ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಟೆಕ್ಕಿ

ಹೈದರಾಬಾದ್: ಡ್ರಗ್ಸ್‌ ‌ಕಾರಣದಿಂದ ಕೆಲಸ ಕಳೆದುಕೊಂಡಿದ್ದ ಟೆಕ್ಕಿಯೊಬ್ಬ ಮನೆಯಲ್ಲೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯನ್ನು ನಾಚರಾಂ ನಿವಾಸಿ ಸಿ. ಎಚ್. ಶಶಿಧರ್ ಎಂದು ಗುರುತಿಸಲಾಗಿದೆ. ಆತನನ್ನು ಮಾದಕ ವಸ್ತು ನಿಷೇಧ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಂದಿತು ಮನೆಯಿಂದ ಪೊಲೀಸರು 17 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಗಿಡಗಳಿಂದ ಸುಮಾರು 10 ಕೆ.ಜಿ. ಡ್ರಗ್ಸ್ ದೊರೆಯಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಕೆಲವು ಗಿಡಗಳು ಮೂರು ಮೀ. ಗಳಷ್ಟು ಉದ್ದ ಬೆಳೆದಿದ್ದರೆ ಇನ್ನು ಕೆಲವು ಗಿಡಗಳು ಹೂ ಬಿಡುವುದಕ್ಕೆ ಆರಂಭಿಸಿದ್ದವು ಎಂದು ತಿಳಿದು ಬಂದಿದೆ.























































 
 

ಆರೋಪಿ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದಾಗ ಡ್ರಗ್ಸ್ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ. ಯಾವುದೇ ಸ್ಥಿರ ಆದಾಯ ಹೊಂದಿರದ ಈತ ವೈಯಕ್ತಿಕ ಬಳಕೆಯ ಹಿನ್ನೆಲೆ ಮನೆಯ ಟೆರೇಸ್‌ನಲ್ಲೇ ಗಾಂಜಾ ಬೆಳೆಯಲಾರಂಭಿಸಿದ್ದ ಎಂದು ತಿಳಿದು ಬಂದಿದೆ.

error: Content is protected !!
Scroll to Top