ಬೆಂಗಳೂರಿನಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ

ಸಾಧನೆಗಳ ಸರದಾರನಿಗೆ ಜನತಾ ಕೃಷಿ ರತ್ನ ಪ್ರಶಸ್ತಿ ಪ್ರಧಾನ

ಪುತ್ತೂರು: ಜನತಾ ನ್ಯೂಸ್ ಕನ್ನಡ ವತಿಯಿಂದ ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯುನಲ್ಲಿ ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಸರದಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರ ಗಣನೀಯ ಸೇವೆ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ ರತ್ನವನ್ನು ಜನತಾ ನ್ಯೂಸ್ ಮ್ಯಾನೇಜಿಂಗ್ ಡೈರೆಕ್ಟರ್ ಆರ್ಯನ್ ಭಾರದ್ವಾಜ್ ಅವರು ಪೇಟ, ಶಾಲು ತೊಡಿಸಿ ಹಾರ, ವಿಶೇಷ ರೀತಿಯ ಟ್ರೋಫಿ ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಿದರು.

ಆರ್ಯನ್ ಕೆ ಸಂಸ್ಥೆಗೆ ಜೇನುತುಪ್ಪವನ್ನು ಕುಮಾರ್ ಪೆರ್ನಾಜೆ ಅವರು ನೀಡಿ ಜೇನು ಗೂಡಿನಂತೆ ಒಗ್ಗಟ್ಟಿನಿಂದ ಕೋಡಿ ಸದಾ ಸಿಹಿಯಿಂದ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು.























































 
 

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಸಂಪಾದಕ (ಜನತಾ ನ್ಯೂಸ್ ಕನ್ನಡ ರಾಜ್ಯಾಧ್ಯಕ್ಷ) ಕರ್ನಾಟಕ ಯುವಶಕ್ತಿಯ ಕೆ. ಎಸ್. ಲಿಂಗೇಗೌಡ, ಸಹ ಸಂಸ್ಥಾಪಕರು doczee ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್, ಮೋನಿಷಾ ಆರ್ಯನ್ ಭಾರದ್ವಾಜ್ ಬೆಂಗಳೂರು, ಬೆಂಗಳೂರಿನ ಪಿ. ಎಸ್. ಭಟ್ ನೂಜಿ ಪುತ್ತೂರು (ಎಕ್ಸ್ ರೇಜನಲ್ ಮ್ಯಾನೇಜರ್ ಆಫ್ ರಿಲಯನ್ಸ್ ಸೆಲ್ಯೂಲೋಸ್ ಪ್ರಾಡಕ್ಟ್ಸ್ ಲಿಮಿಟೆಡ್) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೋಭಾ ಮತ್ತು ಹರಿಚೇತ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top