ದೇಶ

ಭಾರತದ ಪ್ರಮುಖ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ‌ಸಂಚು ಹೂಡಿದ 9 ಜನರ ಬಂಧನ

ನವದೆಹಲಿ: ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಪಂಜಾಬಿನಲ್ಲಿ ಉಗ್ರವಾದ ‌ಸಂಬಂಧಿ ಕುಕೃತ್ಯಗಳನ್ನು ನಡೆಸುವ ಸಂಚು ರೂಪಿಸುತ್ತಿದ್ದ 9 ಜನರನ್ನು ನವದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭೂಗತ‌ ಪಾತ್ರ ದಾವೂದ್ ಇಬ್ರಾಹಿಂ‌ನ ತಂಡದ ಜೊತೆಗೆ ನಿಕಟ ಸಂಬಂಧ ಇರುವುದಾಗಿಯೂ ಮೂಲಗಳು ತಿಳಿಸಿವೆ. ಬಂಧಿತ ಉಗ್ರರು ಬಹಳ ಸಮಯದಿಂದ ದೇಶದ ಪ್ರಮುಖ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಇದೀಗ ಪೊಲೀಸರು ಈ ಸಂಚುಕೋರರನ್ನು ಬಂಧಿಸಿದ್ದು, ದೊಡ್ಡ ಪ್ರಮಾಣದ […]

ಭಾರತದ ಪ್ರಮುಖ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ‌ಸಂಚು ಹೂಡಿದ 9 ಜನರ ಬಂಧನ Read More »

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ

ಕೊಲೆ ಆರೋಪದಲ್ಲಿ 20 ವರ್ಷ ರಿಯಾಧ್‌ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಕೋಝಿಕ್ಕೋಡ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ 20 ವರ್ಷಗಳಿಂದ ಮರಣದಂಡನೆ ಎದುರಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಸಮೀಪದ ರಾಮನಟ್ಟುಕರೆಯ ಕೊದಂಪುಳ ನಿವಾಸಿ ಅಬ್ದುಲ್ ರಹೀಮ್ ಸುಮಾರು 34 ಕೋಟಿ ರೂಪಾಯಿ ರಕ್ತನಿಧಿ (ಬ್ಲಡ್ ಮನಿ) ಪಾವತಿಸಿದ ನಂತರ ಬಿಡುಗಡೆಯಾಗಿ ಈದ್ ಹಬ್ಬದ ದಿನದಂದು ತಮ್ಮ ಸ್ವಗೃಹಕ್ಕೆ ಮರಳಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದ ರಹೀಮ್ ಸೌದಿಗೆ ಹೋದ ಕೇವಲ ಒಂದು ತಿಂಗಳ ಒಳಗಾಗಿ ತಮ್ಮ ಮಾಲೀಕನ ಮಗನ ಜೀವ ರಕ್ಷಕ

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ Read More »

ಮುಂಗಾರು ಆಗಮನ ತುಸು ವಿಳಂಬ : ಜೂನ್‌ 4ರಂದು ಕರಾವಳಿ ಪ್ರವೇಶ ನಿರೀಕ್ಷೆ

ಜೂನ್‌ ಎರಡನೇ ವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಮಂಗಳೂರು : ಕರಾವಳಿಗೆ ಮುಂಗಾರು ಪ್ರವೇಶ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಜೂನ್ 4ರ ಸುಮಾರಿಗೆ ಮುಂಗಾರು ಕರಾವಳಿಗೆ ಪ್ರವೇಶಿಸುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಹೆಚ್ಚಿನ ತಾಪಮಾನ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರಾಸರಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಮತ್ತು 36 ಡಿಗ್ರಿ ಸೆಲ್ಸಿಯಸ್

ಮುಂಗಾರು ಆಗಮನ ತುಸು ವಿಳಂಬ : ಜೂನ್‌ 4ರಂದು ಕರಾವಳಿ ಪ್ರವೇಶ ನಿರೀಕ್ಷೆ Read More »

ಕೇರಳ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣವಾಗಿ ಹಾಡದ ‌ವಂದೇ ಮಾತರಂ: ರಾಜ್ಯಪಾಲರ ಅಸಮಾಧಾನ

