ಉಡುಪಿ

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು

ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯವಾದ ಯುವಕರಿಂದ ಯುವತಿಗೆ ಮೋಸ ಉಡುಪಿ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮನೆಯಿಂದ ಲಕ್ಷಗಟ್ಟಲೆ ಬೆಲೆಬಾಳುವ ಆಭರಣಗಳನ್ನು ತರಿಸಿಕೊಂಡು ವಂಚಿಸಿದ ಇಬ್ಬರು ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಸಮೀಪದ ತೆಕ್ಕಟ್ಟೆ ಕುಂಭಾಶಿಯ ಜಿತೇಂದ್ರ ಶೆಟ್ಟಿ (25) ಹಾಗೂ ಕುರ್ವಾಡಿಯ ಸುಶಾನ್‌ ಪೂಜಾರಿ ಬಂಧಿತ ಪಾತಕಿಗಳು. ಅವರ ವಿರುದ್ಧ ಪೋಕ್ಸೋ, ಜೇವ ಬೆದರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಲ್ಪೆಯ ಕೊಡವೂರಿನ 17ರ ಹರೆಯದ […]

ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಎಸಗಿ ಆಭರಣ ದೋಚಿದ ಯುವಕರು Read More »

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ

ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಮಾವನಿಗೆ ಪಂಗನಾಮ ಹಾಕಿದ ಅಳಿಯ ಉಡುಪಿ: ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 15.81 ಲಕ್ಷ ರೂ. ಪಡೆದು ವಂಚನೆ ಎಸಗಿರುವ ಆರೋಪದಡಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ (50) ನೀಡಿದ ದೂರಿನಂತೆ, ಅವರ ಅಳಿಯನಾದ ಮೊಹಮ್ಮದ್ ಶರ್ಪದ್ದೀನ್ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದು, 2023ರ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಖರ್ಜೂರ

ಖರ್ಜೂರ ವ್ಯಾಪಾರ ಹೆಸರಿನಲ್ಲಿ ಅಳಿಯನಿಂದಲೇ ಮಾವನಿಗೆ 15.81 ಲಕ್ಷ ರೂ. ವಂಚನೆ Read More »

ಬಾವಿ ಕುಸಿದು ಕಾರ್ಮಿಕ ಸಾವು

ತೋಡುತ್ತಿರುವಾಗಲೇ ಕುಸಿದ ಬಾವಿ ಉಡುಪಿ : ಮಲ್ಪೆ ಸಮೀಪ ಕೊಡವೂರಿನ ಗರಡಿಮಜಲು ಎಂಬಲ್ಲಿ ಬಾವಿ ತೋಡುವ ಕೆಲಸದ ವೇಳೆ ಒಂದು ಭಾಗ ಕುಸಿದು ಕೊಪ್ಪಳದ 25 ವರ್ಷದ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ರಮೇಶ್ (25) ಎಂದು ಗುರುತಿಸಲಾಗಿದ್ದು, ಇವರು ಕಾರ್ಕಳದ ಪ್ರಭಾತ್ ಶೆಟ್ಟಿ ಎಂಬವರ ಗುತ್ತಿಗೆಯಡಿ ಬಾವಿ ತೋಡುವ ಕೆಲಸಲ್ಲೆ ಇತರ ಐದು ಮಂದಿಯೊಂದಿಗೆ ಕಾರ್ಕಳದಿಂದ ಬಂದಿದ್ದರು. ಬಾವಿ ತೋಡಿ ಕಾರ್ಮಿಕರು ಮೇಲೆ ಬರುವಾಗ ಕುಸಿತ ಸಂಭವಿಸಿದೆ. ಉಳಿದವರು ಅದಾಗಲೇ ಮೇಲೆ

ಬಾವಿ ಕುಸಿದು ಕಾರ್ಮಿಕ ಸಾವು Read More »

