ನಿಧನ

ಚಿರತೆ ಅಡ್ಡ ಬಂದ ಪರಿಣಾಮ ಗುಂಡಿಗೆ ಬಿದ್ದ ಟ್ರ್ಯಾಕ್ಟರ್

ಭರಮಸಾಗರ: ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆಯೊಂದು ಜಿಗಿದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿದ ಘಟನೆ ನಡೆದಿದೆ. ಓಬಳಾಪುರ ಗ್ರಾಮದ ಉಮೇಶ್ ಎಂಬವರ ‌ಟ್ರ್ಯಾಕ್ಟರ್‌ಗೆ ಚಿರತೆ ಅಡ್ಡ ಬಂದ ಪರಿಣಾಮ ಟ್ರ್ಯಾಕ್ಟರ್ ಗುಂಡಿಗೆ ಬಿದ್ದಿರುವುದಾಗಿದೆ. ಆ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಕಳೆದ ವರ್ಷವೂ ಕಂಡು ಬಂದಿದ್ದು, ವಿಡಿಯೋ ಸಹ ವೈರಲ್ ಆಗಿತ್ತು.‌ಈ ಬಾರಿಯೂ ಚಿರತೆಯ ಸಂಚಾರ ಇರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆ ಸಮಸ್ಯೆಯನ್ನು ಬಗೆಹರಿಸುವಂತೆ […]

ಚಿರತೆ ಅಡ್ಡ ಬಂದ ಪರಿಣಾಮ ಗುಂಡಿಗೆ ಬಿದ್ದ ಟ್ರ್ಯಾಕ್ಟರ್ Read More »

ನೇಣು ಬಿಗಿದು ಮಹಿಳೆ ಸಾವು: ಸಂದೇಹ ವ್ಯಕ್ತಪಡಿಸಿದ ಕುಟುಂಬ ವರ್ಗ

ಪುತ್ತೂರು: ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ‌ ಸ್ಥಿತಿಯಲ್ಲಿ ಮನೆಯ ಸಮೀಪದ ಶೆಡ್‌ನಲ್ಲಿ ‌ಪತ್ತೆಯಾದ ಘಟನೆ ಮುಳ್ಳೇರಿಯಾದ ಪಳ್ಳಪ್ಪಾಡಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೆರೆನಾ (27) ಎಂದು‌ ಗುರುತಿಸಲಾಗಿದೆ. ಪಳ್ಳಪ್ಪಾಡಿಯ ಜೈನುದ್ದೀನ್ ಎಂಬವರಿಗೆ ಆಕೆಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.‌ ಆಕೆಗೆ ಮಕ್ಕಳಾಗದ ಕಾರಣ ಗಂಡನ ಮನೆಯವರು ಮಾನಸಿಕ, ದೈಹಿಕ ಕಿರುಕುಳ ನೀಡಲಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ. ಅತ್ತೆಯ ಕಿರುಕುಳ ತಾಳಲಾರದೆ ಸಾಕಷ್ಟು ಬಾರಿ ಆಕೆ ತವರಿಗೆ ಬಂದು ನೆಲೆಸುತ್ತಿದ್ದರು. ಸಂಬಂಧಿಕರು ಸಂಧಾನ ನಡೆಸಿ ಪತಿಯ ಮನೆಗೆ ಮತ್ತೆ

ನೇಣು ಬಿಗಿದು ಮಹಿಳೆ ಸಾವು: ಸಂದೇಹ ವ್ಯಕ್ತಪಡಿಸಿದ ಕುಟುಂಬ ವರ್ಗ Read More »

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಮಂಗಳೂರು: ಕಾರ್ ಮತ್ತು ಬೈಕ್ ನಡುವೆ ಸೋಮಂತಡ್ಕ‌ ಅಗರಿ ‌ಕ್ರಾಸ್ ಸಮೀಪ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಫೋಟೋಗ್ರಾಫರ್ ಗಣೇಶ್ ಗೌಡ (36) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಬೆಳ್ತಂಗಡಿಯ ಕಳೆಂಜ ನಿವಾಸಿಯಾದ ಇವರು ಉಜಿರೆಯಲ್ಲಿ ತಮ್ಮದೇ ಸ್ಟುಡಿಯೋ ನಡೆಸುತ್ತಿದ್ದರು. ಮೇ 24 ರಂದು ಉಜಿರೆಯಿಂದ ಕಕ್ಕಿಂಜೆಗೆ ಬೈಕಿನಲ್ಲಿ ತೆರಳುವ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು, ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು Read More »

ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು

ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ‌ಜೀವಂತ ಸಮಾಧಿಯಾದ ‌ಘಟನೆ ನಿಡಗುಂದಿಯಲ್ಲಿ ನಡೆದಿದೆ. ಮಹಾದೇವಿ ವಾರದ (55) ಎಂಬವರೇ ಮೃತ ದುರ್ದೈವಿ. ಪಟ್ಟಣದ ಗೌರೀಶ್ವರ ದೇಗುಲದ ಸಮೀಪ ಈ ದುರ್ಘಟನೆ ನಡೆದಿರುವುದಾಗಿದೆ. ಮೊನ್ನೆ ಸುರಿದ ಮಳೆಗೆ ಹಳೆಯ ಮನೆಯ ಮೇಲ್ಛಾವಣಿ ಕುಸಿದಿದೆ. ನಸುಕಿನ ಜಾವ ಈ ಘಟನೆ ನಡೆದಿದ್ದು, ಮಹಾದೇವಿ ಅವರ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತಿ ಶಿವಾನಂದ ಅವರು ಮನೆಯ ಹೊರ ಭಾಗದಲ್ಲಿ ಮಲ ಆಗಿದ್ದು, ಇದರಿಂದಾಗಿ

ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು Read More »

ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್‌ ನಿಧನ

ಹೀರೊ, ವಿಲನ್‌ ಪಾತ್ರಗಳಲ್ಲಿ ಮಿಂಚಿದ್ದ ಪ್ರತಿಭಾವಂತ ಕಲಾವಿದ ಬೆಂಗಳೂರು: ಕನ್ನಡದ ಕಿರುತೆರೆ ಮತ್ತು ಸಿನಿಮಾ ನಟ ದಿಲೀಪ್‌ ರಾಜ್‌ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್‌ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ

ಕನ್ನಡದ ಖ್ಯಾತ ನಟ ದಿಲೀಪ್‌ ರಾಜ್‌ ನಿಧನ Read More »

ಇಂದು ಚಳ್ಳಕೆರೆಯಲ್ಲಿ ಸಚಿವ ಡಿ.ಸುಧಾಕರ್‌ ಅಂತ್ಯಕ್ರಿಯೆ

ಶ್ವಾಸಕೋಶದ ಸೋಂಕಿನಿಂದ ಭಾನುವಾರ ನಿಧನ ಹೊಂದಿರುವ ಸಚಿವ ಚಳ್ಳಕೆರೆ: ನಿನ್ನೆ ತೀರಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಂತ್ಯಕ್ರಿಯೆ ಅವರ ಕುಟುಂಬದ ಇಚ್ಚೆಯಂತೆ ಜೈನ ಸಮುದಾಯದ ಸಂಪ್ರದಾಯದ ಪ್ರಕಾರ ಚಳ್ಳಕೆರೆಯ ಚಿತ್ರದುರ್ಗ ರಸ್ತೆಯ ಸಚಿವರ ಸೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಆವರಣದಲ್ಲಿ ಸೋಮವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅನಾರೋಗ್ಯ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಿಕಿತ್ಸೆ ಫಲಿಸದೆ

ಇಂದು ಚಳ್ಳಕೆರೆಯಲ್ಲಿ ಸಚಿವ ಡಿ.ಸುಧಾಕರ್‌ ಅಂತ್ಯಕ್ರಿಯೆ Read More »

ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದವರ ವಾಹನದ ಟೈರ್ ಸ್ಪೋಟ: ಓರ್ವ ಸಾವು, ಹಲವರಿಗೆ ಗಾಯ

ಕೊಪ್ಪಳ: ವಾಹನದ ಚಕ್ರ ಸ್ಪೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿ, ಏಳು ಜನರಿಗೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಂಜನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ವಾಹನದ ಚಕ್ರ ಸ್ಪೋಟಗೊಂಡಿರುವುದಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲು‌ ಮಾಡಿಕೊಂಡಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದವರ ವಾಹನದ ಟೈರ್ ಸ್ಪೋಟ: ಓರ್ವ ಸಾವು, ಹಲವರಿಗೆ ಗಾಯ Read More »