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಮಾಡದೇ ಇರುವುದಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಗತಿ ರಾಜ್ಯಪಾಲರ ಕಚೇರಿ ಮತ್ತು ಕೇರಳ ರಾಜ್ಯ ಸರ್ಕಾರದ ನಡುವಿನ ಉದ್ವಿಗ್ನತೆಗೆ ಕಾರಣವಾಗಿದೆ. ಹದಿನಾರನೇ ಕೇರಳ ವಿಧಾನಸಭಾ ಮೊದಲ ಅಧಿವೇಶನದಲ್ಲಿ ಕೇರಳ ಪೊಲೀಸ್ ಬ್ಯಾಂಡ್ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ನುಡಿಸದೇ ಇರುವ ಕಾರಣಕ್ಕೆ ಹೊಸ ರಾಜಕೀಯ ಕೋಲಾಹಲ‌ ಉಂಟಾಗಿರುವುದಾಗಿದೆ. ರಾಜ್ಯಪಾಲರು ತಾವು ಹಾಜರಿದ್ದಾಗ ವಿಧಾನಸಭೆಯಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡದ

ಕೇರಳ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣವಾಗಿ ಹಾಡದ ‌ವಂದೇ ಮಾತರಂ: ರಾಜ್ಯಪಾಲರ ಅಸಮಾಧಾನ Read More »

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು

ನಿರ್ಮಾಣ ಹಂತದಲ್ಲಿದ್ದ ಸೇತುವೆ ಚಂಡಮಾರುತದ ಹೊಡೆತಕ್ಕೆ ಧರಾಶಾಯಿ ಲಖನೌ: ಚಂಡಮಾರುತಕ್ಕೆ ಸಿಕ್ಕಿ ಬೆಟ್ಟಾ ನದಿಯ ಮೇಲೆ‌ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 6 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ನಿರ್ಮಿಸಿದ್ದ ಸೇತುವೆಯೇ ಈಗ ಜನರ ಜೀವಕ್ಕೆ ಸಂಚಕಾರ ತಂದಿದೆ. ಘಟನೆಯಲ್ಲಿ ಈವರೆಗೆ 6 ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು Read More »

ಗಿರ್‌ ವನ್ಯಧಾಮದಲ್ಲಿ 7 ಸಿಂಹಗಳ ನಿಗೂಢ ಸಾವು

ವೈರಸ್‌ ಸೋಂಕಿನ ಶಂಕೆಯಲ್ಲಿ 7 ಸಿಂಹಗಳು ಕ್ವಾರಂಟೈನ್‌ ಗಾಂಧಿನಗರ: ಏಷ್ಯಾಟಿಕ್‌ ಸಿಂಹಗಳ ಆವಾಸಸ್ಥಾನವೆಂದೇ ಖ್ಯಾತಿ ಪಡೆದಿರುವ ಗಿರ್‌ ಅರಣ್ಯ ಪ್ರದೇಶದಲ್ಲಿ 7 ಸಿಂಹಗಳ ಸರಣಿ ಸಾವು ಸಂಭವಿಸಿದೆ. ಗುಜರಾತ್‌ನ ಗಿರ್‌ ಕಾಡಿನಲ್ಲಿ ಸಿಂಹಗಳ ನಿರಂತರ ಸಾವು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದಲ್ಲಿ ಭಾರಿ ಕಳವಳ ಹುಟ್ಟುಹಾಕಿದೆ. ಕಳೆದ ಕೆಲ ದಿನಗಳಲ್ಲಿ 7 ಸಿಂಹಗಳು ಸಾವನ್ನಪ್ಪಿದ್ದು, ನಿಗೂಢ ವೈರಸ್‌ನ ಆತಂಕ ಎದುರಾಗಿದೆ. ಇದರಿಂದಾಗಿ ಸಾವನ್ನಪ್ಪಿದ ಅರಣ್ಯ ವ್ಯಾಪ್ತಿಯಲ್ಲಿರುವ 17 ಸಿಂಹಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಪೈಕಿ 8

ಗಿರ್‌ ವನ್ಯಧಾಮದಲ್ಲಿ 7 ಸಿಂಹಗಳ ನಿಗೂಢ ಸಾವು Read More »

ಟಿಎಂಸಿ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ವಶ

ಪ್ಲಾಸ್ಟಿಕ್‌ ಚೀಲ, ಬ್ಯಾಗ್‌ಗಳಲ್ಲಿ 500 ರೂ. ನೋಟುಗಳನ್ನು ತುಂಬಿ ಹೂತಿಟ್ಟಿದ್ದರು ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ಬುಧವಾರ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಡಲಾಗಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳಿಂದ ತುಂಬಿದ್ದ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬದುರಿಯಾ ಪುರಸಭೆಯ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಅವರನ್ನು ಸರ್ಕಾರದ ಪರಿಹಾರ ಸಾಮಗ್ರಿ ದುರುಪಯೋಗ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂಧಿಸಿದ ನಂತರ, ಪೊಲೀಸರಿಗೆ ಸಿಕ್ಕ ಖಚಿತ

ಟಿಎಂಸಿ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ವಶ Read More »

