ಧಾರ್ಮಿಕ

ಆದಾಯ ಗಳಿಕೆಯಲ್ಲಿ ಕುಕ್ಕೆ ದೇವಾಲಯ 15 ವರ್ಷಗಳಿಂದ ನಂಬರ್‌ ಒನ್‌

2025-26ನೇ ಸಾಲಿನಲ್ಲಿ ಹರಿದು ಬಂತು 167.89 ಕೋಟಿ ರೂ. ಆದಾಯ ಸುಬ್ರಹ್ಮಣ್ಯ : ಕರ್ನಾಟಕ ಮುಜರಾಯಿ ಇಲಾಖೆಯಡಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸತತ 15ನೇ ವರ್ಷ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 167.89 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ದೇವಾಲಯ ಒಟ್ಟು 167.89 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದರಲ್ಲಿ 85.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ […]

ಆದಾಯ ಗಳಿಕೆಯಲ್ಲಿ ಕುಕ್ಕೆ ದೇವಾಲಯ 15 ವರ್ಷಗಳಿಂದ ನಂಬರ್‌ ಒನ್‌ Read More »

ಅಕ್ಷಯ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಮಾಸ್ಟರಿ ಸೆಷನ್ ಯಶಸ್ವಿ

ಪುತ್ತೂರಿನ ಅಕ್ಷಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ, ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ “ಕ್ಲಾಸ್ ರೂಮ್‌ನಿಂದ ಉದ್ಯೋಗ ಜೀವನದತ್ತ – ಭವಿಷ್ಯಕ್ಕೆ ಸಿದ್ಧರಾಗಿ” ಎಂಬ ಆಶಯದೊಂದಿಗೆ ಸಾಫ್ಟ್ ಸ್ಕಿಲ್ಸ್ ಮಾಸ್ಟರಿ ಸೆಷನ್ ಕಾರ್ಯಕ್ರಮವು ಮೇ 8 ಮತ್ತು 9 ರಂದು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ವೃತ್ತಿಪರ ತರಬೇತುದಾರರಾದ ರಾಚ್ ಮಾನ್ಸಿಂಗ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ, ವೃತ್ತಿಪರ ವ್ಯಕ್ತಿತ್ವ ವಿಕಾಸ, ಕ್ರಿಟಿಕಲ್ ಥಿಂಕಿಂಗ್, ತಂಡದ ಕೆಲಸ, ಭಾವನಾತ್ಮಕ, ಬುದ್ಧಿಮತ್ತೆ ಹಾಗೂ

ಅಕ್ಷಯ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಮಾಸ್ಟರಿ ಸೆಷನ್ ಯಶಸ್ವಿ Read More »

ಮೇ 10ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ

ಆರ್ಟ್‌ ಅಫ್‌ ಲಿವಿಂಗ್‌ ಧ್ಯಾನ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ರವಿಶಂಕರ್‌ ಗುರೂಜಿ 70ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರವಿಶಂಕರ್‌ ಗುರೂಜಿ ಜನ್ಮದಿನ ನಿಮಿತ್ತ ನಿರ್ಮಿಸಲಾಗಿರುವ ಧ್ಯಾನ ಮಂದಿರವನ್ನು ಈ ಸಂದರ್ಭದಲ್ಲಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ಸುಮಾರ 4 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್‌ ಧ್ಯಾನಮಂದಿರವಾಗಿದ್ದು, ಅನೆಕ ಸೌಲಭ್ಯಗಳನ್ನು ಒಳಗೊಂಡಿದೆ. ಕಂಬ ರಹಿತ ಮುಖ್ಯ

ಮೇ 10ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಜಾಂಬವತಿ ಕಲ್ಯಾಣ ತಾಳಮದ್ದಳೆ

ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಇದರ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ಜರುಗಿತು. ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಹಿಮ್ಮೇಳದಲ್ಲಿ ಪದ್ಯಾಣ ಜಯರಾಮ್ ಭಟ್, ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ, ಅರ್ಥದಾರಿಗಳಾಗಿ ಭಾಸ್ಕರ ಬಾರ್ಯ ಮತ್ತು ಭಾಸ್ಕರ ಶೆಟ್ಟಿ ಸಾಲ್ಮರ (ಶ್ರೀಕೃಷ್ಣ), ಗುಡ್ಡಪ್ಪ ಬಲ್ಯ(ಜಾಂಬವಂತ), ಜಯರಾಮ ಭಟ್ ದೇವಸ್ಯ(ಬಲರಾಮ ), ದಿವಾಕರ ಆಚಾರ್ಯ ಗೇರುಕಟ್ಟೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಜಾಂಬವತಿ ಕಲ್ಯಾಣ ತಾಳಮದ್ದಳೆ Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅಮೈ ಮಾಡದಾರು ದೈವಸ್ಥಾನ ಕಡೇಶಿವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಅಮೈ ಮಾಡದಾರು ಕಡೇಶಿವಾಲಯದ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತದ ದಿನದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ದೈವಸ್ಥಾನದ ಆಡಳಿತ ಸಮಿತಿಯವರು ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ್ದರು.

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅಮೈ ಮಾಡದಾರು ದೈವಸ್ಥಾನ ಕಡೇಶಿವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ Read More »

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ

ಪುತ್ತೂರು: ಲೋಕ ಕಲ್ಯಾಣಕ್ಕಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಎ. 27 ರಂದು ವಿಶೇಷ ಸಿಯಾಳಾಭಿಷೇಕ ಸೇವೆ ನಡೆಯಲಿದೆ. ಶ್ರೀ ದೇವರಿಗೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ವರೆಗೆ ಸೀಯಾಳಾಭಿಷೇಕ ನಡೆಯಲಿದೆ. ಈ ಪುಣ್ಯ ಕಾರ್ಯಕ್ಕೆ ಶ್ರೀ ದೇವರಿಗೆ ಎಳನೀರು ಸಮರ್ಪಣೆ ಮಾಡುವ ಭಕ್ತರು ಆನದಿನ 9.30 ಕ್ಕೆ ಮುಂಚಿತವಾಗಿ ದೇವಾಲಯದ ಒಳಗೆ ಸಮರ್ಪಿಸುವಂತೆ ಮನವಿ ಮಾಡಲಾಗಿದೆ. ಈ ಮಹತ್ಕಾರ್ಯದಲ್ಲಿ ಹೆಚ್ಚಿನ ಭಕ್ತಬಾಂಧವರು ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವ್ಯವಸ್ಥಾಪನಾ ಮಂಡಳಿ ವಿನಂತಿಸಿಕೊಂಡಿದೆ.

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ Read More »

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಸಂಯೋಜನೆಯಲ್ಲಿ ಶ್ರೀ ಮಹಾಭಾರತ ಸರಣಿಯ 113 ನೇ ತಾಳಮದ್ದಳೆ ಕರಂಡಕಾಸುರ ಕಾಳಗ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ದೇವಿ ಪ್ರಸಾದ ಆಚಾರ್ಯ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ್ತ ಪಾಂಗಣ್ಣಾಯ ಸಹಕರಿಸಿದರು. ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ದಿನೇಶ್ ಭಟ್ ಬಳೆಂಜ (ಅರ್ಜುನ), ಶ್ರುತಿ ವಿಸ್ಮಿತ್ (ಶುಕತುಂಡ), ಅಂಬಾ ಪ್ರಸಾದ್ ಪಾತಾಳ (ಕಲುಷಗಾಮಿನಿ),

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ Read More »

