ಸುಳ್ಯದಲ್ಲಿ ಕಲ್ಲಡ್ಕದ ಯುವಕ ನೇಣಿಗೆ ಶರಣು

ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ.

ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.























































 
 

ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸುಳ್ಯದ ಸರ್ಕಾರ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.

error: Content is protected !!
Scroll to Top