ಉಡುಪಿ: ಪ್ರವಾಸಕ್ಕೆಂದು ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ಹೊಟೇಲ್ ರೂಮಿನಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಅನೇಕಲ್ ನಿವಾಸಿ ಧನಂಜಯ್ ಕೆ. ಎನ್. (37) ಎನ್ನುವವರೇ ಮೃತ ದುರ್ದೈವಿ.
ಇವರು ಸುಮಾರು 4 ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಎ. 19 ರಂದು ತಮ್ಮ ಗೆಳೆಯರ ಜೊತೆಗೆ ಮಲ್ಪೆಗೆ ಪ್ರವಾಸಕ್ಕೆ ಬಂದಿದ್ದಾರೆ. ಎ. 20 ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊಠಡಿಯಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























