ಮಂಗಳೂರು: ಪ್ರೇಯಸಿ ಕೈಕೊಟ್ಟ ದುಃಖದಲ್ಲಿ ಯುವಕ ಆತ್ಮಹತ್ಯೆ

ಹೀನಾಯವಾಗಿ ಮಾತನಾಡಿ ಅವಮಾನಿಸಿದ್ದ ಪ್ರೇಯಸಿ

ಮಂಗಳೂರು: ಪ್ರೀತಿಸಿದ ಹುಡುಗಿ ಕೈಕೊಟ್ಟ ದುಃಖದಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮೂಡುಶೆಡ್ಡೆಯಲ್ಲಿ ಸಂಭವಿಸಿದೆ. ಮೂಡುಶೆಡ್ಡೆ ಎದುರುಪದವು ನಿವಾಸಿ ಮೊಹಮ್ಮದ್‌ ಆಶಿಕ್‌ (22) ಆತ್ಮಹತ್ಯೆ ಮಾಡಿಕೊಂಡ ಯುವಕ.

ಆಶಿಕ್‌ ಕಾಲೇಜಿನಲ್ಲಿ ತನ್ನ ಸಹಪಾಟಿಯಾಗಿದ್ದ ಉಳ್ಳಾಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಸಾಕಷ್ಟು ಕಡೆ ಸುತ್ತಾಡಿದ್ದರು. ಕಾಲೇಜು ಮುಗಿದ ಬಳಿಕ ಆಶಿಕ್‌ ಮಂಗಳೂರಿನಲ್ಲಿ ಅಕೌಂಟೆಂಟ್‌ ಆಗಿ ನೌಕರಿಗೆ ಸೇರಿದ್ದರು. ಅನಂತರ ಯುವತಿ ಆಶಿಕ್‌ನಿಂದ ದೂರವಾಗತೊಡಗಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು ಎನ್ನಲಾಗಿದೆ. ನಂಬಿಸಿ ಮೋಸ ಮಾಡುತ್ತಿದ್ದೀಯಾ ಎಂದು ಕಣ್ಣೀರು ಹಾಕಿದ ಪ್ರೇಮಿಗೆ, ನೀನು ಸತ್ತರೆ ನಿನ್ನ ಹೆಣದ ಕೂದಲು ಕೀಳಲು ಬರುತ್ತೇವೆ ಎಂದು ಯುವತಿ ಅಮಾನವೀಯವಾಗಿ ಉತ್ತರಿಸಿದ್ದಾಳೆ ಎಂಬ ಅಂಶ ಈಗ ಪೊಲೀಸ್ ದೂರಿನಲ್ಲಿ ದಾಖಲಾಗಿದೆ.























































 
 

​ಆಶಿಕ್ ಅಳುತ್ತಾ ತನ್ನ ನೋವನ್ನು ಹೇಳಿಕೊಂಡಾಗ ಯುವತಿ ಕನಿಷ್ಠ ಮಾನವೀಯತೆಯನ್ನೂ ತೋರದೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾಳೆ. ನೀನು ಎಲ್ಲಾದರೂ ಹೋಗಿ ಸಾಯಿ, ನಾನು ಮತ್ತು ನನ್ನ ಗೆಳೆಯರು ನಿನ್ನ ಶವದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಆಶಿಕ್‌ ಯುವತಿಗೆ ಕರೆ ಮಾಡಿದ್ದು, ಇದರಲ್ಲಿ ಈ ಅಂಶಗಳು ಪತ್ತೆಯಾಗಿವೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಲ್ಲದೆ, ಸಾವಿನ ನಂತರ ಶವಕ್ಕೆ ಅವಮಾನ ಮಾಡುವ ರೀತಿಯಲ್ಲಿ ಆಡಿರುವ ಮಾತುಗಳು ಈಗ ತನಿಖೆಯ ಪ್ರಮುಖ ಅಂಶವಾಗಿದೆ. ಈ ಕೃತ್ಯದಲ್ಲಿ ಯುವತಿಯ ಗೆಳೆಯರ ಪಾತ್ರವೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top