ಕಲ್ಲು ತೂರಾಟ ಮಾಡಿದವರನ್ನು ಬಿಡುಗಡೆ ಮಾಡಲು ಖಾದರ್‌ ಪತ್ರ : ಹಿಂದೂ ಮುಖಂಡರ ಆಕ್ರೋಶ

ಆಳಂದದಲ್ಲಿ ಹಿಂದೂ ಮುಖಂಡರು, ಡಿಸಿ, ಎಸ್ಪಿ ಮೇಲೆ ಕಲ್ಲು ತೂರಿದ ಪ್ರಕರಣ

ಬೆಂಗಳೂರು: ಕಲಬುರಗಿಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವಂತೆ ಸ್ಪೀಕರ್‌ ಯು.ಟಿ. ಖಾದರ್ ಗೃಹ ಸಚಿವ ಜಿ.ಪರಮೇಶ್ವರ್​ಗೆ ಬರೆದಿರುವ ಪತ್ರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಅವರ ಈ ನಡೆಯನ್ನು ಹಿಂದೂ ಸಂಘಟನೆಗಳು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ.

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ಹಿಂದೂ ಸಂಘಟನೆ ಮುಖಂಡರು, ಡಿಸಿ, ಎಸ್ಪಿ, ಕೇಂದ್ರ ಸಚಿವರ ಮೇಲೆ ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದ ಘಟನೆಗೆ ಸಂಬಂಧಿಸಿ ಬಂಧಿತರಾಗಿರುವ ಅಮಾಯಕ ಮುಸ್ಲಿಂರನ್ನು ಬಿಡುಗಡೆ ಮಾಡಬೇಕೆಂದು ಸ್ಪೀಕರ್ ಯು.ಟಿ ಖಾದರ್ ಬರೆದಿದ್ದಾರೆ‌.























































 
 

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಕಲ್ಲು ತೂರಾಟ ಪ್ರಕರಣದಲ್ಲಿ ಅಮಾಯಕ ಮುಸ್ಲಿಂ ಯುವಕರ ಹೆಸರು ಸಿಲುಕಿಸಲಾಗಿದ್ದು, ಪ್ರಕರಣದಿಂದ ಅವರನ್ನ ಕೈಬಿಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ಯು.ಟಿ ಖಾದರ್ ಬರೆದಿರುವ ಪತ್ರಕ್ಕೆ ಶಿವಸೇನೆ ಕಿಡಿಕಾರಿದೆ.

ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಕೆಲ ಕಿಡಿಗೇಡಿಗಳು ಮಲ-ಮೂತ್ರ ಎರಚಿ ಅಪವಿತ್ರಗೊಳಿಸಿದ್ದರು. ಅದಕ್ಕಾಗಿ 2022ರಲ್ಲಿ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ದೀಕರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನೂರಾರು ಮುಸ್ಲಿಂ ಯುವಕರು ಕೇಂದ್ರ ಸಚಿವ ಭಗವಂತ್ ಖೂಬಾ, ಡಿಸಿ, ಎಸ್ಪಿ, ಹಿಂದೂ ಮುಖಂಡರ ಕಾರಿನ ಮೇಲೆ ಭಾರಿ ಕಲ್ಲು ತೂರಾಟ ಮಾಡಿ ದೊಣ್ಣೆಗಳನ್ನ ಹಿಡಿದು ಗಲಭೆ ಎಬ್ಬಿಸಿದ್ದರು.

ಗಲಭೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅನ್ಸಾರಿ ಸೇರಿದಂತೆ ನೂರಾರು ಜನರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಮಾಯಕ ಮುಸ್ಲಿಂರನ್ನ ಸಹ ಸಿಲುಕಿಸಲಾಗಿದ್ದು, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ವಾಪಸ್ಸು ಪಡೆಯಬೇಕೆಂದು ಯು.ಟಿ ಖಾದರ್ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಮುಸ್ಲಿಂರನ್ನ ಕೈಬಿಟ್ಟರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

error: Content is protected !!
Scroll to Top