ಕಡಬ: ಟ್ಯಾಂಕರ್ ಲಾರಿಯಿಂದ ಬ್ಯಾಟರಿ ಕಳವು ನಡೆದಿರುವ ಘಟನೆ ಗೋಳಿತೊಟ್ಟು ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸರಿಗೆ ಕಳೆಂಜ ಗ್ರಾಮದ ನಿವಾಸಿ ರಕ್ಷಿತ್ ಕೆ. ಎನ್ನುವವರು ದೂರು ನೀಡಿದ್ದಾರೆ.
ದೂರಿನಲ್ಲಿ, ಕೆಎ 21, ಬಿ 3160 ನೋಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಕಂಪನಿಯ ಟ್ಯಾಂಕರ್ ಅನ್ನು ಎ. 18 ರ ರಾತ್ರಿ 11 ಗಂಟೆಯ ಸುಮಾರಿಗೆ ಗೋಳಿತೊಟ್ಟು ಗ್ರಾಮದಲ್ಲಿ ರಸ್ತೆಯ ಬದಿ ನಿಲ್ಲಿಸಿ ಮನೆಗೆ ತೆರಳಲಾಗಿತ್ತು. ಎ. 21 ರಂದು ಟ್ಯಾಂಕರ್ ಅನ್ನು ಚಲಾಯಿಸಲು ಪ್ರಯತ್ನಿಸಿದಾಗ ಸ್ಟಾರ್ಟ್ ಆಗಿಲ್ಲ. ಪರಿಶೀಲನೆ ನಡೆಸಿದಾಗ ಟ್ಯಾಂಕರ್‌ನ ಎರಡು ಬ್ಯಾಟರಿಗಳು ಕಳವಾಗಿರುವುದು ತಿಳಿದು ಬಂದಿದೆ. ಬಲವಾದ ಬ್ಯಾಟರಿಗಳ ಮೌಲ್ಯ ಸುಮಾರು ಇಪ್ಪತ್ತೇಳು ಸಾವಿರ ಆಗಿದೆ. ಎ. 18-21 ರ ಬೆಳಗ್ಗೆ 8.30 ರ ಒಳಗೆ ಈ ಕಳ್ಳತನ ನಡೆದಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























