Uncategorized

ಪಶ್ಚಿಮ ಬಂಗಾಳದ ಅಧಿಕಾರ ಸುವೇಂದು ಅಧಿಕಾರಿಗೆ : ಇಂದು ಪ್ರಮಾಣ ವಚನ ಸ್ವೀಕಾರ

ದೇಶದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯ ಮೈಲುಗಲ್ಲಾಗುವ ಸಾಧನೆಗೆ ಕ್ಷಣಗಣನೆ ಕೋಲ್ಕತ್ತಾ : ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ ಮೊದಲ ಬಾರಿಗೆ ಬಂಗಾಳದ ಗದ್ದುಗೆ ಏರುತ್ತಿದೆ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಇಂದು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನಂದಿಗ್ರಾಮದ ಹೋರಾಟದಿಂದ ಹಿಡಿದು ವಿಧಾನಸಭೆಯ ಅಂಗಳದವರೆಗೆ ಸುವೇಂದು ಅಧಿಕಾರಿ ನಡೆದು ಬಂದ ಹಾದಿ ಅತ್ಯಂತ ರೋಚಕವಾಗಿದೆ. […]

ಪಶ್ಚಿಮ ಬಂಗಾಳದ ಅಧಿಕಾರ ಸುವೇಂದು ಅಧಿಕಾರಿಗೆ : ಇಂದು ಪ್ರಮಾಣ ವಚನ ಸ್ವೀಕಾರ Read More »

ವಿದ್ಯುತ್ ತಗುಲಿ ಒಂಬತ್ತು ವರ್ಷದ ಹುಡುಗಿ ಮೃತ

ಚಿಕ್ಕೋಡಿ: ಒಂಬತ್ತು ವರ್ಷದ ಹುಡುಗಿಯೊಬ್ಬಳು ವಿದ್ಯುತ್ ಶಾಕ್ ತಗುಲಿದ ಪರಿಣಾಮ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಇಂಗಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸಾನ್ವಿ ಕಾಂಬಳೆ ಎಂದು ಗುರುತಿಸಲಾಗಿದೆ. ಸಾನ್ವಿ ಇಂಗಳಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಈಕೆ ಮನೆಯ ಮೇಲೆ ಆಟವಾಡುತ್ತಿದ್ದ ‌ಸಮಯದಲ್ಲಿ ವಿದ್ಯುತ್ ತಗುಲಿದ್ದು, ಪರಿಣಾಮ ಮೇಲಿಂದ ಕೆಳಕ್ಕೆ ಬಿದ್ದಿದ್ದಾಳೆ. ಆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಹುಡುಗಿ ಮೃತಪಟ್ಟಿದ್ದಾಳೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಗುಲಿ ಒಂಬತ್ತು ವರ್ಷದ ಹುಡುಗಿ ಮೃತ Read More »

ಐದು ಸಾವಿರ ರೂ. ಲಂಚ ಪಡೆಯುವಾಗ ಸೆಸ್ಕಾಂ ಕಿರಿಯ ಎಂಜಿನಿಯರ್ ಲೋಕಾ ಬಲೆಗೆ

ಹಾಸನ: ಐದು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಸೆಸ್ಕಾಂ ಕಿರಿಯ ‌ಎಂಜಿನಿಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ನುರನಕ್ಕಿ ಗ್ರಾಮದ ಸೆಸ್ಕಾಂ‌ನ ಕಿರಿಯ ಎಂಜಿನಿಯರ್ ದೇವರಾಜ್ ಅವರೇ ಲೋಕಾಯುಕ್ತ ‌ಬಲೆಗೆ ಬಿದ್ದವರು. ಶಶಾಂಕ್ ಎಂಬವರು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಒದಗಿಸುವ ಸಲುವಾಗಿ 5000 ರೂ. ಲಂಚಕ್ಕೆ ದೇವರಾಜ್ ಬೇಡಿಕೆ ಇಟ್ಟಿದ್ದರು‌. ಲಂಚದ ಮೊತ್ತವನ್ನು ಪಡೆಯುವ ಸಂದರ್ಭದಲ್ಲಿ ದೇವರಾಜ್ ಅವರು ಲೋಕಾಯುಕ್ತರ ಬಲೆಗೆ ರೆಡ್‌ಹ್ಯಾಂಡ್‌ ಆಗಿ ಬಿದ್ದಿದ್ದಾರೆ. ಹಣದ ಸಮೇತ ಆರೋಪಿಯನ್ನು ಲೋಕಾಯುಕ್ತ

