ಬಾವಿಯಲ್ಲಿ ಬಾಲಕಿಯರಿಬ್ಬರ ಶವ ಪತ್ತೆ

ಕಲಬುರ್ಗಿ: ಜಿಲ್ಲೆಯ ಯಡ್ರಾಮಿಯ ಇಜೇರಿ ಗ್ರಾಮದಲ್ಲಿ ಇಬ್ಬರು ಬಾಲಕಿಯರ ಶವಗಳು ಬಾವಿಯಲ್ಲಿ ಪತ್ತೆಯಾಗಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

ನಂದಿನಿ(16) ಮತ್ತು ಸಂಜನಾ(17) ಮೃತ ಬಾಲಕಿಯರು. ಈ ಇಬ್ಬರೂ ಚಿಕ್ಕಪ್ಪ – ದೊಡ್ಡಪ್ಪನ ಮಕ್ಕಳಾಗಿದ್ದಾರೆ.

ಇಬ್ಬರ ಕೈಗಳನ್ನೂ ಕಟ್ಟಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿರುವುದಾಗಿದೆ. ಈ ಪ್ರಕರಣ ನಿಗೂಢತೆಯಿಂದ ಕೂಡಿದ್ದು ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ.























































 
 

ಸ್ಥಳಕ್ಕೆ ಜೇವರ್ಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಇನ್ನೇನಾದರೂ ಅನುಮಾನಾಸ್ಪದ ಘಟನೆಗಳು ನಡೆದಿವೆಯೋ ಎಂಬ ಆಯಾವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top