ಹಿಂದುತ್ವದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | ಹೇರ್‌ಸ್ಟೈಲ್ ಬಗ್ಗೆ ಟೀಕೆ ಮಾಡಿದವರಿಗೆ ಸಚಿವರು ಕೊಟ್ಟ ಉತ್ತರ ಹೇಗಿತ್ತು?

ಕೊಪ್ಪಳ: ಹಿಂದುತ್ವದ ಕುರಿತು ಮಾತನಾಡುವವರು ಬಾಯಿ ಮುಚ್ಚಿಕೊಂಡಿರಲಿ. ಹಿಂದುತ್ವ ಎನ್ನುವವರಿಗೆ ಗೊತ್ತಿರುವುದು ಬದನೆಕಾಯಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

ಬಂಗಾರಪ್ಪ ಅವರು ಈ ಹಿಂದೆ ಹಳ್ಳಿಗಳಲ್ಲಿ ದೇಗುಲಗಳಲ್ಲಿ ಆರ್ಥಿಕ ಬಲ ತುಂಬಲು ಆರಾಧನಾ ಯೋಜನೆ ಆರಂಭ ಮಾಡಿದ್ದರು. ಈಗ ಅಜೀಂ ಪ್ರೇಮ್‌ಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಆದರೆ ಇವರ್ಯಾರೂ ಜಾತಿ ನೋಡಿಲ್ಲ. ಮಕ್ಕಳಿಗೆ ಬಾಳೆಹಣ್ಣು, ಮೊಟ್ಟೆ ನೀಡಿದ್ದಾರೆ ಎಂದಿದ್ದಾರೆ. ಹಾಗೆಯೇ ಗ್ಯಾರಂಟಿ ಯೋಜನೆಗಳಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಡತನ ನಿರ್ಮಾಲನೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ನನ್ನ ಕುರಿತು, ನನ್ನ ಹೇರ್‌ಸ್ಟೈಲ್ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಕೇಳಿದ್ದೇನೆ. ನಾನು ಕೇರ್ ಮಾಡಿಲ್ಲ. ನನ್ನ ಹೇರ್‍‌ಸ್ಟೈಲ್ ಅನ್ನು ಮಕ್ಕಳು ಅನುಸರಿಸುತ್ತಾರೆ ಎಂದು ಹೇಳಿದರು. ಮಕ್ಕಳು ದ್ವಿತೀಯ ಪಿಯುಸಿ‌ ಬಳಿಕ ಅನುಸರಿಸಲಿ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ವಿರೋಧ ಪಕ್ಷಗಳ ಟೀಕೆಗೆ ಬಗ್ಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.





















































 
 
error: Content is protected !!
Scroll to Top