ಶಿಶಿಲ: ಶಿಶಿಲೇಶ್ವರ ದೇವಸ್ಥಾನದ ಬಳಿಯ ಬರ್ಗುಳ ಗುಂಡಿ ಅಣೆಕಟ್ಟಿನಲ್ಲಿ ಮೀನು ಹಿಡಿಯಲು ಕಿಡಿಗೇಡಿಗಳು ಮೈಲುಸುತ್ತು ಬಳಸಿದ ಪರಿಣಾಮ ಸಾವಿರಾರು ಮೀನುಗಳು ಮಾರಣಹೋಮ ನಡೆದಿದೆ.
ಈ ಕುಕೃತ್ಯ ಮೇ 29 ರಂದು ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ನದಿಯ ನೀರಿನಲ್ಲಿ ತೇಲುತ್ತಿದ್ದ, ಸತ್ತು ಬಿದ್ದ ಮೀನುಗಳನ್ನು ನೋಡಿ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿರುವುದಾಗಿದೆ.
ಮೀನುಗಳನ್ನು ಹಿಡಿಯಲು ವಿಷಕಾರಿ ರಾಸಾಯನಿಕಗಳನ್ನು ಬಳಕೆ ಮಾಡಿದ ಕಾರಣ ಸಣ್ಣಪುಟ್ಟ ನೂರಾರು ಮೀನುಗಳು ಸಾವನ್ನಪ್ಪಿವೆ. ಆ ಮೀನುಗಳನ್ನು ಕಿಡಿಗೇಡಿಗಳು ಅಲ್ಲೇ ಬಿಟ್ಟು ತೆರಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಮೀನುಗಾರಿಕಾ ಇಲಾಖೆಗೆ ದೂರು ನೀಡುವುದಾಗಿಯೂ ಸಾರ್ವಜನಿಕರು ತಿಳಿಸಿದ್ದಾರೆ. ಹಾಗೆಯೇ ತಪಾಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.
























