ಮದುವೆ ಮಂಟಪದಿಂದ 1 ಕೋ.ರೂ. ಆಭರಣ ಕಳವು

ಬೆಂಗಳೂರು : ಮದುವೆ ಮನೆಯಲ್ಲಿ ಕೈಚಳಕ ತೋರಿರುವ ಕಳ್ಳರು ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಅಮೆರಿಕದಲ್ಲಿ ವಾಸವಿರುವ 52 ವರ್ಷದ ವೈದ್ಯೆ ಡಾ.ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ಕದ್ದಿರುವ ಪ್ರಕರಣ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಘಟನೆ ಸಂಬಂಧ ಡಾ.ಸಿರುವೆಲ್ಲ ಶ್ರೀದೇವಿ ಗುರುವಾರ ಮಧ್ಯಾಹ್ನ ದೂರು […]

ಮದುವೆ ಮಂಟಪದಿಂದ 1 ಕೋ.ರೂ. ಆಭರಣ ಕಳವು Read More »

ಕಾಣೆಯಾಗಿದ್ದ ಉಪನ್ಯಾಸಕನ ‌ಶವ ಬಾವಿಯಲ್ಲಿ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಅವರು ಬಾವಿಗೆ ಹಾರಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಉಡುಪಿಯ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಶಿರಸಿಯ ಗಣೇಶ್ ಭಟ್ (55) ಎಂಬವರೇ ಮೃತರು. ಇವರು ಅವಿವಾಹಿತರಾಗಿದ್ದು, ಎಂ.ಜಿ.ಎಂ. ಕಾಲೇಜಿನ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ನಾಪತ್ತೆಯಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವವನ್ನು ಅಗ್ನಿಶಾಮಕ ದಳ ಬಾವಿಯಿಂದ ಮೇಲೆತ್ತಿದೆ. ಉಡುಪಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾಣೆಯಾಗಿದ್ದ ಉಪನ್ಯಾಸಕನ ‌ಶವ ಬಾವಿಯಲ್ಲಿ ಪತ್ತೆ Read More »

ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕನ ಸಾವು

ಪುತ್ತೂರು: ಬಾಲಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಚ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ. ಮೃತನನ್ನು ನೇರಳಕಟ್ಟೆ ‌ಕೊಡಾಜೆಯ ಶಹೀರ್(15) ಎಂದು ಗುರುತಿಸಲಾಗಿದೆ. ನೇರಳಕಟ್ಟೆಯ ಗಣೇಶ್ ನಗರದ ಫ್ಲಾಟ್ ಒಂದರಲ್ಲಿ ಬಾಲಕ ಹೆತ್ತವರ ಜೊತೆಗೆ ವಾಸವಾಗಿದ್ದು, ಶಾಲೆಗೆ ರಜೆಯಾದ ಕಾರಣ ಗಡಿಯಾರದಲ್ಲಿರುವ ‌ತನ್ನ ಅಜ್ಜನ ಮನೆಗೆ ತೆರಳಿದ್ದ. ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಆತ‌ ಸಾವನ್ನಪ್ಪಿದ್ದಾನೆ.

ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕನ ಸಾವು Read More »

ಸೋಣಂದೂರಿನ ವ್ಯಕ್ತಿ ನಾಪತ್ತೆ

ಉಪ್ಪಿನಂಗಡಿ: ಕಡಬದ ಶಿರಾಡಿಯ ಸೋಣಂದೂರಿನ 44 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ತಡವಾಗಿ ವರದಿಯಾಗಿದೆ. ನಾಪತ್ತೆಯಾದವರನ್ನು ಜಗದೀಶ್ ಎಸ್. ಎಸ್. ಎಂದು ಗುರುತಿಸಲಾಗಿದೆ. ಸೋಣಂದೂರಿನಲ್ಲಿ ಪ್ರತ್ಯೇಕ ಮನೆಯಲ್ಲಿ ಇವರು ವಾಸವಾಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಇವರ ಪತ್ನಿ ಮತ್ತು ಮಕ್ಕಳು ಹಾಸನದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಂದೆಯ ಮನೆಯಲ್ಲಿ ಪ್ರತಿನಿತ್ಯ ಅವರು ಊಟ, ಚಹಾ ಸೇವನೆಗೆ ಹೋಗುತ್ತಿದ್ದರು. ಎ. 6 ರಂದು ಬೆಳಗ್ಗೆ 9 ಗಂಟೆಯ ವರೆಗೆ ಮನೆಯಲ್ಲಿ ಇದ್ದ ಅವರು, ಗಂಟೆ 10.30 ಆದರೂ

ಸೋಣಂದೂರಿನ ವ್ಯಕ್ತಿ ನಾಪತ್ತೆ Read More »

