ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಕಾರೊಂದು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ.
ಕಾರು ಪತ್ತೆಯಾದ ಕೊಂಚ ದೂರದಲ್ಲೇ ಪುರುಷನೊಬ್ಬನ ಬಟ್ಟೆ, ಮೊಬೈಲು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿದ್ದಾರೆ.
ಕಾರಿನಲ್ಲಿ ಪತ್ತೆಯಾದ ಶವ ಸರೋಜಾ ಎಂಬ ಕನ್ನಡ ಉಪನ್ಯಾಸಕಿಯದ್ದಾಗಿದ್ದು, ದೇವನಹಳ್ಳಿಯ ಪಿಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾಳ ಅನೈತಿಕ ಸಂಬಂಧದ ಪ್ರಿಯಕರ ರಾಮಾಂಜಿನಪ್ಪ ಎಂಬಾತ ಆಕೆಯನ್ನು ಪೆಟ್ರೋಲ್ ಸುರಿದು ಸುಟ್ಟು, ಬಳಿಕ ಸ್ಥಳದಿಂದ ಪರಾರಿಯಾಗಿ ಅದೇ ದಿನ ರಾತ್ರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸರೋಜಾಗೆ ಮದುವೆಯಾಗಿ ಪತಿ ಮತ್ತು ಮಗನೂ ಇದ್ದಾನೆ. ಆಕೆಯ ಪತಿ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಆಕೆ ಪತ್ನಿಯಿಂದ ದೂರವಾಗಿದ್ದ ರಮಾಂಜಿನಪ್ಪ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಕೊಲೆಯಾಗುವ ದಿನ ಆಕೆ ಹಲ್ಲು ನೋವೆಂದು ಔಷಧ ತರಲು ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಬಳಿಕ ಪ್ರೇಮಿಯ ಜೊತೆಗೆ ಕಾರಿನಲ್ಲಿ ಹೋಗಿದ್ದಾಳೆ.
ಯಾವುದೋ ವಿಚಾರಕ್ಕೆ ಸರೋಜಾ ಮತ್ತು ರಾಮಾಂಜಿನಪ್ಪನ ನಡುವೆ ಜಗಳವಾಗಿದ್ದು, ಆಕೆಯನ್ನು ಸುಟ್ಟು ಕಾರಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಕಾರಿನ ಮಾಲೀಕರಿಗೆ ಕಾರಿಗೆ ಬೆಂಕಿ ಬಿದ್ದಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದ್ದು, ತಕ್ಷಣವೇ ಅವರು ಕಾರನ್ನು ಹುಡುಕಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಕಾರು ಮಹಿಳೆ ಸಮೇತ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರಿನ ಮಾಲೀಕರು ರಾಮಾಂಜನಪ್ಪನ ವಿರುದ್ಧ ಕಾರು ದುರುಪಯೋಗ ಮಾಡಿಕೊಂಡ ಬಗ್ಗೆ ದೂರು ದಾಖಲಿಸಿದ್ದಾರೆ. ಆದರೆ ಅದೇ ರಾತ್ರಿ ರಾಮಾಂಜಿನಪ್ಪ ಸಹ ಪಾಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲಿ ಆತನ ವೋಟರ್ ಐಡಿ ಪತ್ತೆಯಾಗಿದೆ.
























