ಮಧುರ ಕಂಠದ ಗಾಯಕಿ ಆಶಾ ಭೋಸ್ಲೆ ‌ನಿಧನ: ಪ್ರಧಾನಿ ಮೋದಿ ಸಂತಾಪ

ಮುಂಬೈ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಶನಿವಾರದಂದು ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ.

ಹೆಸರಾಂತ ಗಾಯಕಿ ಆಶಾ ಭೋಸ್ಲೆ ‌ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಬೋಸ್ಲೆ ಅವರ ದಶಕಗಳ ಕಾಲದ ಸಂಗೀತ ಪ್ರಯಾಣವು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಎಕ್ಸ್‌ನಲ್ಲಿ ಪ್ರಧಾನಿ ನೋವು ವ್ಯಕ್ತಪಡಿಸಿದ್ದಾರೆ.

ಭೋಸ್ಲೆ ಅವರ ಸಂಗೀತ ವಿಶ್ವಾದ್ಯಂತ ಲೆಕ್ಕವಿಲ್ಲದಷ್ಟು ಹೃದಯಗಳನ್ನು ತಲುಪಿತ್ತು. ಅದು ಅವರ ಭಾವಪೂರ್ಣ ಮಧುರ ಅಥವಾ ರೋಮಾಂಚಕ ಸಂಯೋಜನೆಗಳಾಗಿರಬಹುದು. ಅವರ ಧ್ವನಿ ಕಾಲಾತೀತ ತೇಜಸ್ಸನ್ನು ಹೊಂದಿತ್ತು. ನಾನು ಅವರೊಂದಿಗೆ ನಡೆಸಿದ ಸಂವಹನಗಳನ್ನು ಯಾವಾಗಲೂ ಸ್ಮರಿಸುತ್ತೇನೆ ಎಂದು ಬರೆದಿದ್ದಾರೆ.ಭೋಸ್ಲೆ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ನನ್ನ ಸಂತಾಪಗಳು. ಅವರು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಮತ್ತು ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.























































 
 

error: Content is protected !!
Scroll to Top