ಪುತ್ತೂರು: ಪಾಣಾಜೆ ಗ್ರಾಮದ ಚಂದ್ರಗಿರಿ ಎಂಬಲ್ಲಿರುವ ಕೃಷಿಕ ಗಣೇಶ್ ಭಟ್ ಎಂಬವರ ತೋಟದಲ್ಲಿ ಮೇಯಲು ಬಿಟ್ಟ ದನವು ಕಾಣೆಯಾಗಿದ್ದು, ಎರಡು ದಿನದಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಹಸುವನ್ನು ಗೋ ಬಕ್ಷಕರು ಮಾಂಸಕ್ಕಾಗಿ ಕದ್ದು ಕೊಂಡೋಯ್ದಿರುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದ್ದು ಈ ಕುರಿತು ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
ಪಾಣಾಜೆಯಲ್ಲಿ ನಿರಂತರ ಅಕ್ರಮ ಗೋ ಸಾಗಟದ ಹಿನ್ನೆಲೆಯಲ್ಲಿ ಪೆರ್ನೆಯಲ್ಲಿ ಒಂದು ವಾರದ ಹಿಂದೆ ನಡೆದಂತಹ ರೀತಿಯಲ್ಲಿ ಇದು ಕೂಡ ನಡೆದಿರಬಹುದೆಂದು ಶಂಕೆಯು ಸಾರ್ವಜನಿಕರಲ್ಲಿದ್ದು ತಕ್ಷಣ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂದಿಸಬೇಕು.
ಇಲ್ಲದಿದ್ದಲ್ಲಿ ಪಾಣಾಜೆಯಲ್ಲಿ ರೈತ ಬಂಧುಗಳು ಮತ್ತು ಗೋ ಪ್ರೇಮಿಗಳ ನೇತೃತ್ವದಲ್ಲಿ ಗೋರಕ್ಷಣೆಗಾಗಿ ಬ್ರಹತ್ ಜನಾಗ್ರಹ ಚಳುವಳಿ ನಡೆಯಲಿದೆ ಎಂದು ಪುತ್ತಿಲ ಪರಿವಾರ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
























