್ಟ್‌ ಆದೇಶ ಉಲ್ಲಂಘನೆ Read More »

ಮಹಾಭಾರತ ಸರಣಿಯ 114ನೇ ತಾಳಮದ್ದಳೆ ವಿಷಮ ದಾಂಪತ್ಯ

ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯ 114ನೇ ಕಾರ್ಯಕ್ರಮದಲ್ಲಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ರಚಿತ ವಿಷಮ ದಾಂಪತ್ಯ ತಾಳಮದ್ದಳೆ ಜರಗಿತು. ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್ .ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ಭಾಸ್ಕರ ಬಾರ್ಯ (ಉದ್ದಾಲಕ 1) ಶ್ರೀಧರ ಎಸ್. ಪಿ ಕೃಷ್ಣಾಪುರ (ಉದ್ದಾಲಕ 2) ದಿವಾಕರ ಆಚಾರ್ಯ ಗೇರುಕಟ್ಟೆ( ಚಂಡಿ 1) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಚಂಡಿ 2) ಬಿ. ಸುಬ್ರಹ್ಮಣ್ಯ

ಮಹಾಭಾರತ ಸರಣಿಯ 114ನೇ ತಾಳಮದ್ದಳೆ ವಿಷಮ ದಾಂಪತ್ಯ Read More »

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ

ತಲೆಮಾರಿನ ನಂಬಿಕೆಗೆ ಪಾತ್ರವಾದ ಪ್ರತಿಷ್ಠಿತ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಪುತ್ತೂರು: ಹೈದರಾಬಾದ್‌ನಲ್ಲಿ ಮೇ 8, 9, 10ರಂದು ನಡೆದ ‘ಪವರ್ ಆಫ್ ಯಂಗ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹೈದರಾಬಾದ್ ಹೈಟೆಕ್ ಸಿಟಿ ಜ್ಯುವೆಲ್ಲರಿ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಷನ್ (HJMA), ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜಿನ್ ಹಾಗೂ ಇನ್‌ಫಾರ್ಮಾ ಮಾರ್ಕೆಟ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಭರಣ ಕ್ಷೇತ್ರದಲ್ಲಿ

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರಿಯ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯಗೆ ‘ಪವರ್ ಆಫ್ ಯಂಗ್’ ಗೌರವ Read More »

error: Content is protected !!
Scroll to Top