ಉಪ್ಪಿನಂಗಡಿ: ಬೆಳ್ತಂಗಡಿಯ ಕರಾಯ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹುಸೇನ್ ಎಂಬವರಿಗೆ ಸೇರಿದ ಜಾಗದಲ್ಲಿ ಮರಳು ಅಕ್ರಮ ದಾಸ್ತಾನು ಇರಿಸಲಾಗಿತ್ತು. ಉಪ್ಪಿನಂಗಡಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಕುಪ್ಪೆಟ್ಟಿ ಹೊಳೆಯಿಂದ ಅಕ್ರಮವಾಗಿ ಸುಮಾರು ಎರಡು ಟನ್ಗಳಷ್ಟು ಮರಳು ಸಂಗ್ರಹಿಸಿ ಇಡಲಾಗಿತ್ತು. ಮರಳನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
