ತಂದೆಗೆ ಔಷಧ ತರಲು ಹೋದ ಬಾಲಕನ ಮೇಲೆ ಬಸ್ ಹರಿದು ಸಾವು

ಬೆಂಗಳೂರು: ತಂದೆಗೆ ಔಷಧ ತರಲೆಂದು ಹೋದ ಬಾಲಕ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ಘಟನೆ ನಡೆದಿದೆ. ವರುಣ್ (16) ಎಂಬಾತನೇ ‌ಮೃತ ದುರ್ದೈವಿ. ಬಾಗಲೂರು – ಹೆಣ್ಣೂರು ‌ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ವರುಣ್ ಸಾವನ್ನಪ್ಪಿರುವುದಾಗಿದೆ. ಅಪ್ಪನಿಗೆ ಅನಾರೋಗ್ಯದ ಹಿನ್ನೆಲೆ ವರುಣ್ ಔಷಧ ತರಲು ಹೋಗಿದ್ದು, ರಸ್ತೆಯಲ್ಲಿ ತಲೆ‌ ತಿರುಗಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಒಮ್ಮೆಲೇ ಬಂದ ಖಾಸಗಿ ಬಸ್ ಆತನ ಮೇಲೆ ಹರಿದು ವರುಣ್ ದಾರುಣವಾಗಿ ‌ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ‌ಟಿವಿಯಲ್ಲಿ ‌ಸೆರೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ

ತಂದೆಗೆ ಔಷಧ ತರಲು ಹೋದ ಬಾಲಕನ ಮೇಲೆ ಬಸ್ ಹರಿದು ಸಾವು Read More »

ಬಿಸಿಲಿನ ಧಗೆ: ಕೂಲಿ ಕಾರ್ಮಿಕ ಸಾವು

ಯಾದಗಿರಿ: ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲಿನ ಬೇಗೆಗೆ ‌ಕೂಲಿ ಕಾರ್ಮಿಕನೊಬ್ಬ ‌ಮೃತಪಟ್ಟ ಘಟನೆ ನಡೆದಿದೆ. ಸಿದ್ದಪ್ಪ ಕೊಂಡಗುಳಿ ಎಂಬವರೇ ಮೃತ ದುರ್ದೈವಿ. ಸಿದ್ದಪ್ಪ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆಯೇ ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದ ಅವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಬಿಸಿಲು ಹೆಚ್ಚಾಗಿದ್ದ ಕಾರಣ ದಾಹ ತೀರಿಸಿಕೊಳ್ಳಲು ಮನೆಗೆ ಬಂದ ಕೂಡಲೇ ಅವರು ನೀರು ಕುಡಿದಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿರುವುದಾಗಿದೆ. ಬಡ ಕುಟುಂಬದ ಸಿದ್ದಪ್ಪ ಅವರ ಸಾವಿನಿಂದ ಮನೆಯವರು

ಬಿಸಿಲಿನ ಧಗೆ: ಕೂಲಿ ಕಾರ್ಮಿಕ ಸಾವು Read More »

ಬಾಡಿಗೆ ಮನೆಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕಡಬ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನೂಜಿಬಾಳ್ತಿಲ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ‌ಕೊಣಾಜೆ ನಿವಾಸಿ ಚೆನ್ನಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಚೆನ್ನಪ್ಪ ಪೂಜಾರಿ ಅವರು ನೂಜಿಬಾಳ್ತಿಲದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಮೇ. 1 ರಂದು ಮೃತರ ಪುತ್ರ ರವಿಚಂದ್ರ ಅವರಿಗೆ ಬಾಡಿಗೆ ಮನೆಯ ಮಾಲೀಕ ಕರೆ ಮಾಡಿ ಅವರ ತಂದೆ ಆತ್ಮಹತ್ಯೆಗೆ ಶರಣಾಗಿರುವ ಸಂಗತಿ ತಿಳಿಸಿದ್ದಾರೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ಮನೆಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top