ಪುತ್ತೂರು: ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಕನಾರ್ಟಕ ಕಟ್ಟಡ ಕಾರ್ಮಿಕರ ಸಂಘ ಪುತ್ತೂರು ಘಟಕದ ವತಿಯಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರು ದಿನ ನಿತ್ಯದ ದುಡಿಮೆಯಿಂದಲೇ ಕಾರ್ಮಿಕರು ಮತ್ತು ಅವಲಂಬಿತರು ಜೀವನ ನಡೆಸುತ್ತಿದ್ದು ಪ್ರಸ್ತುತ ಕೆಂಪು ಕಲ್ಲು ಮತ್ತು ಮರುಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗದಿರುವುದರಿಂದ ಬಡ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ನಿತ್ಯ ಕೆಲಸವನ್ನೇ ನಂಬಿ ಜೀವನ ನಡೆಸುವ ಕಾರ್ಮಿಕರಿಗೆ ಪ್ರಸ್ತುತ ಕಲ್ಲು ಮತ್ತು ಮರುಳು ಸಿಗದಿರುವುದರಿಂದ ಕೆಲಸವಿಲ್ಲದಂತಾಗಿದೆ.ಅದರ ಬಗ್ಗೆ ತಾವುಗಳು ಪರಿಶೀಲನೆ ನಡೆಸಿ ಕೆಂಪು ಕಲ್ಲು ಮತ್ತು ಮರುಳು ಶೀಘ್ರವಾಗಿ ಸಿಗುವಂತೆ ವ್ಯವಸ್ಥೆಗೊಳಿಸಬೇಕು. ಹಾಗೂ ಸರಕಾರದ ವತಿಯಿಂದ ತೆರಿಗೆ ಹೆಚ್ಚಳ ಮಾಡಲಾಗಿದ್ದು ಇದನ್ನು ಕೂಡಲೇ ಕಡಿಮೆಗೊಳಿಸಬೇಕು ಮತ್ತು ಕೆಂಪು ಕಲ್ಲಿಗೆ ತೆರಿಗೆ ಮತ್ತು ಪರವಾನಿಗೆ ದರ ಹೆಚ್ಚಳ ಮಾಡಿರುವುದನ್ನು ಕೂಡಲೇ ಕಡಿಮೆಗೊಳಿಸಿ ಕಾರ್ಮಿಕರಿಗೆ ಮತ್ತು ಬಡ ವರ್ಗದವರಿಗೆ ಆಗುತ್ತಿರುವ ತೊಂದರೆಯನ್ನು ಕೂಡಲೇ ಸರಿಪಡಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘದ ಸಲಹೆಗಾರ ಕೆ.ಜಯರಾಮ ಕುಲಾಲ್, ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ ಮುಕ್ವೆ , ಕಾರ್ಯಾಧ್ಯಕ್ಷ ಎಮ್. ಶೇಷಪ್ಪ , ಪ್ರಧಾನ ಕಾರ್ಯದರ್ಶಿ ಎಮ್. ಮೋಹನ ಆಚಾರ್ಯ, ಕೋಶಾಧಿಕಾರಿ ಈಶ್ವರ ನಾಯ್ಕ ಅಜಲಾಡಿ, ಉಪಾಧ್ಯಾಕ್ಷ ವಿಶ್ವನಾಥ ಬೆಳ್ಳಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮಚ್ಚಿಮಲೆ, ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
