ಐದು ಸಾವಿರ ರೂ. ಲಂಚ ಪಡೆಯುವಾಗ ಸೆಸ್ಕಾಂ ಕಿರಿಯ ಎಂಜಿನಿಯರ್ ಲೋಕಾ ಬಲೆಗೆ Read More »

ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ

ವಿಜಯಪುರ: ಬೀದಿ ನಾಯಿಯೊಂದು ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿ, ಕಟ್ಟಿಕೊಂಡು ಹೋಗಿದ್ದು, ಸ್ಥಳೀಯರಿಂದಾಗಿ ಮಗುವಿನ ಪ್ರಾಣ‌ ಉಳಿದ ಘಟನೆ ರಾಜಕುಮಾರ್ ಲೇ‌ಔಟ್‌ನಲ್ಲಿ ‌ನಡೆದಿದೆ. ನಾಯಿ ದಾಳಿಗೆ ತುತ್ತಾದ ಬಾಲಕನನ್ನು ವಿರಾಜ್ ‌ಸಂತೋಷ್ ಬಿರಾದಾರ್ ಎಂದು ಗುರುತಿಸಲಾಗಿದೆ. ವಿರಾಜ್ ‌ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಬೀದಿ ನಾಯಿ ಅಟ್ಯಾಕ್ ಮಾಡಿದೆ. ಮಾತ್ರವಲ್ಲದೆ ಸುಮಾರು 100 ಮೀ. ದೂರದ ವರೆಗೆ ಮಗುವನ್ನು ಕಚ್ಚಿ ಎಳೆದೊಯ್ದಿದೆ. ಈ ವೇಳೆ ಸ್ಥಳೀಯರು ಕಿರು ಚಿ, ಕೂಗಾಡಿದ ‌ಪರಿಣಾಮ ಮಗುವನ್ನು ಅಲ್ಲೇ

ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ Read More »

ಡ್ರಗ್ಸ್ ಸೇವನೆ: ಅನ್ಸಾರ್, ಇರ್ಷಾದ್ ಪೊಲೀಸ್ ಬಲೆಗೆ

ನೆಲ್ಯಾಡಿ: ಡ್ರಗ್ಸ್ ಸೇವಿಸಿದ ಈರ್ವರನ್ನು ಉಪ್ಪಿನಂಗಡಿ ಪೊಲೀಸರು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿನ ನಿರ್ಮಾಣ ಹಂತದ ಟೋಲ್‌ಗೇಟ್ ಸಮೀಪ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಅಹಮ್ಮದ್ ಅನ್ಸಾರ್, ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪೊಲೀಸರ ರೌಂಡ್ಸ್ ‌ವೇಳೆ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ಮಾತನಾಡುತ್ತಾ, ವರ್ತಿಸುತ್ತಾ ನಿಂತಿದ್ದರು. ಅವರನ್ನು ವಿಚಾರಣೆ ಮಾಡಲಾದಾಗ ಸಮರ್ಪಕ ಉತ್ತರ ನೀಡುವಲ್ಲಿ ಅವರು ವಿಫಲರಾಗಿದ್ದರು. ಇದರಿಂದ ಸಂಶಯಗೊಂಡ ಪೊಲೀಸರು ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಅವರಿಬ್ಬರೂ ಅಮಲು ಪದಾರ್ಥ ಸೇವನೆ ಮಾಡಿರುವ ವಿಷಯ ಬೆಳಕಿಗೆ

