ಬಿಜೆಪಿ ನಾಯಕರೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರದ ಪಾಟ್ನಾದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಗುಂಡೇಟಿನಿಂದ ಮೃತಪಟ್ಟವರು.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ನಲ್ಲಿ ನಡೆದಿದೆ. ಶ್ಯಾಮ್ ಸುಂದರ್ ಅವರು ದೇವಸ್ಥಾನದಿಂದ ಹೊರಗೆ ಬಂದು ಮನೋಜ್ ಕಮಾಲಿಯಾ ಗೇಟ್ ಬಳಿ ಬಂದು, ಯಾರೊಂದಿಗೋ ಮಾತನಾಡುತ್ತಿದ್ದರು. ಅಷ್ಟರಲ್ಲಿ ಬೈಕಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಬಳಿಕ ಮೊಬೈಲ್ ಕಿತ್ತುಕೊಂಡು ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
























