ಕಡಬ: ಹಿಂದೂ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಮತಾಂತರದ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ನೀಡಿದ ಮಾಹಿತಿಯ ಅನ್ವಯ ಐತ್ತೂರಿನ ಮನೆಯೊಂದರ ಮೇಲೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ.
ಐತ್ತೂರಿನ ಜೋಸೆಫ್ ಎಂಬಾತನ ಮನೆಯಲ್ಲಿ ಬೆಂಗಳೂರು ಮೂಲದ ಸುಮಾರು 15 ಕ್ಕೂ ಅಧಿಕ ಜನ ಮಹಿಳೆಯರು, ಪುರುಷರು ಮತ್ತು ಮಕ್ಕಳು ತಂದಿರುವ ಸಂಗತಿ ಪೊಲೀಸ್ ದಾಳಿಯ ವೇಳೆ ಬಯಲಾಗಿದೆ.
ಜೋಸೆಫ್ ಮನೆಯಲ್ಲಿ ಮತಾಂತರ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮಾಹಿತಿಯನ್ವಯ ದಾಳಿ ನಡೆದಿದೆ. ರಾತ್ರಿ ಸಮಯವಾದ್ದರಿಂದ ಪೊಲೀಸರು ಮನೆಯೊಳಗೆ ಪ್ರವೇಶಿಸದೆ ಹೊರಭಾಗದಲ್ಲೇ ಕಾವಲು ಕಾದು, ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ.
ಪ್ರಕರಣದ ಬೆಳವಣಿಗೆಯ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರೆಯಬೇಕಿದೆ.
























