ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಗ್ರಾಮಾಂತರ ಭಾಗದ ಭಕ್ತರ ಅನುಕೂಲಕ್ಕಾಗಿ KSRTC ಯು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಿದೆ.
ಪ್ರತಿ ವರ್ಷ ಪುತ್ತೂರು ಜಾತ್ರೆಯ ವಿಶೇಷ ದಿನಗಳಂದು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಭಕ್ತರಿಗೆ ಒದಗಿಸಿ ಕೊಡುವಂತೆಯೇ ಈ ಬಾರಿಯೂ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಒದಗಿಸಿ ಕೊಡಲಿದೆ.
ಎ. 16 ರಂದು ನಡೆಯುವ ಕೆರೆ ಉತ್ಸವಕ್ಕೆ, ಎ. 17 ರಥೋತ್ಸವದ ಸಂದರ್ಭಗಳನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರ ಅನುಕೂಲಕ್ಕೆ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಸಂಸ್ಥೆ ಒದಗಿಸಲು ಮುಂದಾಗಿದೆ. ಸಂಜೆ ವೇಳೆ ಗ್ರಾಮೀಣ ಭಾಗಗಳಿಂದ ಬರಲು ಮತ್ತು ಕಾರ್ಯಕ್ರಮ ಮುಗಿದ ಮೇಲೆ ತಮ್ಮ ತಮ್ಮ ಊರುಗಳಿಗೆ ತೆರಳಲು ಭಕ್ತರಿಗೆ ಈ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ.

























