ಗೇರುಕಟ್ಟೆ : ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ 52ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಶಿವಭಕ್ತ ಪುರುಷಮೃಗ’ ತಾಳಮದ್ದಳೆ ಗೇರುಕಟ್ಟೆ ಮಂಜಲಡ್ಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಸಭಾಭಾವನ ದಲ್ಲಿ ಜರಗಿತು.
ಭಾಗವತರಾಗಿ ಮಧೂರು ವಿಷ್ಣು ಪ್ರಸಾದ್ ಕಲ್ಲೂರಾಯ ಗೇರುಕಟ್ಟೆ.
ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ,
ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ಪುರುಷಮೃಗ), ರಾಘವೇಂದ್ರ ಆಸ್ರಣ್ಣ ನಾಳ (ಹನುಮಂತ ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀಕೃಷ್ಣ), ರಾಘವ ಪೂಜಾರಿ ಮೆದಿನ (ಧರ್ಮರಾಯ ), ರಾಘವ. ಎಚ್. ಗೇರುಕಟ್ಟೆ (ಭೀಮ 2), ಶಿವಾನಂದ ಭಂಡಾರಿ ಪಣೆಜಾಲು (ಭೀಮ 1) ಭಾಗವಹಿಸಿದ್ದರು.
ಕೆ.ಹರಿಪ್ರಸಾದ್ ಭಟ್ ಗೇರುಕಟ್ಟೆ ಕಾರ್ಯಕ್ರಮ ಸಂಯೋಜಿಸಿದ್ದರು. ದಿವಾಕರ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಪೆರ್ಮುಡ ವಂದಿಸಿದರು.
























