ಭಾರತೀಯ ಸಿನಿಮಾರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಬೋಸ್ಲೆ ಯವರಿಗೆ ನಿನ್ನೆ ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆ ನೋವಿನಿಂದ ಮುಂಬೈನ ಬ್ರಿಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮದ್ಯಾಹ್ನ ನಿಧನರಾಗಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆಶಾ ಬೋಸ್ಲೆ ಅವರು ಹಲವಾರು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ.
ಆಶಾ ಭೋಸ್ಲೆ ಅವರು ಹಿಂದಿ ಕನ್ನಡ ಮರಾಠಿ ತಮಿಳು ತೆಲುಗು ಮಲಯಾಳಂ ನೇಪಾಳಿ ಬೆಂಗಾಳಿ ಹೀಗೆ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದು, ಇದೀಗ ಭಾರತೀಯ ಚಿತ್ರರಂಗ ಅದ್ಭುತ ಗಾಯಕಿಯನ್ನು ಕಳೆದುಕೊಂಡಿದೆ.
ಎರಡು ರಾಷ್ಟ್ರ ಪ್ರಶಸ್ತಿ ಏಷ್ಯಾ ನೈಟಿಂ ಗೇಲ್, ಲತಾ ಮಂಗೇಶ್ಕರ್ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಂಟು ದಶಕಗಳಿಂದಲೂ ಗಾಯಕ ಕ್ಷೇತ್ರದಲ್ಲಿರುವ ಆಶಾ ಬೋಸ್ಲೆ ಅವರು ಸಾವಿರಾರು ಹಾಡುಗಳನ್ನು ಹಾಡಿದ್ದು ಹಲವಾರು ಲೈವ್ ಶೋಗಳನ್ನು ನೀಡಿದ್ದಾರೆ. ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದ ರು .ಆಶಾ ಬೋಸ್ಲೆ ತಮ್ಮ 90ನೇ ವಯಸ್ಸಿನಲ್ಲಿಯೂ ಲೈವ್ ಸಿಂಗಿಂಗ್ ಶೋ ಗಳನ್ನು ನೀಡುತ್ತಿದ್ದರು. ಮೂರು ನಾಲ್ಕು ಗಂಟೆ ಸ್ಟೇಜ್ ಮೇಲೆ ನಿಂತು ಹಾಡುತ್ತಿದ್ದರು.
ಭಾರತೀಯ ಚಿತ್ರರಂಗವನ್ನು ಆಳಿದ ಖ್ಯಾತ ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಭಾರತರತ್ನ ಪುರಸ್ಕೃತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ. ಅಕ್ಕನಂತೆ ಅದ್ಭುತ ಗಾಯಕಿ ಆಗಿದ್ದರು. ಆಶಾ ಭೋಸ್ಲೆ ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ಕೇವಲ ಗಾಯನ ಕ್ಷೇತ್ರದಲ್ಲಿ ಮಾತ್ರ ಬಲ್ಲದೆ ರೆಸ್ಟೋರೆಂಟ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು.
























