ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣ: ರೂವಾರಿ ನಿದಾಖಾನ್ ಕೊನೆಗೂ ಅರೆಸ್ಟ್

25 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಕೊಂಡಿದ್ದ ಚಾಲಾಕಿ

ಮುಂಬೈ: ನಾಸಿಕದಲ್ಲಿರುವ TCS ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ, ಮತಾಂತರ ಕೃತ್ಯದ ಕಿಂಗ್ ಪಿನ್ ನಿದಾ ‌ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಿದಾ ಖಾನ್ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿತ್ತು‌. ಆಕೆಯ ವಿರುದ್ಧ ಎಫ್‌ಐ‌ಆರ್ ದಾಖಲಾಗುತ್ತಿದ್ದ ಹಾಗೆಯೇ ನಾಪತ್ತೆಯಾಗಿದ್ದಳು. ಆಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಹಾ ಕೋರ್ಟ್ ವಜಾ ಮಾಡಿತ್ತು.





















































 
 

ಆಕೆ ಕಳೆದ ನಾಲ್ಕು ದಿನಗಳಿಂದ ನರೇಂಗಾವ್‌ನ ಕೈಸರ್ ‌ಕಾಲನಿಯ ಫ್ಲ್ಯಾಟ್‌ನಲ್ಲಿ ತನ್ನ ಪೋಷಕರು, ಸಹೋದರ, ಚಿಕ್ಕಮ್ಮನ ಜೊತೆ ಇದ್ದುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಂಧನಕ್ಕೆ ಎರಡು ದಿನಗಳ ಪೂರ್ವದಲ್ಲೇ ಪೊಲೀಸರು ಆಕೆಯ ಫ್ಲ್ಯಾಟ್‌ನ ಮೇಲೆ ತೀವ್ರ ನಿಗಾ ಇರಿಸಿದ್ದರು ಎಂದು ತಿಳಿದು ಬಂದಿದೆ.

ಸುಮಾರು 25 ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್ ಅವರನ್ನು ನಾಸಿಕ್ ಎಸ್ ಐಟಿ ಹಾಗೂ ಛತ್ರಪತಿ ಸಂಭಾಜಿನಗರ್ ಪೊಲೀಸ್ ಕಮಿಷನರೇಟ್, ಕ್ರೈಮ್ ಬ್ರಾಂಚ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಚಾರದ ಬಗ್ಗೆ ಎಸ್‌ಐಟಿ ಅಧಿಕೃತ ಹೇಳಿಕೆ ನೀಡಿದ್ದು, ‘ದೇವಲಾಲಿ ಕ್ಯಾಂಪ್ ಪೊಲೀಸ್ ಠಾಣೆ ಅಪರಾಧ ನೋಂದಣಿ ಸಂಖ್ಯೆ 156/26ರಲ್ಲಿ ಬೇಕಾಗಿದ್ದ ಆರೋಪಿ ನಿದಾ ಖಾನ್ ಳನ್ನು ಛತ್ರಪತಿ ಸಂಭಾಜಿನಗರದಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 43(5) ಅನ್ವಯ ನಿದಾ ಖಾನ್ ಳನ್ನು ಛತ್ರಪತಿ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಜಡ್ಜ್ ನಿವಾಸದಲ್ಲಿ ಆರೋಪಿ ಖಾನ್ ಳನ್ನು ಹಾಜರುಪಡಿಸಿ, ಟ್ರಾನ್ಸಿಟ್ ರಿಮಾಂಡ್ ಮೂಲಕ ವಶಕ್ಕೆ ಪಡೆದು ನಾಸಿಕ್‌ಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top