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ

ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ದೈವಸ್ಥಾನ ವಿಟ್ಲ: ಕನ್ಯಾನದ ಸಮೀಪ ಕುಟ್ಟಿತಡ್ಕದಲ್ಲಿರುವ ಶ್ರೀ ವಿಷ್ಣುಮೂರ್ತಿ ವಯನಾಟ್‌ ಕುಲವನ್‌ ಕ್ಷೇತ್ರದ ವಾರ್ಷಿಕ ಕೆಂಡಸೇವೆ ಮೇ 2ರಂದು ಜರುಗಲಿದೆ. ಬೆಳಗ್ಗೆ 6ಕ್ಕೆ ಮೆಲೇರಿ ರಚನೆ, ಸಂಜೆ 6ಕ್ಕೆ ದೀಪ ಪ್ರಜ್ವಲನೆ, 7ಕ್ಕೆ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7.30ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಮೆಲೇರಿಗೆ ಅಗ್ನಿಸ್ಪರ್ಶ, 10ಕ್ಕೆ ಅನ್ನ ಸಂತರ್ಪಣೆ, ರಾತ್ರಿ 12ರಿಂದ ಕುಳಿಚ್ಚಾಟಂ ದರ್ಶನ, ಮೇ 3ರಂದು ಮುಂಜಾನೆ 4ಕ್ಕೆ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಬೆಳಗ್ಗೆ 5ಕ್ಕೆ

ಮೇ 2ರಂದು ಕನ್ಯಾನ ಕುಟ್ಟಿತಡ್ಕ ಕ್ಷೇತ್ರದಲ್ಲಿ ಕೆಂಡಸೇವೆ Read More »

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಶ್ರೀ ಮಹೇಶ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ (ರಿ )ಚಾರ – ಹೆಬ್ರಿ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ ಉಲೂಪಿ ಕಲ್ಯಾಣ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿ ಪ್ರಸಾದ್ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಶ್ರೀಧರ ಎಸ್. ಪಿ. ಕೃಷ್ಣಾಪುರ (ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಉಲೂಪಿ), ಸಂಜೀವ ಪಾರೆಂಕಿ (ಕೌರವ್ಯ), ಚಾರ ಪ್ರದೀಪ ಹೆಬ್ಬಾರ್( ದೃತರಾಷ್ಟ್ರ) ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ

ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ Read More »

ವಿಜೃಂಭಣೆಯಿಂದ ನಡೆದ ಪುತ್ತೂರು ಜಾತ್ರೆ: ಪಂಜಿಗುಡ್ಡೆ ಈಶ್ವರ ಭಟ್‌ಗೆ ಡಾ. ಪ್ರಸಾದ್ ಭಂಡಾರಿ ಪತ್ರ

ಪುತ್ತೂರು: ಈ ಬಾರಿ ನಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿದೆ.‌ ಈ ಬಗ್ಗೆ ಪುತ್ತೂರಿನ ಪ್ರಸಿದ್ಧ ಡಾಕ್ಟರ್ ಪ್ರಸಾದ್ ಭಂಡಾರಿ ಅವರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಈ ಬಾರಿಯ ಜಾತ್ರೆ ಸೂಪರ್. ಬಹಳ ವಿಜೃಂಭಣೆಯಿಂದ ನಡೆದಿದೆ. ಇಷ್ಟು ಗ್ರಾಂಡ್ ಆಗಿ ಎಂದೂ ಜಾತ್ರೆ ನಡೆದಿಲ್ಲ. ಎಲ್ಲರಿಗೂ ಕಾಫಿ, ತಿಂಡಿ, ಊಟ, ಅದೂ ತಿನ್ನುವಷ್ಟು. ಯಾವಾಗಲೂ ನೀವೇ ಆಡಳಿತ ನಡೆಸಿದಲ್ಲಿ ಒಳ್ಳೆಯದು. ದೇವರು

ವಿಜೃಂಭಣೆಯಿಂದ ನಡೆದ ಪುತ್ತೂರು ಜಾತ್ರೆ: ಪಂಜಿಗುಡ್ಡೆ ಈಶ್ವರ ಭಟ್‌ಗೆ ಡಾ. ಪ್ರಸಾದ್ ಭಂಡಾರಿ ಪತ್ರ Read More »

error: Content is protected !!
Scroll to Top