ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 42ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಭಾಗವಾಗಿ ಎರಡನೇ ದಿನ ಧಾರ್ಮಿಕ ಉಪನ್ಯಾಸ, ಮನರಂಜನೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಡಾ.ಹಂದಾಡಿ ಮಾಧವ ಭಟ್, ಎಲ್ಲರಿಗೂ ಸಲ್ಲುವವ ಶ್ರೀ ಗಣೇಶ. ಏಕೆಂದರೆ ಆತ ಧಾರ್ಮಿಕ ಚೌಕಟ್ಟನ್ನು ಮೀರಿ ಬೆಳೆದವ. ಆತನು ಆದಿ ಪೂರ್ವದಲ್ಲಿಯೇ ಸ್ವೀಕೃತವಾದವ. ಸಂಘಟನೆಯಲ್ಲಿ ಮುಖ್ಯವಾದುದು ಎಂದರೆ “Religion is what we do in privacy” ಎಂಬ ತತ್ತ್ವದ ಅನುಷ್ಠಾನವಾಗಬೇಕಾದುದು. ಇದರರ್ಥ ಏನು ಎಂದರೆ ಅತಿ ಪರಿಚಯದ್ದು ಆದರೂ ಅದನ್ನು ಶ್ರದ್ಧೆಯಿಂದ ಪಾಲಿಸುವುದು. ನಮ್ಮಲ್ಲಿ ಕಾರಕ, ಪ್ರೇರಕ, ಪಾಲಕ ಮತ್ತು ಅನುಮೋದಕರು ಸಮನಾಗಿ ಪಾಲು ವಹಿಸಿದಾಗ ಧರ್ಮಕ್ಕೆ ಅರ್ಥ ಬರುತ್ತದೆ. ನೈಮಿತ್ತಿಕ ಕರ್ತವ್ಯವನ್ನು ಸರಿಯಾಗಿ ಮಾಡಿದರೆ ಅದಕ್ಕಿಂತ ಮೀರಿದ ಧರ್ಮವಿಲ್ಲ ಎಂದು ಹೇಳಿದರು.

ಸವಣೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಡಾ. ಸಂದೇಶ್
ಮುಂದಿನ ವರ್ಷದ 43ನೆ ವರ್ಷ ಶ್ರೀ ಗಣೇಶೋತ್ಸವಕ್ಕೆ ಸವಣೂರಿನ ಹಿರಿಯ ಉದ್ಯಮಿ ಎನ್. ಸುಂದರ ರೈ ನಡುಮನೆ ಅವರು ಸುಮಾರು ಎರಡು ಲಕ್ಷ ರೂಪಾಯಿಗಳ ಮೊತ್ತದ ಬೆಳ್ಳಿಯ ಕಿರೀಟ ನೀಡುವುದಾಗಿ ಘೋಷಿಸಿದರು.
ಸಮಿತಿಯ ಗೌರವಾಧ್ಯಕ್ಷ ಸಹಕಾರ ರತ್ನ ಸವಣೂರು ಸೀತಾರಾಮ ರೈ ಎಲ್ಲರನ್ನೂ ಸ್ವಾಗತಿಸಿದರು. ಮೆದು ಶಿವರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಎನ್. ಸುಂದರ ರೈ ನಡುಮನೆ, ಪಿ. ಡಿ. ಗಂಗಾಧರ್ ರೈ ದೇವಸ್ಯ, ಸುಧಾಕರ ರೈ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಕಂಪ್ಯೂಟರ್ ಶಿಕ್ಷಕಿ ನಮಿತಾ ಪ್ರಾರ್ಥಿಸಿದರು. ವಿದ್ಯಾರಶ್ಮಿ ವಿದ್ಯಾಲಯ. ಪದವಿ ಪೂರ್ವ ಮತ್ತು ಪದವಿ ವಿಭಾಗಗಳ ವತಿಯಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.
