ಮೀನುಗಾರಿಕೆ ದೋಣಿ ಮುಳುಗಡೆ : 6 ಮೀನುಗಾರರ ರಕ್ಷಣೆ

ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ ಆಳಸಮುದ್ರ ಬೋಟೊಂದು ಮಂಗಳವಾರ ರಾತ್ರಿ ಕೋಡಿಬೆಂಗ್ರೆ ಸಮೀಪದ ಮುಳುಗಡೆಗೊಂಡಿದ್ದು ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಬೋಟಿನ ತಾಂಡೇಲ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ, ಕಾರ್ಮಿಕರಾದ ರೋಹಿದಾಸ್ ಮೊಗೇರ, ಶಾಮ ಸುಂದರ್‌ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್, ತ್ರಿಲೇಶ್ ಭಾಸ್ಕರ್ ರಕ್ಷಿಸಲ್ಪಟ್ಟ ಮೀನುಗಾರರು ಎಂದು ಗುರುತಿಸಲಾಗಿದೆ. ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಎಂಬವರಿಗೆ ಸೇರಿದ ಸಾಯಿದತ್ತ ಆಳಸಮುದ್ರ ಬೋಟು ಮೇ 17ರಂದು ರಾತ್ರಿ 10.30ಕ್ಕೆ ಮಲ್ಪೆ

ಮೀನುಗಾರಿಕೆ ದೋಣಿ ಮುಳುಗಡೆ : 6 ಮೀನುಗಾರರ ರಕ್ಷಣೆ Read More »

ಯುವತಿ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಪ್ರಕರಣ : ಆರೋಪಿ ಮಹಿಳೆ ಸೆರೆ

ಹಣಕ್ಕಾಗಿ ಪಕ್ಕದ ರೂಮ್‌ನ ಸ್ನೇಹಿತೆಯಿಂದಲೇ ಮಾರಕ ಕೃತ್ಯ ಉಡುಪಿ : ಹಣಕಾಸಿನ ತೊಂದರೆಯಿಂದ ಪಾರಾಗಲು ಪಕ್ಕದ ರೂಮಿನಲ್ಲಿದ್ದ ಯುವತಿಯ ತಲೆಗೆ ಕಾಂಕ್ರೀಟ್‌ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿ ಚಿನ್ನಾಭರಣ ದೋಚಿದ್ದ ಆರೋಪಿ ಮಹಿಳೆಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದ ಕೇಣಿ ಪೋಸ್ಟ್ ನಿವಾಸಿ ಸುಷ್ಮಾ ಅಣ್ಣಪ್ಪ ನಾಯಕ್ (31) ಎಂದು ಗುರುತಿಸಲಾಗಿದೆ. ದೂರುದಾರೆ ಮೇಘಾ ಗೌಡ ತನ್ನ ಸ್ನೇಹಿತರಾದ ನಾಗರತ್ನ, ಗಗನ ಮತ್ತು ಯೋಗಿತಾ ಅವರೊಂದಿಗೆ ಶಾಂತಿನಗರದ

ಯುವತಿ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಪ್ರಕರಣ : ಆರೋಪಿ ಮಹಿಳೆ ಸೆರೆ Read More »

ದನಗಳ ಅಕ್ರಮ ಸಾಗಾಟ : ಇಬ್ಬರ ಬಂಧನ

ಉಡುಪಿ : ದನಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪಡುಬಿದ್ರಿ ಪೊಲೀಸರು ಭಾನುವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ಕಾಪು ತಾಲೂಕಿನ ನಡ್ಸಾಲು ಗ್ರಾಮದ ಅಬ್ಬಾಸ್ ಗುಡ್ಡೆ ನಿವಾಸಿ ಇಸ್ಮಾಯಿಲ್ (42) ಮತ್ತು ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ನಿವಾಸಿ ಕರ್ನಿರೆ ಮೊಹಮ್ಮದ್ (62) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಾಹನ ಮತ್ತು ರಕ್ಷಿಸಲಾದ ಜಾನುವಾರುಗಳ ಒಟ್ಟು ಮೌಲ್ಯ ಸುಮಾರು 4.25 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ 6.40ರ

ದನಗಳ ಅಕ್ರಮ ಸಾಗಾಟ : ಇಬ್ಬರ ಬಂಧನ Read More »

