ಬಿರುಗಾಳಿಗೆ ಸಿಲುಕಿ ಮಗುಚಿದ ದೋಣಿ: ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆ

ಮಂಡ್ಯ: ಮೀನುಗಾರಿಕೆಗೆ ‌ತೆರಳಿದ್ದ ದೋಣಿ ಬಿರುಗಾಳಿಗೆ‌ ಸಿಕ್ಕಿ ಮಗುಚಿದ ಪರಿಣಾಮ ಯುವಕನೊಬ್ಬ ಕಾಣೆಯಾದ ಘಟನೆ ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಮ್‌ನ ಹಿನ್ನೀರಿನಲ್ಲಿ ನಡೆದಿದೆ.

ನಾಪತ್ತೆಯಾದವನನ್ನು ‌ಪಾಂಡವಪುರದ ಗಿರಿಯಾರಹಳ್ಳಿಯ ಮಧು (26) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಮಧು ಮೀನು ಹಿಡಿಯುವ ಸಲುವಾಗಿ ಕೆಆರ್‌ಎಸ್‌ ಹಿನ್ನೀರಿಗೆ ದೋಣಿಯಲ್ಲಿ ತೆರಳಿದ್ದಾನೆ. ಈ ಸಮಯದಲ್ಲಿ ಗಾಳಿ ಜೋರಾಗಿ ಬೀಸಿದೆ. ಗಾಳಿಯ ರಭಸಕ್ಕೆ ದೋಣಿ ಮಗುಚಿದೆ. ಮಧು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ.





















































 
 

ನಾಪತ್ತೆಯಾದ ಮಧುವಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಕೆ‌ಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top