ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ನೀಡಿದ ದಿಟ್ಟ ಮಹಿಳೆ
ರಾಯಚೂರು: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿಯೇಟು ನೀಡುವ ಮೂಲಕ ಪ್ರತ್ಯುತ್ತರ ನೀಡಿದ ಘಟನೆ ಲಿಂಗಸುಗೂರು ಪಟ್ಟಣದ ಬಸ್ಸು ನಿಲ್ದಾಣದ ಸಮೀಪ ನಡೆದಿದೆ. ಮಹಿಳೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗೆಯೇ ಅಶ್ಲೀಲವಾಗಿ ಮಾತನಾಡಿದ್ದಾನೆ. ಯುವಕನ ದುರ್ವರ್ತನೆಗೆ ಮಹಿಳೆ ಕೆನ್ನೆಗೆ ಬಾರಿಸಿದ ಅವರು ಆತನಿಗೆ ಚಪ್ಪಲಿಯೇಟು ಸಹ ನೀಡಿ ತಕ್ಕ ಶಾಸ್ತಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯರು ಸಹ ಯುವಕನಿಗೆ ಧರ್ಮದೇಟು ನೀಡಿ ಪಾಠ ಕಲಿಸಿದ್ದಾರೆ. […]
ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ನೀಡಿದ ದಿಟ್ಟ ಮಹಿಳೆ Read More »