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು

ಜೀಪಿಗೆ ಮೀನು ಸಾಗಿಸುವ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತ ಉಡುಪಿ: ಮೀನು ಸಾಗಾಟದ ಲಾರಿ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ನಡೆದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ(35) ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರ್ಯ ಅನೂಪ್ (28) ಮೃತಪಟ್ಟಿದ್ದಾರೆ. ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲೂರಿಗೆ

ಅಪಘಾತದಲ್ಲಿ ಕೊಲ್ಲೂರಿಗೆ ಬಂದ ಭಕ್ತರಿಬ್ಬರು ಸಾವು Read More »

ಸಿಡಿಲು ಬಡಿದು ಕಾರ್ಮಿಕ ಸಾವು

ಸೇತುವೆ ಕಾಮಗಾರಿ ವೇಳೆ ಸಂಭವಿಸಿದ ದುರಂತ ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಕುಂದಾಪುರ ಸಮೀಪ ಅರಾಟೆ ಸೇತುವೆ ಸಮೀಪ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತ ವ್ಯಕ್ತಿ. ಮತ್ತೋರ್ವ ಕಾರ್ಮಿಕ ಲವಜೋತ್ ಸಿಂಗ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಾಟೆ ಹಳೆ ಸೇತುವೆಯ ದುರಸ್ತಿ ಕಾಮಗಾರಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಗುರುವಾರ ಸಂಜೆ ಪಂಜಾಬ್ ಮೂಲದ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಈ

ಸಿಡಿಲು ಬಡಿದು ಕಾರ್ಮಿಕ ಸಾವು Read More »

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ :ಪಾಂಡುರಂಗ ಪೈ ಸಿದ್ಧಾಪುರ

ಉಡುಪಿ: ಮಕ್ಕಳು ಪ್ರತಿದಿನವೂ ಶ್ರದ್ಧೆ, ದೃಢಸಂಕಲ್ಪ, ಕಾರ್ಯ ತತ್ಪರತೆಯಿಂದ ಓದುವುದರ ಮೂಲಕ ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಬಹುದು. ಅವರು ಕಿರಿಯರಿಗೆ ಮಾದರಿಯಾಗಿ ಬೆಳೆಯಬಹುದು ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ ಅಭಿಪ್ರಾಯಪಟ್ಟರು. ಅವರು ಡ್ಯುಯಲ್ ಸ್ಟಾರ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಅಮಾಸೆಬೈಲು ಇಲ್ಲಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುವ ಪೃತ್ವಿಕ್ ಶೇಖರ್ ಪೂಜಾರಿ ಅವರ ಮನೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ :ಪಾಂಡುರಂಗ ಪೈ ಸಿದ್ಧಾಪುರ Read More »

ಹತ್ತನೇ ತರಗತಿ ಟಾಪರ್ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್‌ಗೆ ಸನ್ಮಾನ

ಉಡುಪಿ: ಸಾಧನೆ ಮಾಡಲು ತಂದೆ ತಾಯಿ , ಗುರುಹಿರಿಯರ ಮಾರ್ಗದರ್ಶನ ಅತ್ಯಂತ ಮುಖ್ಯ. ಮಕ್ಕಳ ಸಾಧನೆಯ ಯಶಸ್ಸನ್ನು ಹೆಚ್ಚು ಸಂಭ್ರಮಿಸುವವರು ಅವರುಗಳ ತಾಯಿ ಆಗಿರುತ್ತಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಮುಖ್ಯ. ಸಾಧಕ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್ ಶಾಲೆ ಮತ್ತು ಮನೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿದರು. ಪಿ.ಆರ್. ಎನ್.‌ ಅಮೃತ ಭಾರತಿ ವಿದ್ಯಾ ಕೇಂದ್ರ ಸಿಬಿಎಸ್ಇ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿನಿ

ಹತ್ತನೇ ತರಗತಿ ಟಾಪರ್ ವಿದ್ಯಾರ್ಥಿನಿ ಧನ್ವಿ ಹೆಬ್ಬಾರ್‌ಗೆ ಸನ್ಮಾನ Read More »

error: Content is protected !!
Scroll to Top