ಮಾನಸಿಕ ಖಿನ್ನತೆ: ವಿಷ ಕುಡಿದು ಯುವಕ ಆತ್ಮಹತ್ಯೆ

ಕಡಬ: ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ‌ನರಳುತ್ತಿದ್ದ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಳಿಕುಕ್ಕುವಿನಲ್ಲಿ ‌ನಡೆದಿದೆ.

ಮೃತನನ್ನು ಅಂಬೆಕಲ್ಲು ‌ನಿವಾಸಿ ಕಿಶನ್ ಎ. ಎಚ್.(32) ಎಂದು ಗುರುತಿಸಲಾಗಿದೆ.

ಕಿಶನ್ ಕಳೆದ ಎರಡು ವರ್ಷಗಳಿಂದ ಗುತ್ತಿಗಾರಿನ ಸಂಸ್ಥೆಯೊಂದರಲ್ಲಿ ‌ಲೋನ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ಸಮಯದಿಂದ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರ ಸ್ಥಿತಿಗೆ ಕಾರಣ ಏನು ಎನ್ನುವ ಬಗ್ಗೆ ಮನೆಯವರು ವಿಚಾರಣೆ ನಡೆಸಿದರೂ ‌ಸಹ ಯಾವುದೇ ಮಾಹಿತಿಯನ್ನು ಅವರಿಂದ ಪಡೆದುಕೊಳ್ಳಲಾಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.























































 
 

ಮಾ. 21 ರಂದು ರಾತ್ರಿ ವೇಳೆ ಅವರು ತಮ್ಮ ತಮ್ಮನಿಗೆ ‌ಕರೆ ಮಾಡಿ ವಿಷ‌ ಸೇವಿಸುವುದಾಗಿ ತಿಳಿಸಿದ್ದರು. ಬಳಿಕ ವಿಷ ಸೇವನೆ ಮಾಡಿದ್ದರು. ತಕ್ಷಣವೇ ಅವರನ್ನು ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಸುಮಾರು 20 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಎ. 14 ರಂದು ಮೃತಪಟ್ಟಿದ್ದಾರೆ.

error: Content is protected !!
Scroll to Top