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಾಸ್ತಾನು ಪೊಲೀಸ್ ವಶಕ್ಕೆ

ಕೊಪ್ಪಳ: ಜಮೀನೊಂದರ ಗೋದಾಮಿನಲ್ಲಿ ಅನ್ನ ಭಾಗ್ಯ ಯೋಜನೆಯ ಸುಮಾರು 150 – 200 ಟನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಘಟನೆ ಕೂಕನಹಳ್ಳಿಯಲ್ಲಿ ನಡೆದಿದ್ದು, ಇದನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಳೆಪ್ಪ ಎಂಬವರ ಜಮೀನಿನ ಗೋದಾಮಿನಲ್ಲಿ ಅಕ್ರಮವಾಗಿ ಅನ್ನ ಭಾಗ್ಯ ಯೋಜನೆಯ ಅಕ್ಕಿ ದಾಸ್ತಾನಿಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿರುವುದಾಗಿದೆ. ಸುಮಾರು ಸಾವಿರಕ್ಕೂ ಅಧಿಕ ಪಡಿತರ ತುಂಬಿದ ಗೋಣಿಗಳು ಪೊಲೀಸರ ವಶಕ್ಕೆ ಸಿಕ್ಕಿದೆ‌. ಆಹಾರ ಇಲಾಖೆಯ ಅಧಿಕಾರಗಳು ಸಹ ಸ್ಥಳದಲ್ಲಿ ಸಿಕ್ಕಿರುವ ಅಕ್ಕಿಯನ್ನು

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಾಸ್ತಾನು ಪೊಲೀಸ್ ವಶಕ್ಕೆ Read More »

ಮನೆಯಿಂದ ನಗ – ನಗದು ಲೂಟಿ: ಮನೆ ಕೆಲಸಕ್ಕಿದ್ದ ಮಹಿಳೆಯ ಮೇಲೆ ಸಂಶಯ

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಮನೆಯೊಂದರಿಂದ ‌ಸುಮಾರು 3.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೇಲೆ ಕಳ್ಳತನದ ಸಂದೇಹ ಬಂದಿದೆ. ಎಪಿಎಂಸಿ ರಸ್ತೆಯ ಮಹಾಲಿಂಗೇಶ್ವರ ನಿಲಯದ ಕೆ. ಎಸ್. ಮಹಾದೇವಸ್ವಾಮಿ ಅವರು ಮನೆ ಕೆಲಸಕ್ಕೆ ಮೈಸೂರಿನ ಮಹಿಳೆಯನ್ನು ಕಳೆದ ಜನವರಿ ತಿಂಗಳಿನಲ್ಲಿ ಕರೆದುಕೊಂಡು ಬಂದಿದ್ದರು. ಜ. 2 – 25 ರ ವರೆಗೆ ಮನೆಗೆಲಸ ಮಾಡಿದ್ದ ಆಕೆ ಬಳಿಕ ಕೆಲಸ

ಮನೆಯಿಂದ ನಗ – ನಗದು ಲೂಟಿ: ಮನೆ ಕೆಲಸಕ್ಕಿದ್ದ ಮಹಿಳೆಯ ಮೇಲೆ ಸಂಶಯ Read More »

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ

ಪುತ್ತೂರು: ಲೋಕ ಕಲ್ಯಾಣಕ್ಕಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಎ. 27 ರಂದು ವಿಶೇಷ ಸಿಯಾಳಾಭಿಷೇಕ ಸೇವೆ ನಡೆಯಲಿದೆ. ಶ್ರೀ ದೇವರಿಗೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯ ವರೆಗೆ ಸೀಯಾಳಾಭಿಷೇಕ ನಡೆಯಲಿದೆ. ಈ ಪುಣ್ಯ ಕಾರ್ಯಕ್ಕೆ ಶ್ರೀ ದೇವರಿಗೆ ಎಳನೀರು ಸಮರ್ಪಣೆ ಮಾಡುವ ಭಕ್ತರು ಆನದಿನ 9.30 ಕ್ಕೆ ಮುಂಚಿತವಾಗಿ ದೇವಾಲಯದ ಒಳಗೆ ಸಮರ್ಪಿಸುವಂತೆ ಮನವಿ ಮಾಡಲಾಗಿದೆ. ಈ ಮಹತ್ಕಾರ್ಯದಲ್ಲಿ ಹೆಚ್ಚಿನ ಭಕ್ತಬಾಂಧವರು ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವ್ಯವಸ್ಥಾಪನಾ ಮಂಡಳಿ ವಿನಂತಿಸಿಕೊಂಡಿದೆ.

