ಕೊಪ್ಪಳ: ಮುಸ್ತಫಾ ಖಾದ್ರಿಯ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮತ್ತೊಂದು ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ.
ಆರೋಪಿ ಮುಸ್ತಫಾನಿಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳ ಜೊತೆಗೆ ಸಂಪರ್ಕ ಇದ್ದು, ಅವರಿಂದ ಆರ್ಥಿಕ ನೆರವು ದೊರೆಯುತ್ತಿದ್ದ ಸಂದೇಹ ವ್ಯಕ್ತವಾಗಿದ್ದು, ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಪೊಲೀಸರಿಗೆ ದೂರು ನೀಡಿದೆ.
ಕೊಪ್ಪಳದ ಕಂಪ್ಲಿ ಗ್ರಾಮದ ಮುಸ್ತಫಾ ಗೋವಾ ಮತ್ತು ಮುಂಬೈ ನಗರಗಳ ಮಟ್ಕಾ ಬುಕ್ಕಿಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದು, ಅವರು ನೀಡುವ ಹಣದಿಂದಲೇ ಐಷಾರಾಮಿ ಜೀವನ ನಡೆಸುತ್ತಿದ್ದ. ಹಾಗೆಯೇ, ಅದೇ ಹಣದ ಬಲದಿಂದ ಅಮಾಯಕ ಹುಡುಗಿಯರನ್ನು ಬಲೆಗೆ ಹಾಕಿಕೊಂಡು ಮಸ್ತಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಮುಸ್ತಫಾ ಹಿಂದೂ ಹುಡುಗಿಯರ ಜೊತೆಗೆ ಲವ್ ಜಿಹಾದ್ ನಡೆಸುತ್ತಿರುವುದಾಗಿ, ಹೆಣ್ಮಕ್ಕಳಿಗೆ ವಂಚಿಸುತ್ತಿರುವುದಾಗಿ ಆರೋಪ ಕೇಳಿ ಬಂದಿತ್ತು. ಅವನ ಮೊಬೈಲ್‌ನಲ್ಲೂ ಹಲವಾರು ಹುಡುಗಿಯರ ಅಶ್ಲೀಲ ವಿಡಿಯೋಗಳು, ಪೋಟೋಗಳು ಲಭ್ಯವಾಗಿದ್ದವು. ಅವುಗಳನ್ನು ಇಟ್ಟು, ಆತ ಹುಡುಗಿಯರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ. ಇದರ ಬೆನ್ನಲ್ಲೇ ವಿಹಿಂಪ ಸಹ ದೂರು ನೀಡಿತ್ತು.
ಆ ಬಳಿಕ ಯುವತಿಯೊಬ್ಬಳು ಧೈರ್ಯದಿಂದ ಮುಸ್ತಫನ ವಿರುದ್ದ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾಳೆ.

























