ದೈವದ ಭಂಡಾರ ಹೋಗುತ್ತಿದ್ದಾಗ ಮುರಿದು ಬಿದ್ದ ಕಾಲು ಸಂಕ: ಹಲವರಿಗೆ ಗಾಯ

ಮೂಡಬಿದ್ರೆ: ದೈವದ ಭಂಡಾರ ಆಗಮನದ ವೇಳೆ ಕಾಲು ಸಂಕ ಮುರಿದು ಬಿದ್ದ ಪರಿಣಾಮ ಅವಘಡ ಸಂಭವಿಸಿದ ಘಟನೆ ಪುಚ್ಚೆಮೊಗರು ಗ್ರಾಮದ ಬಾವದಬೈಲಿನಲ್ಲಿ ‌ನಡೆದಿದೆ. ಈ ದುರಂತದಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸಾ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಕೋಡೆ ಬರ್ಕೆ ಧರ್ಮ ನೇಮದ ಹಿನ್ನೆಲೆ ಪಲ್ಲಕ್ಕಿಯಲ್ಲಿ ಹೊತ್ತು ದೈವದ ಭಂಡಾರವನ್ನು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಲು ಸಂಕ ಮುರಿದು ಬಿದ್ದಿದ್ದು, ಪಲ್ಲಕ್ಕಿ ಸಮೇತ ಭಂಡಾರ ತರುತ್ತಿದ್ದ ಭಕ್ತರು ಮುರಿದ ಸಂಕದ ಕೆಳಕ್ಕೆ ಬಿದ್ದಿದ್ದಾರೆ. […]

ದೈವದ ಭಂಡಾರ ಹೋಗುತ್ತಿದ್ದಾಗ ಮುರಿದು ಬಿದ್ದ ಕಾಲು ಸಂಕ: ಹಲವರಿಗೆ ಗಾಯ Read More »

ಕಾವೇರಿ ನದಿಗಿಳಿದಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ: ಮಹಿಳೆಗೆ ಗಾಯ

ರಾಮನಗರ: ಕಾವೇರಿ ನದಿಯಲ್ಲಿ ಪ್ರವಾಸವನ್ನು ಆಸ್ವಾದಿಸುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಮೇಕೆದಾಟು ಬಳಿ ನಡೆದಿದೆ. ಕನಕಪುರದ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿದು ದಣಿವಾರಿಕೆಗೆ ಬಂದ ಆನೆ ಏಕಾಏಕಿ ನದಿ ನೀರಿಗೆ ಇಳಿದಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಿದೆ. ಕಾಡಾನೆ ‌ಕಂಡ ಪ್ರವಾಸಿಗರು ಅಲ್ಲಿಂದ ಓಟಕ್ಕಿತ್ತಿದ್ದು, ಓರ್ವ ಮಹಿಳೆಯ ಮೇಲೆ ಆನೆ ದಾಳಿ ನಡೆಸಿ ಕಾಡೊಳಕ್ಕೆ ಓಡಿದೆ. ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರ ಮೊಬೈಲ್‌ನಲ್ಲಿ ಕಾ

ಕಾವೇರಿ ನದಿಗಿಳಿದಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ: ಮಹಿಳೆಗೆ ಗಾಯ Read More »

ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋ ಸೈಡ್ ಹಾಕುವಂತೆ ಹೇಳಿದ್ದಕ್ಕೆ ‌ಸಹೋದರರ ಮೇಲೆ ಹಲ್ಲೆ: ದೂರು ದಾಖಲು

ಕಲಬುರ್ಗಿ: ರಸ್ತೆ ನಡುವೆ ನಿಂತಿದ್ದ ಅಟೋ‌ವನ್ನು ಪಕ್ಕಕ್ಕೆ ನಿಲ್ಲಿಸುವಂತೆ ಮನವಿ ಮಾಡಿದ ವಿಷಯದಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ‌ನಡೆದ ಘಟನೆ ಭೀಮಳ್ಳಿಯಲ್ಲಿ ನಡೆದಿದೆ. ಚಿತ್ತಾಪುರದ ನಾಲವಾರ ‌ನಿವಾಸಿಗಳಾದ ತೋಟೇಂದ್ರ ಮತ್ತು ಸುನಿಲ್ ಎಂಬಿಬ್ಬರು ಸಹೋದರರು ತಮ್ಮ ಸಹೋದರಿಯ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಸಹೋದರಿಯನ್ನು ‌ಮನೆಗೆ ಬಿಡುವ ಸಲುವಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಸ್ತೆಯ ಮಧ್ಯೆ ಆಟೋ ಒಂದು ನಿಲ್ಲಿಸಲಾಗಿದ್ದು, ಅದನ್ನು ಪಕ್ಕಕ್ಕೆ ಹಾಕುವಂತೆ ಸಹೋದರರು ಮನವಿ ಮಾಡಿದ್ದಾರೆ. ಆದರೆ

ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋ ಸೈಡ್ ಹಾಕುವಂತೆ ಹೇಳಿದ್ದಕ್ಕೆ ‌ಸಹೋದರರ ಮೇಲೆ ಹಲ್ಲೆ: ದೂರು ದಾಖಲು Read More »

ಬಿಜೆಪಿಗೆ ಆಸ್ತಿಯಾಗುತ್ತಾರಾ ರಾಘವ್‌ ಚಡ್ಡಾ?

ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಅವರ ಪಾತ್ರದ ಬಗ್ಗೆ ಚರ್ಚೆ ಹೊಸದಿಲ್ಲಿ : ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿ ಆಪ್‌ನ ಏಳು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆಯಾಗಿರುವುದು ಆಮ್‌ ಆದ್ಮಿ ಪಾರ್ಟಿಗೆ (ಆಪ್‌) ಆಗಿರುವ ಭಾರಿ ಹಿನ್ನಡೆ ಎಂದು ಭಾವಿಸಲಾಗಿದೆ. ರಾಜ್ಯಸಭೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ನಾಯಕರಾಗಿದ್ದ ರಾಘವ್‌ ಚಡ್ಡಾ ಬಿಜೆಪಿ ಸೇರುವ ಸುಳಿವು ಮೊದಲೇ ಇತ್ತು. ಆದರೆ ಅವರು ತನ್ನೊಂದಿಗೆ ಇನ್ನೂ ಆರು ಮಂದಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ಆಪ್‌ ಪರಮೋಚ್ಚ ನಾಯಕ ಅರವಿಂದ

ಬಿಜೆಪಿಗೆ ಆಸ್ತಿಯಾಗುತ್ತಾರಾ ರಾಘವ್‌ ಚಡ್ಡಾ? Read More »

ಅಮೆರಿಕ-ಇರಾನ್‌ ಇನ್ನೊಂದು ಸುತ್ತಿನ ಮಾತುಕತೆಗೆ ತಯಾರಿ

ಇಸ್ಲಾಮಾಬಾದ್‌ಗೆ ಬಂದ ಇರಾನ್‌ ರಾಜತಾಂತ್ರಿಕರ ನಿಯೋಗ ಇಸ್ಲಾಮಾಬಾದ್‌: ಇರಾನ್‌- ಅಮೆರಿಕ ಮಧ್ಯೆ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಕೌಂಟ್‌ಡೌನ್‌ ಆರಂಭವಾಗಿದೆ. ಸಂಧಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಗೆ ಶುಕ್ರವಾರ ತಡರಾತ್ರಿ ಆಗಮಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರನ್ನು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ

ಅಮೆರಿಕ-ಇರಾನ್‌ ಇನ್ನೊಂದು ಸುತ್ತಿನ ಮಾತುಕತೆಗೆ ತಯಾರಿ Read More »

ಕಲ್ಲು ತೂರಾಟ ಮಾಡಿದವರನ್ನು ಬಿಡುಗಡೆ ಮಾಡಲು ಖಾದರ್‌ ಪತ್ರ : ಹಿಂದೂ ಮುಖಂಡರ ಆಕ್ರೋಶ

ಆಳಂದದಲ್ಲಿ ಹಿಂದೂ ಮುಖಂಡರು, ಡಿಸಿ, ಎಸ್ಪಿ ಮೇಲೆ ಕಲ್ಲು ತೂರಿದ ಪ್ರಕರಣ ಬೆಂಗಳೂರು: ಕಲಬುರಗಿಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವಂತೆ ಸ್ಪೀಕರ್‌ ಯು.ಟಿ. ಖಾದರ್ ಗೃಹ ಸಚಿವ ಜಿ.ಪರಮೇಶ್ವರ್​ಗೆ ಬರೆದಿರುವ ಪತ್ರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಅವರ ಈ ನಡೆಯನ್ನು ಹಿಂದೂ ಸಂಘಟನೆಗಳು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ. ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು

ಕಲ್ಲು ತೂರಾಟ ಮಾಡಿದವರನ್ನು ಬಿಡುಗಡೆ ಮಾಡಲು ಖಾದರ್‌ ಪತ್ರ : ಹಿಂದೂ ಮುಖಂಡರ ಆಕ್ರೋಶ Read More »

ಮೇ 1ರಿಂದ ಮದ್ಯದ ಬೆಲೆ ಏರಿಕೆ?

ಅಲ್ಕೋಹಾಲ್‌ ಪ್ರಮಾಣದ ಆಧಾರದಲ್ಲಿ ಬೆಲೆ ನಿರ್ಧರಿಸಲು ಅಧಿಸೂಚನೆ ಬೆಂಗಳೂರು: ಸರ್ಕಾರ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಲು ಸರ್ಕಾರ ಸಜ್ಜಾಗಿದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ

ಮೇ 1ರಿಂದ ಮದ್ಯದ ಬೆಲೆ ಏರಿಕೆ? Read More »

ದ.ಕ. ಜಿಲ್ಲೆಯ ಎಲ್ಲಾ 11 ಮೊರಾರ್ಜಿ, ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 100% ಫಲಿತಾಂಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇದರ ಅಡಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಎರಡು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳು, ಒಂದು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಇರುವ ಈ ಶಾಲೆಗಳು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ವಿವಿಧ ಉಚಿತ

ದ.ಕ. ಜಿಲ್ಲೆಯ ಎಲ್ಲಾ 11 ಮೊರಾರ್ಜಿ, ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 100% ಫಲಿತಾಂಶ Read More »

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಸಂಯೋಜನೆಯಲ್ಲಿ ಶ್ರೀ ಮಹಾಭಾರತ ಸರಣಿಯ 113 ನೇ ತಾಳಮದ್ದಳೆ ಕರಂಡಕಾಸುರ ಕಾಳಗ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ದೇವಿ ಪ್ರಸಾದ ಆಚಾರ್ಯ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ್ತ ಪಾಂಗಣ್ಣಾಯ ಸಹಕರಿಸಿದರು. ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ದಿನೇಶ್ ಭಟ್ ಬಳೆಂಜ (ಅರ್ಜುನ), ಶ್ರುತಿ ವಿಸ್ಮಿತ್ (ಶುಕತುಂಡ), ಅಂಬಾ ಪ್ರಸಾದ್ ಪಾತಾಳ (ಕಲುಷಗಾಮಿನಿ),

ಕರಾಯ ಬ್ರಹ್ಮಕಲಶದಲ್ಲಿ ಕರಂಡಕಾಸುರ ಕಾಳಗ ತಾಳಮದ್ದಳೆ Read More »

ಅಕ್ಷಯ್ ಕಲ್ಲೇಗ ಹತ್ಯೆ: 1 ಮತ್ತು 2 ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ಪುತ್ತೂರು: ಕಲ್ಲೇಗ ‌ಟೈಗರ್ಸ್ ಹುಲಿ ವೇಷ ತಂಡದ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಹತ್ಯೆ ಮಾಡಿದ 1 ಮತ್ತು 2 ನೇ ಆರೋಪಿಗಳಿಗೆ ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿ ಆದೇಶ ನೀಡಿದೆ. ನವೆಂಬರ್ 6, 2023 ರಂದು ರಾತ್ರಿ ವೇಳೆ ನೆಹರೂ ನಗರದಲ್ಲಿ ಅಕ್ಷಯ್ ಕಲ್ಲೇಗನ ಮೇಲೆ ಭೀಕರ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣದ 1 ನೇ ಆರೋಪಿ ಪಡೀಲಿನ ಮನೀಶ್, 2 ನೇ ಆರೋಪಿ ಕೃಷ್ಣನಗರದ ‌ಚೇತನ್

ಅಕ್ಷಯ್ ಕಲ್ಲೇಗ ಹತ್ಯೆ: 1 ಮತ್ತು 2 ನೇ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ Read More »

error: Content is protected !!
Scroll to Top