ಡ್ರಗ್ಸ್ ಸೇವನೆ: ಅನ್ಸಾರ್, ಇರ್ಷಾದ್ ಪೊಲೀಸ್ ಬಲೆಗೆ Read More »

ಅರ್ಚಕರೊಬ್ಬರ ಮೇಲೆ ಅಪರಿಚಿತನಿಂದ ಹಲ್ಲೆ, ಕೊಲೆ ಬೆದರಿಕೆ: ದೂರು ದಾಖಲು

ಪುತ್ತೂರು: ವೈದಿಕ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ಪುರೋಹಿತರೊಬ್ಬರ ಕಾರನ್ನು ತಡೆದು ನಿಲ್ಲಿಸಿದ ಅಪರಿಚಿತನೊಬ್ಬ ಅವರನ್ನು ನಿಂದಿಸಿ, ಹಲ್ಲೆ‌ ನಡೆಸಿದ ಘಟನೆ ಕಬಕದ ವಿದ್ಯಾಪುರ ಎಂಬಲ್ಲಿ ನಡೆದಿದೆ. ಅರ್ಚಕ ಗಣೇಶ್ ವಿ.(39) ಎಂಬವರ ‌ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮೇ 4 ರಂದು ತಾನು ಕಾರಿನಲ್ಲಿ ಕಲ್ಲಡ್ಕದ ಉಮಾಶಿವ ಕ್ಷೇತ್ರದಲ್ಲಿ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ವಿದ್ಯಾಪುರದಲ್ಲಿ ‌ನನ್ನ ಮೇಲೆ ಹಲ್ಲೆ ನಡೆದಿದೆ. ಅಲ್ಲೇ ಸಮೀಪದ ಮನೆಯೊಂದರಲ್ಲಿ ಯಾವುದೋ ಕಾರ್ಯಕ್ರಮ

ಅರ್ಚಕರೊಬ್ಬರ ಮೇಲೆ ಅಪರಿಚಿತನಿಂದ ಹಲ್ಲೆ, ಕೊಲೆ ಬೆದರಿಕೆ: ದೂರು ದಾಖಲು Read More »

ಅನೈತಿಕ ಸಂಬಂಧ: ವಿವಾಹಿತ ಮಹಿಳೆಯನ್ನು ಕೊಂದು, ಪ್ರಿಯಕರ ಆತ್ಮಹತ್ಯೆ

ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಕಾರೊಂದು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ. ಕಾರು ಪತ್ತೆಯಾದ ಕೊಂಚ ದೂರದಲ್ಲೇ ಪುರುಷನೊಬ್ಬನ ಬಟ್ಟೆ, ಮೊಬೈಲು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿದ್ದಾರೆ. ಕಾರಿನಲ್ಲಿ ಪತ್ತೆಯಾದ ಶವ ಸರೋಜಾ ಎಂಬ ಕನ್ನಡ ಉಪನ್ಯಾಸಕಿಯದ್ದಾಗಿದ್ದು, ದೇವನಹಳ್ಳಿಯ ಪಿಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾಳ ಅನೈತಿಕ ಸಂಬಂಧದ ಪ್ರಿಯಕರ ರಾಮಾಂಜಿನಪ್ಪ ಎಂಬಾತ ಆಕೆಯನ್ನು ಪೆಟ್ರೋಲ್ ಸುರಿದು ಸುಟ್ಟು, ಬಳಿಕ ಸ್ಥಳದಿಂದ ಪರಾರಿಯಾಗಿ

ಅನೈತಿಕ ಸಂಬಂಧ: ವಿವಾಹಿತ ಮಹಿಳೆಯನ್ನು ಕೊಂದು, ಪ್ರಿಯಕರ ಆತ್ಮಹತ್ಯೆ Read More »

