ಕೃಷಿ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಗುತ್ತಿಗಾರು ಕಮಿಲದ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಕೋಡಪದವು ಕೆಲಿಂಜದ ವೆಂಕಟಗಿರೀಶ್ ಸಿ.ಜಿ. ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಶಂ. ನಾ. ಖಂಡಿಗೆ ಪೆರ್ಲ, ಎಂ.ಡಿ. ವಿಜಯಕುಮಾರ್ ಮಡಪ್ಪಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ ಸಾಯಿಶೇಖರ್ ಕರಿಕಳ ಪಂಜ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕಿನಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. […]

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ,  ಕಾರ್ಯದರ್ಶಿಯಾಗಿ ವೆಂಕಟಗಿರೀಶ್ ಸಿ.ಜಿ Read More »

ಅಡಿಕೆ ಕ್ಯಾನ್ಸರ್ ನಿರೋಧಕ | ಹೊರಬಿತ್ತು ಸಂಶೋಧನಾ ವರದಿಯಿಂದ | ರೈತರಲ್ಲಿ ಸಂತಸ ಮೂಡಿಸಿದ ಸಂಶೋಧನಾ ವರದಿ

ಅಡಿಕೆ ಬೆಳೆಗಾರರಲ್ಲಿದ್ದ ಆತಂಕ ದೂರವಾಡುವ ಸುದ್ದಿಯೊಂದು ಹೊರಬಿದ್ದಿದ್ದು, ಸಂತೇಬೆನ್ನೂರಿನ ಸಂಸ್ಥೆ ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ. ನೆಕ್ಸ್ಜೆನ್ ಸಂಸ್ಥೆ ಸೈಟಾಕ್ಸನ್ ಬಯೋ ಸೊಲ್ಯುಷನ್ ಪ್ರೈ. ಲಿಮಿಟೆಡ್ ನ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನಾ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ನೆಕ್ಸ್ಜೆನ್ ಸಂಸ್ಥಾಪಕ ರಘು ಮಾದ್ಯಮಗಳಿಗೆ ತಿಳಿಸಿದ್ದಾರೆ. ಈ ಹಿಂದೆ ಅಡಿಕೆಯಲ್ಲಿ ಕ್ಯಾನ್ಸರ್ ಅಂಶ ಇದ್ದು, ಅಡಕೆ ನಿಷೇಧ ಮಾಡಬೇಕು ಎಂಬ ಮಾತು ಕೇಳಿ ಬಂದಿತ್ತು. ಇದರಿಂದ ರೈತರಲ್ಲಿ ಆತಂಕ ಮನೆಮಾಡಿತ್ತು. ಇದೀಗ ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಅಂಶ ಇದೆ

ಅಡಿಕೆ ಕ್ಯಾನ್ಸರ್ ನಿರೋಧಕ | ಹೊರಬಿತ್ತು ಸಂಶೋಧನಾ ವರದಿಯಿಂದ | ರೈತರಲ್ಲಿ ಸಂತಸ ಮೂಡಿಸಿದ ಸಂಶೋಧನಾ ವರದಿ Read More »

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ | ಒಂದೂವರೆ ಕೋಟಿ ವೆಚ್ಚದ ಕಟ್ಟಡಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರಿಂದ ಶಿಲಾನ್ಯಾಸ

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಕಾಣಿಯೂರು ಪ್ರಧಾನ ಕಚೇರಿ ಆವರಣದಲ್ಲಿ ನಡೆಯಿತು. ಸಂಘದ ಶತಮಾನೋತ್ಸವದ ನೆನಪಿಗಾಗಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಉಪಾದ್ಯಕ್ಷ ಬಾಲಕೃಷ್ಣ

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ | ಒಂದೂವರೆ ಕೋಟಿ ವೆಚ್ಚದ ಕಟ್ಟಡಕ್ಕೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರಿಂದ ಶಿಲಾನ್ಯಾಸ Read More »

ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮ

ಸುಳ್ಯ: ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಹೈದರಾಬಾದ್ ರಾಷ್ಟೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ ಸಹಯೋಗದಲ್ಲಿ ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮ ಉಬರಡ್ಕ ಗ್ರಾಮದ ಪ್ರಗತಿಪರ ಜೇನು ಕೃಷಿಕ ಪುಟ್ಟಣ್ಣ ಗೌಡರ ತೋಟದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಪಂ ಮಹಾ ಒಕ್ಕೂಟದ ಅಧ್ಯಕ್ಷ ಹರೀಶ್ ಉಬರಡ್ಕ, ಪಾಲ್ಗೊಂಡು, ರೈತರು ತಮ್ಮ ಸುಸ್ಥಿರ ಅಭಿವೃದ್ದಿಗಾಗಿ ಜೇನು ಕೃಷಿಯಂತಹ ಉಪ ಕಸುಬುಗಳನ್ನು ಕೈಗೊಳ್ಳಬೇಕು

ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮ Read More »

ನಾಳೆ : ಬೆಳಂದೂರಿನಲ್ಲಿ ವಿಕಸಿತ ಭಾರತ ಸಂಕಲ್ಪ

ಬೆಳಂದೂರು: ಬೆಳಂದೂರು ಗ್ರಾಮ ಪಂಚಾಯಿತಿ ಹಾಗೂ ಪುತ್ತೂರು ಯೂನಿಯನ್ ಬ್ಯಾಂಕ್‍ ಇಂಡಿಯಾ ವತಿಯಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಜ.17 ಬುಧವಾರ ಮಧ್ಯಾಹ್ನ 2 ಗಂಟೆಗೆ ಬೆಳಂದೂರು ಗ್ರಾಮ ಪಂಚಾಯಿತಿಯಲ್ಲಿ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮರಕ್ಕಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೃಷಿಕರಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ವೀಡಿಯೋ ಪ್ರಸಾರಗೊಳ್ಳಲಿದೆ. ಅಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್‍, ಆಯುಷ್ಮಾನ್ ಕಾರ್ಡ್‍, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ

ನಾಳೆ : ಬೆಳಂದೂರಿನಲ್ಲಿ ವಿಕಸಿತ ಭಾರತ ಸಂಕಲ್ಪ Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂಬರುವ ಯೋಜನೆಗಳ ಕುರಿತ ಸಲಹಾ ಸಮಿತಿಯ ಪೂರ್ವಭಾವಿ ಸಭೆ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ಮಹತ್ವಪೂರ್ಣ ಯೋಜನೆಗಳ ಸಹಿತ “ಕಲ್ಪ ವಿಕಾಸ ” ಮಹತ್ವಾಕಾಂಕ್ಷಿ ಯೋಜನೆಯ ರೂಪು-ರೇಷೆಗಳ ಬಗ್ಗೆ, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು  ಚರ್ಚಿಸಿ, ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಾವಯವ ತೆಂಗು ಕೃಷಿಗೆ ಉತ್ತೇಜನವನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು ಹಾಗೂ ತೆಂಗು ಸಂಸ್ಥೆಯ ಪತ್ರಿಕೆ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು | ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಅರ್ಹ ಎಲ್ಲಾ ಕೃಷಿಕರಿಗೂ ಸವಲತ್ತುಗಳು ಸಿಗಬೇಕು. ಆ ಸವಲತ್ತನ್ನು ಅವರಿಗೆ ತಲುಪಿಸುವ ಕೆಲಸ ಆಗಬೇಕು. ಯಾವುದೇ ಇಲಾಖೆಯಿಂದ ಸವಲತ್ತಿಗಾಗಿ ಲಂಚ ಕೇಳಿದ್ರೆ ನನಗೆ ತಿಳಿಸಿ. ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ತಾಲೂಕು ಕೃಷಿಕ ಸಮಾಜ ಹಾಗೂ ಪುತ್ತೂರು ಕೃಷಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ ಕೃಷಿ ಮಾಹಿತಿ, ಸಂವಾದ, ಸನ್ಮಾನ ಹಾಗೂ ಸವಲತ್ತು

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು | ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಅಡಕೆ ಹಳದಿ ರೋಗಕ್ಕೆ ಸುಳ್ಯದ ರೈತ ಬಲಿ: ಸರಕಾರ, ವಿಜ್ಞಾನಿಗಳೇ ನೇರ ಹೊಣೆ

