ಮಂಗಳೂರು: ಸರ್ಕಾರಿ ಬಸ್ ಚಾಲಕರೊಬ್ಬರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರ್ಕಾರಿ ಬಸ್ಸು ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿತ್ತು. ಈ ವೇಳೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಳಚ್ಚಿಲ್ ಜಂಕ್ಷನ್ನಲ್ಲಿ ಕಾರು ಚಾಲಕ, ಬಸ್ ಚಾಲಕ ಪಿ. ಜಯರಾಮ್ ಅವರಿಗೆ ನಿಂದಿಸಿ, ಹಲ್ಲೆ ಮಾಡಿರುವುದಾಗಿದೆ.
