ಮೂವರು ಯುವಕರ ಮೇಲೆ ತಲ್ವಾರ್‌ನಿಂದ ಹಲ್ಲೆ: ದೂರು ದಾಖಲು

ಬೆಳಗಾವಿ: ದುಷ್ಕರ್ಮಿಗಳು ತಲವಾರು ಹಿಡಿದು ಮೂವರು ಯುವಕರ ಮೇಲೆ ಹಲ್ಲೆ‌ ನಡೆಸಿದ ಘಟನೆ ಅಮನ್ ನಗರದಲ್ಲಿ ನಡೆದಿದೆ. ಹಳೆಯ ವೈಷಮ್ಯದ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಗಾಯಾಳು ಯುವಕರನ್ನು ವಲಿ ಶೇಖ್, ಇಮಾಮ್ ಶೇಖ್ ಮತ್ತು ಮಜೀದ್ ‌ಶೇಖ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಗಾಯಾಳುಗಳ ಕುಟುಂಬಸ್ಥರು ಆಗ್ರಹಿಸಿದ್ದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೂವರು ಯುವಕರ ಮೇಲೆ ತಲ್ವಾರ್‌ನಿಂದ ಹಲ್ಲೆ: ದೂರು ದಾಖಲು Read More »

ಕ್ರೇನ್ ಗುದ್ದಿ ‌ದ್ವಿಚಕ್ರ ವಾಹನ ಸವಾರ ಸಾವು

ಬೆಳ್ತಂಗಡಿ: ಕ್ರೇನ್ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಾಲುವಿನಲ್ಲಿ ‌ನಡೆದಿದೆ. ಬಳಂಜದ ಜಯ ಮೇಸ್ತ್ರಿ(49) ಎಂಬವರೇ ‌ಮೃತ ದುರ್ದೈವಿ. ಬೆಳಾಲಿನಲ್ಲಿ ಬಾಡಿಗೆ ಮನೆಯಲ್ಲಿ ಅವರು ವಾಸವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ರೇನ್ ಗುದ್ದಿ ‌ದ್ವಿಚಕ್ರ ವಾಹನ ಸವಾರ ಸಾವು Read More »

ಮೇಲಿನಕುರುವಳ್ಳಿಯಲ್ಲಿ ಕಾಣಸಿಕ್ಕಿದ ಎರಡು ಚಿರತೆ ಮರಿಗಳು: ಗ್ರಾಮಸ್ಥರಲ್ಲಿ ಆತಂಕ

ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿ ಗ್ರಾಮದಲ್ಲಿ ಎರಡು ಚಿರತೆ ಮರಿಗಳು ಕಾಣ ಸಿಕ್ಕಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಈ ಚಿರತೆ ಮರಿಗಳು ಕುರುವಳ್ಳಿಯಿಂದ ಹರಳಿಮಠಕ್ಕೆ ಹೋಗುವ ರಸ್ತೆಯಲ್ಲಿ ಕಾಣಸಿಕ್ಕಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು‌ ಮರಿಗಳ ಜೊತೆಗೆ ಚಿರತೆಯೂ ಇರಬಹುದೇನೋ ಎಂಬ ಭಯ ಗ್ರಾಮದಲ್ಲಿ ಆವರಿಸಿದೆ. ಈ ಮಾಹಿತಿಯನ್ನು ಅರಣ್ಯ ಇಲಾಖಾ ಸಿಬ್ಬಂದಿಗೂ ತಲುಪಿಸಲಾಗಿದ್ದು, ಯಾವುದೇ ಕಾರಣಕ್ಕೂ ಚಿರತೆ ಮರಿಗಳಿಗೆ ಆತಂಕವಾಗುವಂತಹ ಸ್ಥಿತಿ ನಿರ್ಮಾಣ ಮಾಡದಂತೆ ಅವರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

ಮೇಲಿನಕುರುವಳ್ಳಿಯಲ್ಲಿ ಕಾಣಸಿಕ್ಕಿದ ಎರಡು ಚಿರತೆ ಮರಿಗಳು: ಗ್ರಾಮಸ್ಥರಲ್ಲಿ ಆತಂಕ Read More »

error: Content is protected !!
Scroll to Top