ಹೊಲದಲ್ಲಿ ನೀರು ಕಟ್ಟಲು ಹೋದ ರೈತನ ಮೇಲೆ ಚಿರತೆ ದಾಳಿ

ವಿಜಯನಗರ: ಜಗತ್ಪ್ರಸಿದ್ಧ ಹಂಪಿಯ ಸಮೀಪದ ಕಡ್ಡಿರಾಂಪುರದಲ್ಲಿ ಚಿರತೆಯೊಂದು ‌ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ರೈತ ಖಾರದರುಡಿ ರಾಜು(40) ಎಂಬವರೇ ‌ಚಿರತೆ ದಾಳಿಗೆ ಒಳಗಾದವರು. ಹೊಲದಲ್ಲಿ ರಾತ್ರಿ ವೇಳೆ ನೀರು ಕಟ್ಟುತ್ತಿದ್ದ ಸಮಯದಲ್ಲಿ ಚಿರತೆ ಅವರ ಕಾಲಿಗೆ ಪರಚಿದ ಪರಿಣಾಮ ತೀವ್ರ ಪ್ರಮಾಣದಲ್ಲಿ ಗಾಯಗಳಾಗಿವೆ.

ಗಾಯಾಳು ರಾಜು ಅವರಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.





















































 
 

ನಾಲೈದು ದಿನಗಳ ಹಿಂದೆಯಷ್ಟೇ ಹಂಪಿಯ ಜನತಾ ಪ್ಲಾಟ್ ನಲ್ಲಿ ತಡ ರಾತ್ರಿ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಬೆನ್ನಲ್ಲೇ, ಇದೀಗ ರೈತನೊಬ್ಬನ ಮೇಲೆ ದಾಳಿ ನಡೆಸಿದೆ. ಈ ಘಟನೆಯಿಂದ ಹಂಪಿ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!
Scroll to Top