ಉಡುಪಿ: ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ನಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕಟಪಾಡಿಯ ಕಲ್ಲಾಪು ಸಮೀಪ ನಡೆದಿದೆ.
ಮೃತನನ್ನು ಕಟಪಾಡಿ ಸರ್ಕಾರಿ ಗುಡ್ಡೆ ನಿವಾಸಿ ಭೀಮಪ್ಪ ಹುನ್ನಳ್ಳಿ ಎಂದು ಗುರುತಿಸಲಾಗಿದೆ. ಇವರು ಮೂಲತಃ ಬಾಗಲಕೋಟೆಯ ಹನಗುಂದದವರಾಗಿದ್ದಾರೆ. ಸಹ ಸವಾರ ಕಟಪಾಡಿ ನಾಯ್ಕರ್‌ತೋಟದ ಸಾಗರ್ ಶೆಣೈ ಗಾಯಗೊಂಡಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ತಿಳಿದು ಬಂದಿದೆ. ಕಾಪು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

























