ರಾತ್ರಿ ವೇಳೆ ಸರ್ಕಾರಿ ಬಸ್ಸಿಗೆ ಅಡ್ಡಗಟ್ಟಿ ಕುಡುಕರ ಕಿರಿಕಿರಿ

ಚಿಕ್ಕಮಗಳೂರು: ಮಧ್ಯರಾತ್ರಿ ಸಮಯದಲ್ಲಿ ಕುಡಿದು ಅಮಲಿನಲ್ಲಿ ಸರ್ಕಾರಿ ಬಸ್ಸನ್ನು ‌ಅಡ್ಡಗಟ್ಟಿ ಹುಚ್ಚಾಟ ಮೆರೆದ ಘಟನೆ ಚಿಕ್ಕಮಗಳೂರಿನಲ್ಲಿ ‌ನಡೆದಿದೆ. ಸರ್ಕಾರಿ ಬಸ್ಸು ಕಡೂರಿನಿಂದ ‌ಚಿಕ್ಕಮಗಳೂರಿಗೆ ಬರುತ್ತಿತ್ತು. ನಗರದ ಟೆಂಟರ್ ‌ಚಿಕನ್ ಸಮೀಪ ಕುಡುಕರು ತಮ್ಮ ಆಟೋ ಅಡ್ಡಗಟ್ಟಿ ‌ತಡೆದು‌ ರಸ್ತೆ ನಡುವಲ್ಲೇ ಬಸ್ಸು ನಿಲ್ಲುವಂತೆ ಮಾಡಿದ್ದಾರೆ. ಸುಮಾರು ರಾತ್ರಿ 12 ಗಂಟೆಯ ವೇಳೆ ಈ ಘಟನೆ ನಡೆದಿದ್ದು, ಅಸಭ್ಯವಾಗಿ ವರ್ತಿಸುತ್ತಾ ಬಸ್ಸಿನ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ತೊಂದರೆ ಮಾಡದಂತೆ ಬಸ್ಸಿನ ಚಾಲಕ ಮನವಿ ಮಾಡಿದರೂ ಅದಕ್ಕೆ ಕ್ಯಾರೇ […]

ರಾತ್ರಿ ವೇಳೆ ಸರ್ಕಾರಿ ಬಸ್ಸಿಗೆ ಅಡ್ಡಗಟ್ಟಿ ಕುಡುಕರ ಕಿರಿಕಿರಿ Read More »

ಮಗು ಕರುಣಿಸಿದ ಪ್ರಕರಣ : ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ. ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದ ನ್ಯಾಯಾಲಯ ಬೆಂಗಳೂರು: ಪುತ್ತೂರಿನ ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ ಜೀವನಾಂಶ ಪಾವತಿಸಲು ಹೈಕೋರ್ಟ್‌ ಆದೇಶಿಸಿ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಮಗುವಾಗಿದೆ. 10 ತಿಂಗಳ ಮಗು, ತಾಯಿಯನ್ನು ಅನಾಥವನ್ನಾಗಿಸುವುದು ಬೇಡ. ಹೀಗಾಗಿ ಮುಂದಿನ ಆದೇಶದವರೆಗೂ ಮಗು ಹಾಗೂ ತಾಯಿಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸುವಂತೆ ಅರ್ಜಿದಾರ ಕೃಷ್ಣ ಜೆ. ರಾವ್​ಗೆ

ಮಗು ಕರುಣಿಸಿದ ಪ್ರಕರಣ : ಯುವತಿಗೆ ಪ್ರತಿ ತಿಂಗಳು 75 ಸಾವಿರ ರೂ. ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ Read More »

ಸಿಇಟಿ ಪರೀಕ್ಷೆಯಲ್ಲಿ ಮತ್ತೆ ವಿವಾದ : ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ

ಸರ್ಕಾರದ ವಿರುದ್ಧ ಪೋಷಕರ ತೀವ್ರ ಆಕ್ರೋಶ ಬೆಂಗಳೂರು : ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕೆಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಸಿಬ್ಬಂದಿ ಬಲವಂತವಾಗಿ ತೆಗೆಸಿರುವುದು ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಕಳೆದ ವರ್ಷದಂತೆ ಈ ವರ್ಷವೂ ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ ಮುನ್ನೆಲೆಗೆ ಬಂದಿದೆ. ಗುರುವಾರ ನಡೆದ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ನೆಪದಲ್ಲಿ ಅಡ್ಡಗಟ್ಟಿದ ಸಿಬ್ಬಂದಿ, ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ

ಸಿಇಟಿ ಪರೀಕ್ಷೆಯಲ್ಲಿ ಮತ್ತೆ ವಿವಾದ : ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ Read More »