ಐಪಿಎಲ್‌ ಸಮಯ ಬದಲಾವಣೆಗೆ ಬಿಸಿಸಿಐ ಚಿಂತನೆ

ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸಲು ಒಲವು ನವದೆಹಲಿ: ಐಪಿಎಲ್‌ ಪಂದ್ಯಗಳನ್ನು ಮಾರ್ಚ್‌-ಮೇ ತಿಂಗಳ ಬದಲಾಗಿ ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.ಈ ಕುರಿತು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಸಂದರ್ಶನವೊಂದರಲ್ಲಿ ಮಾತನಾಡಿ, ಐಪಿಎಲ್‌ ಆವೃತ್ತಿಯ ಸಮಯ ಬದಲಾವಣೆ ಬಗ್ಗೆ ನಾವು ಪ್ರಸಾರಕರ ಜೊತೆ ಚರ್ಚಿಸಬೇಕು. ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳು ದೀಪಾವಳಿ ಮತ್ತು ದಸರಾ ಹಬ್ಬದ ಸಮಯವಾಗಿರುವುದರಿಂದ ಜಾಹೀರಾತುದಾರರು ಹಾಗೂ ವ್ಯವಹಾರ ದೃಷ್ಟಿಯಿಂದ ಅತ್ಯಂತ ಲಾಭದಾಯಕ ಹಾಗೂ ಸೂಕ್ತವಾದ ಸಮಯವಾಗಿದೆ. ಹೀಗಾಗಿ ಮಾರ್ಚ್‌-ಮೇ ತಿಂಗಳಿಗಿಂತ ಈ ಸಮಯ ಉತ್ತಮವಾಗಿರುತ್ತದೆ

ಐಪಿಎಲ್‌ ಸಮಯ ಬದಲಾವಣೆಗೆ ಬಿಸಿಸಿಐ ಚಿಂತನೆ Read More »

ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್‌ ಡ್ರಗ್ಸ್‌ ವಶ : ಮೂವರ ಬಂಧನ

ಸಮುದ್ರ ಮಧ್ಯೆ ಲಂಗರು ಹಾಕಿ ಮಾದಕ ವಸ್ತು ವಿಲೇವಾರಿ ಮಾಡುತ್ತಿದ್ದಾಗ ಕಾರ್ಯಾಚರಣೆ ಅಹಮದಾಬಾದ್: ಗುಜರಾತ್‌ನ ಮುದ್ರಾ ಕರಾವಳಿ ತೀರದಲ್ಲಿ ಭಾರತೀಯ ತಟರಕ್ಷಕ ಪಡೆ (ಐಸಿಜಿ) ಮತ್ತು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ, ಸರಕು ಸಾಗಣೆ ಹಡಗೊಂದರಿಂದ ಸುಮಾರು 1,150 ಕೋಟಿ ರೂಪಾಯಿ ಮೌಲ್ಯದ 115 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಸಮುದ್ರ ಮಾರ್ಗದ ಮೂಲಕ ಮಾದಕ ದ್ರವ್ಯ ಸಾಗಾಟವಾಗುತ್ತಿರುವ ಬಗ್ಗೆ ಗುಜರಾತ್ ಎಟಿಎಸ್ ನೀಡಿದ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ, ಮೇ

ಹಡಗಿನಲ್ಲಿ ತಂದ 1,150 ಕೋ. ರೂ. ಮೌಲ್ಯದ ಕೊಕೇನ್‌ ಡ್ರಗ್ಸ್‌ ವಶ : ಮೂವರ ಬಂಧನ Read More »

ಎಸ್‌ಐಆರ್‌ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಚುನಾವಣಾ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಪೌರತ್ವ ರದ್ದಾಗುವುದಿಲ್ಲ ಎಂಬ ಮಹತ್ವದ ತೀರ್ಪು ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಿಂಧುತ್ವವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಈ ಪ್ರಕ್ರಿಯೆಯ ಅಡಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದರಿಂದ ಒಬ್ಬ ವ್ಯಕ್ತಿಯ ಪೌರತ್ವ ನಿರ್ಧಾರವಾಗುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. ಎಸ್‌ಐಆರ್ (SIR) ಪ್ರಕ್ರಿಯೆಯಡಿ ನಡೆಸಲಾಗುವ ತನಿಖೆಯು ಪೌರತ್ವವನ್ನು ನಿರ್ಣಯಿಸುವುದಕ್ಕಾಗಿ ಅಲ್ಲ, ಬದಲಿಗೆ ಅದು ಕೇವಲ ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ (ಮತದಾನದ ಹಕ್ಕಿಗೆ) ಮಾತ್ರ ಸೀಮಿತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು

ಎಸ್‌ಐಆರ್‌ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ Read More »

error: Content is protected !!
Scroll to Top