ವಿದ್ಯುತ್ ತಂತಿ ಸ್ಪರ್ಶ: ಮಾವಿನ ಮರವೇರಿದ್ದ ವ್ಯಕ್ತಿ ಸಾವು

ಮಣಿಪಾಲ: ಡಿಸಿ ಆಫಿಸ್ ಹಿಂಭಾಗದ ಮಾವಿನ ಮರದಲ್ಲಿ ಮಾವಿನ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ.

ಅಲೆವೂರು ನಿವಾಸಿ ಸದಾನಂದ ದೇವಾಡಿಗ(55) ಎಂಬವರೇ ‌ಮೃತ ದುರ್ದೈವಿ. ಗ್ರಾಮ ಸಹಾಯಕ ಕೆಲಸವನ್ನು ಅವರು ನಿರ್ವಹಿಸುತ್ತಿದ್ದರು.

ಶುಕ್ರವಾರ ಬೆಳಗ್ಗೆ ಮಾವಿನ ಕಾಯಿ ಕೊಯ್ಯಲು ಅವರು ಮರವೇರಿದ್ದು, ಈ ವೇಳೆ ಅವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮರದಿಂದ ಮೃತದೇಹವನ್ನು ತೆರವು ಮಾಡಿದ್ದಾರೆ.























































 
 

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top