ವಿದ್ಯುತ್ ತಂತಿ ಸ್ಪರ್ಶ: ಮಾವಿನ ಮರವೇರಿದ್ದ ವ್ಯಕ್ತಿ ಸಾವು

ಮಣಿಪಾಲ: ಡಿಸಿ ಆಫಿಸ್ ಹಿಂಭಾಗದ ಮಾವಿನ ಮರದಲ್ಲಿ ಮಾವಿನ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ. ಅಲೆವೂರು ನಿವಾಸಿ ಸದಾನಂದ ದೇವಾಡಿಗ(55) ಎಂಬವರೇ ‌ಮೃತ ದುರ್ದೈವಿ. ಗ್ರಾಮ ಸಹಾಯಕ ಕೆಲಸವನ್ನು ಅವರು ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಮಾವಿನ ಕಾಯಿ ಕೊಯ್ಯಲು ಅವರು ಮರವೇರಿದ್ದು, ಈ ವೇಳೆ ಅವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮರದಿಂದ ಮೃತದೇಹವನ್ನು ತೆರವು ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ಸ್ಪರ್ಶ: ಮಾವಿನ ಮರವೇರಿದ್ದ ವ್ಯಕ್ತಿ ಸಾವು Read More »

ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ: ಅಪಾರ ನಷ್ಟ

ಕಾರ್ಕಳ: ಗಾಂಧಿ ಮೈದಾನದ ಹತ್ತಿರದಲ್ಲಿರುವ ಶಾಂಭವಿ ಡಿವೈನ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಎಸಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಈ ದುರಂತ ನಡೆದಿದ್ದು, ಸುಮಾರು ಐದು ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಂದೀಪ್ ಹೆಗ್ಡೆ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಟಿವಿ ಸೇರಿದಂತೆ ಇತರ ಪರಿಕರಗಳು ಬೆಂಕಿಗೆ ಆಹುತಿಯಾಗಿವೆ.

ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ: ಅಪಾರ ನಷ್ಟ Read More »

ಸಿಡಿಲು ಬಡಿದು ಇಬ್ಬರು ಯುವಕರ ಸಾವು

ಬೀದರ್: ಗುಡುಗು ಸಹಿತ ಮಳೆಗೆ ಬೀದರ್‌ನ ಬಾಲ್ಕಿಯ ನಾವದಗಿಯಲ್ಲಿ ಇಬ್ಬರು ರೈತರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರೇವಣಸಿದ್ಧ ‌ಮತ್ತು ಜೇವರ್ಗಿಯ ಯಲ್ಲಾಲಿಂಗ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಜಮೀನಿನಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ಘಟನೆ ನಡೆದಿದೆ. ಜೋರಾಗಿ ಸುರಿದ ಮಳೆ, ಗುಡುಗಿಗೆ ಅಲ್ಲೇ ಸಮೀಪದಲ್ಲಿದ್ದ ಮಾವಿನ ಮರದಡಿ ಈ ಇಬ್ಬರೂ ಆಶ್ರಯ ಪಡೆದಿದ್ದಾರೆ. ಇದೇ ಸಮಯದಲ್ಲಿ ಸಿಡಿಲು ಮರಕ್ಕೆ ಬಡಿದಿದೆ. ಆಶ್ರಯ ಪಡೆದಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಮನೆಗೆ ಆಧಾರ ಸ್ತಂಭದಂತಿದ್ದ ಮಕ್ಕಳನ್ನು ಕಳೆದುಕೊಂಡ

ಸಿಡಿಲು ಬಡಿದು ಇಬ್ಬರು ಯುವಕರ ಸಾವು Read More »

ಕಾಡಾನೆ ದಾಳಿ: ಮೂವರು ಇಟಿಎಫ್ ಸಿಬ್ಬಂದಿಗೆ ಗಾಯ

ಹಾಸನ: ಇಟಿಎಫ್‌ನ ಮೂವರು ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಬೇಲೂರಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳನ್ನು ರಮೇಶ್, ವಿಶ್ವ, ಜೀವನ್ ಎಂದು ಗುರುತಿಸಲಾಗಿದೆ. ಅದರಲ್ಲಿ ರಮೇಶ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ‌. ಗ್ರಾಮದ ಹಾಸ್ಟೆಲ್ ಹಿಂಭಾಗದಲ್ಲಿ ಸಿಬ್ಬಂದಿ ಮೇಲೆ ಆನೆ ದಾಳಿ ನಡೆದಿರುವುದಾಗಿದೆ. ಕಾಡಾನೆಗಳ ಹೆಜ್ಜೆಗುರುತು ಹಿಂಬಾಲಿಸಿಕೊಂಡು ಈ ಸಿಬ್ಬಂದಿ ಮುನ್ನಡೆಯುತ್ತಿದ್ದರು. ಈ ಸಮಯದಲ್ಲಿ ಇವರ ಮೇಲೆ ಏಕಾಏಕಿ ಆನೆ ದಾಳಿ ನಡೆದಿರುವುದಾಗಿದೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ

ಕಾಡಾನೆ ದಾಳಿ: ಮೂವರು ಇಟಿಎಫ್ ಸಿಬ್ಬಂದಿಗೆ ಗಾಯ Read More »

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು

ಉಪ್ಪಿನಂಗಡಿ: ಬೈಕ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಸವಾರನೊಬ್ಬ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಹಿರೇಬಂಡಾಡಿ ನಿವಾಸಿ ಲಿಖಿತ್ ಎಂಬವರೇ ‌ಮೃತ ದುರ್ದೈವಿ. ಲಿಖಿತ್ ಅವರು ಬೈಕ್‌ನ ನಿಯಂತ್ರಣ ಕಳೆದುಕೊಂಡು ಗುಂಡಿಗೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿದೆ.

ನಿಯಂತ್ರಣಕ್ಕೆ ಸಿಗದ ಬೈಕ್: ಗುಂಡಿಗೆ ಬಿದ್ದು ಸವಾರ ಸಾವು Read More »

ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ಶಾರದಾ ಪ್ರೌಢಶಾಲೆಗೆ 100% ಫಲಿತಾಂಶ

ಸುಳ್ಯ: ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶ್ರೀ ಶಾರದಾ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 7 ಮಂದಿ ಡಿಸ್ಟಿಂಕ್ಷನ್, 25 ಮಂದಿ ಪ್ರಥಮ ದರ್ಜೆ, 5 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುತ್ತಿಗಾರು ಕಮಿಲದ ಕೆ. ಬಾಲಕೃಷ್ಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರಿ ತನುಶ್ರೀ-589 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದುಗಲಡ್ಕದ ಸುರೇಶ್ ಐ. ಮತ್ತು ಜಯಶೀಲ ಬಿ. ವಿ. ದಂಪತಿಯ ಪುತ್ರಿ ಸಮೀಕ್ಷಾ

ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ಶಾರದಾ ಪ್ರೌಢಶಾಲೆಗೆ 100% ಫಲಿತಾಂಶ Read More »

ವಿಚಾರಣಾಧೀನ ಖೈದಿ ಆಸ್ಪತ್ರೆಯ ಬಾತ್‌ರೂಮ್ ಗಾಜು ಒಡೆದು ಪರಾರಿ

ಬಳ್ಳಾರಿ: ವಿಚಾರಣಾಧೀನ ಖೈದಿಯೊಬ್ಬನನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತ ಸ್ನಾನದ ಕೋಣೆಯ ಕಿಟಕಿಯ ಗಾಜು ಹುಡಿ ಮಾಡಿ ತಪ್ಪಿಸಿಕೊಂಡ ಘಟನೆ ನಡೆದಿದೆ. ಚಲನಚಿತ್ರಗಳಲ್ಲಿ ಬರುವಂತೆ ಆರೋಪಿ ಬಾತ್‌ರೂಮ್‌ಗೆ ಹೋಗುವುದಾಗಿ ‌ತಿಳಿಸಿದ್ದು, ಅಲ್ಲಿಗೆ ಹೋದ ಆತ ಬಾತ್‌ರೂಮ್‌ನ ಗಾಜು ಪುಡಿ ಮಾಡಿ ಅಲ್ಲಿಂದ ಪರಾರಿಯಾಗಿರುವುದಾಗಿದೆ. ಪರಾರಿಯಾದ ಆರೋಪಿಯನ್ನು ಹರಪ್ಪನಹಳ್ಳಿಯ ಅಣ್ಣಪ್ಪ ಎಂದು ಗುರುತಿಸಲಾಗಿದೆ. ಈತ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ. ಮರದಿಂದ ಬಿದ್ದ ಪರಿಣಾಮ ಈತನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆತನನ್ನು ವಿಮ್ಸ್‌ಗೆ

ವಿಚಾರಣಾಧೀನ ಖೈದಿ ಆಸ್ಪತ್ರೆಯ ಬಾತ್‌ರೂಮ್ ಗಾಜು ಒಡೆದು ಪರಾರಿ Read More »

error: Content is protected !!
Scroll to Top