ದೈವದ ಭಂಡಾರ ಹೋಗುತ್ತಿದ್ದಾಗ ಮುರಿದು ಬಿದ್ದ ಕಾಲು ಸಂಕ: ಹಲವರಿಗೆ ಗಾಯ

ಮೂಡಬಿದ್ರೆ: ದೈವದ ಭಂಡಾರ ಆಗಮನದ ವೇಳೆ ಕಾಲು ಸಂಕ ಮುರಿದು ಬಿದ್ದ ಪರಿಣಾಮ ಅವಘಡ ಸಂಭವಿಸಿದ ಘಟನೆ ಪುಚ್ಚೆಮೊಗರು ಗ್ರಾಮದ ಬಾವದಬೈಲಿನಲ್ಲಿ ‌ನಡೆದಿದೆ.

ಈ ದುರಂತದಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸಾ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಕೋಡೆ ಬರ್ಕೆ ಧರ್ಮ ನೇಮದ ಹಿನ್ನೆಲೆ ಪಲ್ಲಕ್ಕಿಯಲ್ಲಿ ಹೊತ್ತು ದೈವದ ಭಂಡಾರವನ್ನು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಲು ಸಂಕ ಮುರಿದು ಬಿದ್ದಿದ್ದು, ಪಲ್ಲಕ್ಕಿ ಸಮೇತ ಭಂಡಾರ ತರುತ್ತಿದ್ದ ಭಕ್ತರು ಮುರಿದ ಸಂಕದ ಕೆಳಕ್ಕೆ ಬಿದ್ದಿದ್ದಾರೆ. ದೈವದ ಮುಕಾಲ್ದಿ ‌ಸೇರಿದಂತೆ ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ದೈವದ ಪರಿಕರಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.























































 
 

ದೈವ ಕಾರ್ಯದ ಸಂದರ್ಭ ಇಂತಹ ಘಟನೆ ನಡೆದಿರುವುದು ಭಕ್ತರಲ್ಲೂ ಆತಂಕಕ್ಕೆ ಕಾರಣವಾಗಿದೆ.

error: Content is protected !!
Scroll to Top