ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಕಲ್ಬುರ್ಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ 13 ಪ್ರಕರಣಗಳನ್ನು ಸಂಪುಟ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು ಇದನ್ನು ಬಿಜೆಪಿ ಖಂಡಿಸಿದೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಬಹುಸಂಖ್ಯಾತರ ಧಾರ್ಮಿಕ ಭಾವನೆ ಮತ್ತು ನಾಡಿನ ಸುರಕ್ಷತೆಯನ್ನು ಮುಸ್ಲಿಂ ಓಟ್‌ಬ್ಯಾಂಕ್‌ಗೆ ಅಡವಿಟ್ಟಿರುವ ಕಾಂಗ್ರೊಸಿನ ಜನವಿರೋಧಿ ಧೋರಣೆಯನ್ನು ಕರುನಾಡ ಜನತೆ ಎಂದಿಗೂ ಕಾಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ ವೋಟ್‌ ಬ್ಯಾಂಕ್ ಓಲೈಕೆಯ ಕೀಳು ರಾಜಕೀಯ ಮತ್ತು ಅಲ್ಪಸಂಖ್ಯಾತರ ತುಷ್ಟಿಕರಣದ ಪರಮಾವಧಿಯ ನಿರ್ಲಜ್ಜ ಪ್ರದರ್ಶನಕ್ಕೆ ರಾಜ್ಯ ಈಗ ಸಾಕ್ಷಿಯಾಗಿದೆ. ಕನಿಷ್ಠ ಜವಾಬ್ದಾರಿಯೂ ಇಲ್ಲದೆ, ನೈತಿಕತೆ, ಗೌರವಗಳೆಲ್ಲವನ್ನೂ ಗಾಳಿಗೆ ತೂರಿ, ಸಭ್ಯತೆಯ ಎಲ್ಲಾ ಮಿತಿಗಳನ್ನೂ ಈ ತುಘಲಕ್ ಕಾಂಗ್ರೆಸ್ ಸರ್ಕಾರ ದಾಟಿದೆ ಎಂದು ಟೀಕಿಸಿದ್ದಾರೆ.





















































 
 

ಕಲಬುರಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪವಿತ್ರ ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ, ದಾರ್ಷ್ಟ್ಯ ಮೆರೆದಿದ್ದಲ್ಲದೆ, ಆ ಸಮಯದಲ್ಲಿ ಅಂದಿನ ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ಕಲ್ಲು ತೂರಾಟ ನಡೆಸಿದ್ದ ಘೋರ ಅಪರಾಧ ಮತ್ತು ಹೀನಾಯ ಕೋಮು ಗಲಭೆಯ 13 ಪ್ರಕರಣಗಳನ್ನು ಈ ಸರ್ಕಾರ ವಾಪಸ್ ಪಡೆದಿರುವುದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರೇ ಸ್ವತಃ ಈ ದುರುಳ ದಗಾಕೋರರ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸು ಮಾಡಿರುವ ವರದಿ ಮತ್ತಷ್ಟು ಕಳವಳಕಾರಿ. ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ! ಇದು ನಿಜಕ್ಕೂ ದುರ್ದೈವದ ಸಂಗತಿ. ಕೊಳಕು ಓಲೈಕೆಗಾಗಿ, ಸಮಾಜಘಾತುಕ ಶಕ್ತಿಗಳಿಗೆ, ಅಪರಾಧಿಗಳಿಗೆ ಕ್ಲೀನ್ ಚಿಟ್ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ, ಪರಮೇಶ್ವರ ಹಾಗೂ ಶಿವಕುಮಾ‌ರ್ ಅವರೇ, ಹೆಸರಿನಲ್ಲಿ ‘ಶಿವ’ ಇಟ್ಟುಕೊಂಡು, ಕಾರ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡುವ ಈ ಮತಬ್ಯಾಂಕ್ ರಾಜಕಾರಣವನ್ನು ನೀವು ಸಮರ್ಥಿಸಿಕೊಳ್ಳಬಹುದು. ಆದರೆ ಶಿವನು ಇದನ್ನು ಕ್ಷಮಿಸುವನೇ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ‌ಮೂಲಕ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ‌ತೆಗೆದುಕೊಂಡಿದೆ.

error: Content is protected !!
Scroll to Top