ಎ. 27: ಲೋಕ ಕಲ್ಯಾಣಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸಿಯಾಳಾಭಿಷೇಕ Read More »

ಮಾಜಿ ಪತ್ನಿಯ ಸಂಬಂಧಿಕರ ‌ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್

ಮಂಗಳೂರು: ಕುಟುಂಬ ಕಲಹದ ಹಿನ್ನೆಲೆ ಪತ್ನಿಯ ಸಂಬಂಧಿಕರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ವಾಮಂಜೂರಿನ ನವೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೀನ್ ಪತ್ನಿ ವಿಚ್ಛೇದನ ಪಡೆದು ಕೆಲವು ತಿಂಗಳುಗಳಿಂದ ಜೋಕಟ್ಟೆಯಲ್ಲಿ ಬೇರೆ ವಾಸವಿದ್ದರು. ಇದೇ ಸಿಟ್ಟಿನಲ್ಲಿ ನವೀನ್ ಕತ್ತಿ ಹಿಡಿದು ಜೋಕಟ್ಟೆಗೆ ರಾತ್ರಿ ಬೈಕ್‌ನಲ್ಲಿ ಆಗಮಿಸಿದ್ದಾನೆ. ನವೀನ್ ಕಳವರದ ದೇವಿಪ್ರಸಾದ್ ಎಂಬವರ ಮೇಲೆ ಹಲ್ಲೆ ನಡೆಸುವ ಹಿನ್ನೆಲೆ ಆಯುಧದ ಜೊತೆ ಬಂದಿದ್ದಾನೆ. ದೇವಿಪ್ರಸಾದ್ ಮತ್ತು ಪೋಷಕರ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದಾನೆ. ತಕ್ಷಣವೇ ದೇವಿಪ್ರಸಾದ್

ಮಾಜಿ ಪತ್ನಿಯ ಸಂಬಂಧಿಕರ ‌ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್ Read More »

ಜನಿವಾರ ತೆಗೆಸಿದ ಪ್ರಕರಣ : ಕಾಲೇಜಿಗೆ 25 ಲ.ರೂ. ದಂಡ ಹಾಕಲು ಒತ್ತಾಯ

ಸಿಇಟಿ ಪರೀಕ್ಷೆ ವೇಳೆ ವಿದಾರ್ಥಿಗಳ ಜನಿವಾರ ತೆಗೆಸಿದ ಕಾಲೇಜು ಸಿಬ್ಬಂದಿ ಬೆಂಗಳೂರು: ಬೆಂಗಳೂರಿನ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಿಸಿದ್ದು, ಮುಖ್ಯಮಂತ್ರಿಗೆ ಈ ಕುರಿತು ಪತ್ರ ಬರೆದು ಜನಿವಾರ ತೆಗೆಸಿದ ಕಾಲೇಜಿನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದೆ. ಜೊತೆಗೆ ಸಂಬಂಧಿಸಿದ ಸಂಸ್ಥೆಗೆ ಕನಿಷ್ಠ 25 ಲಕ್ಷ ರೂ. ದಂಡ ವಿಧಿಸಬೇಕೆಂದು ಒತ್ತಾಯಿಸಿದೆ. ಸಿಇಟಿ ಪರೀಕ್ಷಾರ್ಥಿಗಳ ಜನಿವಾರ

ಜನಿವಾರ ತೆಗೆಸಿದ ಪ್ರಕರಣ : ಕಾಲೇಜಿಗೆ 25 ಲ.ರೂ. ದಂಡ ಹಾಕಲು ಒತ್ತಾಯ Read More »

ನಟ ಅಕ್ಷಯ್‌ ಕುಮಾರ್‌ ಮಗಳಿಗೂ ಸೈಬರ್‌ ಕಾಮಣ್ಣರಿಂದ ಕಿರುಕುಳ

ಸೈಬರ್‌ ಜಾಗೃತಿ ಕಾರ್ಯಕ್ರಮದಲ್ಲಿ ಕಿರುಕುಳದ ವಿವರ ಬಿಚ್ಚಿಟ್ಟ ಪೊಲೀಸರು ಮುಂಬೈ: ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಮಗಳು ನಿತಾರಾ ಕೂಡ ಸೈಬರ್‌ ಕಾಮಣ್ಣರ ಕಿರುಕುಳಕ್ಕೆ ಗುರಿಯಾಗಿದ್ದಾರೆ. ಬೆತ್ತಲೆ ಫೋಟೋ ಕಳಿಸುವಂತೆ ವ್ಯಕ್ತಿಯೋರ್ವ ನಿತಾರಾಗೆ ಹೇಳಿದ್ದು, ಆತನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ನಿತಾರಾ ಆನ್​​ಲೈನ್ ಅಲ್ಲಿ ಗೇಮ್ ಆಡುವಾಗ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ನಿತಾರಾ ಕುಟುಂಬದ ಗಮನಕ್ಕೆ

ನಟ ಅಕ್ಷಯ್‌ ಕುಮಾರ್‌ ಮಗಳಿಗೂ ಸೈಬರ್‌ ಕಾಮಣ್ಣರಿಂದ ಕಿರುಕುಳ Read More »

error: Content is protected !!
Scroll to Top