ನೈಟಿ ಹಾಕಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಗಂಡ ಈಗ ಪೊಲೀಸರ ಅತಿಥಿ

ಬೆಳಗಾವಿ: ಸೀರೆ ಉಡಬೇಕು, ನೈಟಿ ಹಾಕಬಾರದು ಎಂದು ಗಂಡ ಹೇಳಿದ ಮೇಲೆಯೂ ವಿಪರೀತ ಸೆಖೆ ಎಂದು ನೈಟಿ ಹಾಕಿದ ಪತ್ನಿಯ ಮೇಲೆ ಕೋಪಗೊಂಡು, ಆಕೆ ಹಾಕಿದ್ದ ನೈಟಿಗೆ ಪತಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಆಕೆಯ ದೇಹ 80% ಸುಟ್ಟು ಹೋದ ಘಟನೆ ಖಾನಾಪೂರದ ನಂದಗಡದಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಕೃಷ್ಣಾಜಿ ಎಂದು ಗುರುತಿಸಲಾಗಿದೆ. ಆತನ ಕ್ರೌರ್ಯಕ್ಕೆ ಬಲಿಯಾದ ಮಹಿಳೆ ಮಂಜುಳಾ.

ಇವರಿಬ್ಬರೂ ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮಂಜುಳಾ ನೈಟಿ ಹಾಕುವುದು ಕೃಷ್ಣಾಜಿಗೆ ಸಮ್ಮತವಿರಲಿಲ್ಲ. ಸೀರೆಯನ್ನೇ ಹಾಕಬೇಕು ಎಂದು ಪದೇ ಪದೇ ತಾಕೀತು ಮಾಡುತ್ತಿದ್ದ. ಇದೇ ವಿಷಯಕ್ಕೆ ದಂಪತಿ ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ಹೋಗಿ ಪತ್ನಿಗೆ ಪತಿ ಬೆಂಕಿ ಹಚ್ಚಿದ್ದಾನೆ.























































 
 

ಮಂಜುಳಾ ಕಿರುಚಾಟ ‌ಕೇಳಿ ಸ್ಥಳೀಯರು ಓಡಿ ಬಂದಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಕೃಷ್ಣಾಜಿಯನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!
Scroll to Top