ಪುತ್ತೂರು: ಸುಳ್ಯದಲ್ಲಿ ಅಡಿಕೆಗೆ ಹಳದಿ ರೋಗಕ್ಕೆ ಮನನೊಂದು ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಜಗದೀಶ ಚಳ್ಳಂಗಾರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಸರಕಾರ, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ನೇರ ಹೊಣೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಮಿನೇಜಸ್ ಆಪಾದಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟೋ ವರ್ಷದ ಮೊದಲೇ ಕಾಣಿಸಿಕೊಂಡ ಅಡಿಕೆ ಹಳದಿ ರೋಗವನ್ನು ನಿಯಂತ್ರಿಸುವಲ್ಲಿ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲರಾಗಿದೆ. ಸರಕಾರವು ಈ ಆತ್ಮಹತ್ಯೆಯ

ಅಡಕೆ ಹಳದಿ ರೋಗಕ್ಕೆ ಸುಳ್ಯದ ರೈತ ಬಲಿ: ಸರಕಾರ, ವಿಜ್ಞಾನಿಗಳೇ ನೇರ ಹೊಣೆ Read More »

ಪೆರ್ನಾಜೆ: ಗುಂಪಿನಿಂದ ಬೇರ್ಪಟ್ಟ ಸಲಗದಿಂದ ಕೃಷಿ ಹಾನಿ!!

ಪುತ್ತೂರು: ಪೆರ್ನಾಜೆ ಆಸುಪಾಸಿನಲ್ಲಿ ಒಂಟಿ ಸಲಗದ ಕಾಟ ಕಾಣಿಸಿಕೊಂಡಿದ್ದು, ಕೃಷಿಯನ್ನು ಹಾನಿಗೊಳಿಸಿದೆ. ಘಟನೆಯಿಂದ ಕೃಷಿಕರಲ್ಲಿ ಆತಂಕ ಮನೆಮಾಡಿದೆ. ಪುತ್ತೂರು – ಸುಳ್ಯ – ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಕೃಷಿ ತೋಟಕ್ಕೆ ಒಂಟಿ ಸಲಗ ಬುಧವಾರ ಮುಂಜಾನೆ ದಾಳಿ ನಡೆಸಿದೆ. ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ನಾಲ್ಕು ದೀವಿ ಹಲಸು ಮರ, ಅಡಿಕೆ ತೋಟವನ್ನು ಹಾಳುಗೆಡವಿದೆ. ಗುಂಪಿನಿಂದ ಬೇರ್ಪಟ್ಟ ಸಲಗ: ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಇದೆಂದು ಹೇಳಲಾಗುತ್ತಿದೆ. ಈ ಮೊದಲು ಮಂಡೆಕೋಲು,

ಪೆರ್ನಾಜೆ: ಗುಂಪಿನಿಂದ ಬೇರ್ಪಟ್ಟ ಸಲಗದಿಂದ ಕೃಷಿ ಹಾನಿ!! Read More »

ಹಿಂಗಾರು ಬೆಳೆ ಸಮೀಕ್ಷೆ: ಮೊಬೈಲಿನಲ್ಲೇ ದಾಖಲಿಸಬಹುದು!

ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಇ-ಆಡಳಿತ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ಹಿಂಗಾರು ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಆರಂಭಿಸಲಾಗಿದೆ. ಈ ಕುರಿತು ರೈತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಡಿಸೆಂಬರ್ 30ರಿಂದ ಸಮೀಕ್ಷೆ ಆರಂಭವಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರಗಳನ್ನು ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್‌ ಮೂಲಕ ತಾವೇ ಸ್ವತಃ ದಾಖಲಿಸಬಹುದಾಗಿದೆ. ಡೌನ್‌ಲೋಡ್ ಮಾಡಿಕೊಳ್ಳಿ; ರೈತರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ ಬೆಳೆ ಸಮೀಕ್ಷೆ ಹಿಂಗಾರು ಹಂಗಾಮಿನ

ಹಿಂಗಾರು ಬೆಳೆ ಸಮೀಕ್ಷೆ: ಮೊಬೈಲಿನಲ್ಲೇ ದಾಖಲಿಸಬಹುದು! Read More »

error: Content is protected !!
Scroll to Top