ಪಹಲ್ಗಾಮ್ ದಾಳಿಕೋರರಿಗೆ ಆಹಾರ ನೀಡಿದ್ದರಾ ಸ್ಥಳೀಯರು?: ಎನ್‌ಐಎ ಚಾರ್ಜ್‌ಶೀಟ್‌ನಲ್ಲೇನಿದೆ ಗೊತ್ತಾ?

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರಗಾಮಿಗಳಿಗೆ ಅಲ್ಲಿನ ಸ್ಥಳೀಯರೇ ನೆರವು ನೀಡಿರುವ ಬಗ್ಗೆ ಎನ್‌‌ಐಎ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಎನ್‌ಐಎ ಸಲ್ಲಿಸಿದ ಆರೋಪ ಪಟ್ಟಿ ಮಾಧ್ಯಮಗಳಿಗೂ ‌ಲಭ್ಯವಾಗಿದ್ದು, ಪಹಲ್ಗಾಮ್ ದಾಳಿಯ ಹಿಂದಿನ ದಿನ ಸ್ಥಳೀಯ ಕುದುರೆ ಸವಾರರಾದ ಬಶೀರ್ ಅಹ್ಮದ್ ಮತ್ತು ಪರ್ವೈಜ್ ಅಹ್ಮದ್ ಎಂಬವರು ಮೂವರು ಉಗ್ರರಿಗೆ ತಮ್ಮ ಮನೆಯಲ್ಲೇ ಆಹಾರ ನೀಡಿದ್ದಾರೆ. ಸ್ಥಳೀಯರಿಂದಲೇ ಅಮರನಾಥ ಯಾತ್ರಿಗಳು ಮತ್ತು ಭದ್ರತಾ ಪಡೆಗಳ‌ ನಿಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾಗಿಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಹಾರ ಸೇವಿಸಿದ ಉಗ್ರರು ಬಶೀರ್ ಅಹ್ಮದ್‌ಗೆ 3000 ರೂ. ಹಣ ನೀಡಿದ್ದರು. ಸೂಕ್ತ ಸಾಕ್ಷ್ಯಗಳನ್ನು ಪರಿಗಣಿಸಿ ಉಗ್ರರಿಗೆ ‌ನೆರವು ನೀಡಿದ ಈ ಇಬ್ಬರು ಸ್ಥಳೀಯ ಸಹಚರರನ್ನು ಕಳೆದ ವರ್ಷ ಬಂಧಿಸಿರುವುದಾಗಿ ಎನ್‌ಐಎ ತಿಳಿಸಿದೆ.





















































 
 

ಬಂಧಿತ ಉಗ್ರರ ಇಬ್ಬರು ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಪಹಲ್ಗಾಮ್ ದಾಳಿಕೋರರು ಜಿಹಾದ್ ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದ ವಿಷಯ ಬಹಿರಂಗವಾಗಿದೆ. ಉಗ್ರರು ಪಂಜಾಬಿ ಮತ್ತು ಉರ್ದು ಭಾಷೆ ಮಾತನಾಡುತ್ತಿದ್ದರು ಎಂದು ರಿಪೋರ್ಟ್‌ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

error: Content is protected !!
Scroll to Top