ಪುತ್ತೂರು: ಪುತ್ತೂರು ಪೇಟೆಯ ಹಲವು ಭಾಗದಲ್ಲಿ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಅಪಾಯದ ಸ್ಥಿತಿಯಲ್ಲಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪುತ್ತೂರು ನಗರಸಭೆಗೆ ಮನವಿ ಮಾಡಿದೆ.
ಈಗಾಗಲೇ ದ್ವಿಚಕ್ರ ವಾಹನ ಸವಾರರು ಅಪಘಾತ ಸಂಭವಿಸಿ ಬಿದ್ದಿರುತ್ತಾರೆ. ಅಲ್ಲದೆ ಜನರಿಗೆ ನಡೆದಾಡಲು ಪುಟ್ ಪಾತ್ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅಪಾಯ ಸ್ಥಿತಿಯಲ್ಲಿರುವ ಫುಟ್ ಪಾತ್ ಗಳನ್ನು ಸರಿಪಡಿಸಬೇಕಾಗಿದೆ ಎಂದು ನಗರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮನವಿ ಮಾಡಲಾಯಿತು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು. ಅಧ್ಯಕ್ಷ ಮನವಿ ನೀಡುವ ಸಂದರ್ಭ ಸಂಘದ ಅಧ್ಯಕ್ಷ ಪಿ ವಾಮನ್ ಪೈ , ಉಪಾಧ್ಯಕ್ಷರಾದ ರವಿಕೃಷ್ಣ ಡಿ ಕಲ್ಲಾಜೆ, ರಮೇಶ್ ಪ್ರಭು, ಪ್ರಧಾನ ಕಾರ್ಯದರ್ಶಿ ಮನೋಜ್ .ಟಿ .ವಿ , ಕೋಶಾಧಿಕಾರಿ, ಪಿ ಉಲ್ಲಾಸ ಪೈ ಹಾಗೂ ಕಾರ್ಯದರ್ಶಿ ನೌಶದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
























