ಕಾವೇರಿ ನದಿಗಿಳಿದಿದ್ದ ಪ್ರವಾಸಿಗರ ಮೇಲೆ ಕಾಡಾನೆ ದಾಳಿ: ಮಹಿಳೆಗೆ ಗಾಯ

ರಾಮನಗರ: ಕಾವೇರಿ ನದಿಯಲ್ಲಿ ಪ್ರವಾಸವನ್ನು ಆಸ್ವಾದಿಸುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಮೇಕೆದಾಟು ಬಳಿ ನಡೆದಿದೆ.

ಕನಕಪುರದ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿದು ದಣಿವಾರಿಕೆಗೆ ಬಂದ ಆನೆ ಏಕಾಏಕಿ ನದಿ ನೀರಿಗೆ ಇಳಿದಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಿದೆ. ಕಾಡಾನೆ ‌ಕಂಡ ಪ್ರವಾಸಿಗರು ಅಲ್ಲಿಂದ ಓಟಕ್ಕಿತ್ತಿದ್ದು, ಓರ್ವ ಮಹಿಳೆಯ ಮೇಲೆ ಆನೆ ದಾಳಿ ನಡೆಸಿ ಕಾಡೊಳಕ್ಕೆ ಓಡಿದೆ.

ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರ ಮೊಬೈಲ್‌ನಲ್ಲಿ ಕಾ ಡಾ ನೆ ದಾಳಿಯ ದೃಶ್ಯಗಳು ಸೆರೆಯಾಗಿವೆ.























































 
 

ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top