ಈ ಬಾರಿ ಆರ್‌ಸಿಬಿ ಚಾಂಪಿಯನ್‌ ಆದರೂ ಸಂಭ್ರಮಾಚರಣೆಗೆ ಲಗಾಮು

ಫೈನಲ್‌ ಪಂದ್ಯದ ರಾತ್ರಿಯಿಂದಲೇ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿ

ಬೆಂಗಳೂರು: ಐಪಿಎಲ್‌ 2026 ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಫೈನಲ್‌ ಪ್ರವೇಶಿಸಿದ್ದು, ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ.
ಕಳೆದ ಬಾರಿ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆದಿತ್ತು. ಮಧ್ಯರಾತ್ರಿ 12 ಗಂಟೆ ನಂತರ ರಸ್ತೆ ರಸ್ತೆಗಳಲ್ಲಿ ಆರ್‌ಸಿಬಿ ಫ್ಯಾನ್ಸ್‌ ಸೆಲಬ್ರೇಷನ್‌ ಮಾಡಿದ್ದರು. ಈ ಬಾರಿ ಸಂಭ್ರಮಾಚರಣೆಗೆಗೆ ಕಟ್ಟುನಿಟ್ಟಿನ ನಿಯಮ ತರಲಾಗಿದೆ. ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಸೋಷಿಯಲ್ ಮೀಡಿಯಾದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಒಂದು ವೇಳೆ ಆರ್‌ಸಿಬಿ ಫೈನಲ್‌ ಗೆದ್ದರೆ ಸೆಲೆಬ್ರೇಷನ್‌ಗೆ ಪೊಲೀಸರು ಕಠಿಣ ನಿಯಮ ಹೊರಡಿಸಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಗೆದ್ದಾಗ ನಡೆದ ಸಂಭ್ರಮಾಚರಣೆಯಲ್ಲಿ ಸರ್ಕಾರದ ಎಡವಟ್ಟಿನಿಂದಾಗಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸಲ ಅಂಥ ಯಾವುದೇ ಅವಘಡಕ್ಕೆ ಅವಕಾಶ ಕೊಡದಿರಲು ಪೊಲೀಸ್‌ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದೆ.





















































 
 

ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರೇಷನ್ ಮಾಡುವಂತಿಲ್ಲ, ರಸ್ತೆಗಳ ಬಳಿ ಎಲ್ಇಡಿ ಅಳವಡಿಕೆಗೆ ಪೊಲೀಸರ ಅನುಮತಿ ಕಡ್ಡಾಯ, ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳ ಬಳಕೆ ಮಾಡುವಂತಿಲ್ಲ, ಹೆಚ್ಚು ಜನ ಸೇರಿದಾಗ ದುರ್ವರ್ತನೆ ಮಾಡುವಂತಿಲ್ಲ, ಬೈಕ್ ರ‍್ಯಾಲಿ, ಸ್ಟಂಟ್‌ಗಳು, ಹಾರ್ನ್ ಮಾಡುವಂತಿಲ್ಲ, ರಸ್ತೆಗಳನ್ನ ಬ್ಲಾಕ್ ಮಾಡುವಂತಿಲ್ಲ, ಮದ್ಯಪಾನ ಮಾಡಿ ಕೂಗಾಡೋದು, ಜಗಳ ಮಾಡೋದು ಮಾಡುವಂತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಸುದ್ದಿಗಳನ್ನು, ಪ್ರಚೋದನಾಕಾರಿ ಪೋಸ್ಟ್ ಮಾಡುವಂತಿಲ್ಲ, ಕಪ್ ಗೆದ್ದ ಖುಷಿಯಲ್ಲಿ ಬೇರೆ ಟೀಂನ ಅಭಿಮಾನಿಗಳನ್ನು ರೇಗಿಸುವಂತಿಲ್ಲ.

error: Content is protected !!
Scroll to Top