ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಹತ್ಯೆ ಮಾಡಿದ 1 ಮತ್ತು 2 ನೇ ಆರೋಪಿಗಳಿಗೆ ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿ ಆದೇಶ ನೀಡಿದೆ.
ನವೆಂಬರ್ 6, 2023 ರಂದು ರಾತ್ರಿ ವೇಳೆ ನೆಹರೂ ನಗರದಲ್ಲಿ ಅಕ್ಷಯ್ ಕಲ್ಲೇಗನ ಮೇಲೆ ಭೀಕರ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣದ 1 ನೇ ಆರೋಪಿ ಪಡೀಲಿನ ಮನೀಶ್, 2 ನೇ ಆರೋಪಿ ಕೃಷ್ಣನಗರದ ಚೇತನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಈ ಮೊದಲು ಇವರು ಜಾಮೀನಿಗಾಗಿ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತವಾಗಿತ್ತು. ಜಾಮೀನಿಗಾಗಿ ಮತ್ತೊಮ್ಮೆ ಸಲ್ಲಿಸಿದ್ದ ಅರ್ಜಿ ಸಹ ಸದ್ಯ ತಿರಸ್ಕೃತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 3 ಮತ್ತು 4 ನೇ ಆರೋಪಿಗಳಿಗೆ ಈಗಾಗಲೇ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

























